ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಅವರಿಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ

ಚಿಕ್ಕಬಳ್ಳಾಪುರ: ಬಾಗೇಪಲ್ಲಿ ಕ್ಷೇತ್ರದ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ  ಅವರಿಂದು ಬೆಳಗ್ಗೆ  ಹೃದಯಾಘಾತದಿಂದ ನಿಧನರಾಗಿದ್ದಾರೆ.  ಅವರಿಗೆ  73 ವರ್ಷ ವಯಸ್ಸಾಗಿತ್ತು. ಜಿ.ವಿ.ಶ್ರೀರಾಮರೆಡ್ಡಿ ಅವರು ಸಿಪಿಎಂ ಅಭ್ಯರ್ಥಿಯಾಗಿ ಬಾಗೇಪಲ್ಲಿ ಕ್ಷೇತ್ರದಿಂದ 1994 ರಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವ  ಮೂಲಕ ಮೊದಲಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು.ನಂತರ 2004 ರಿಂದ 2009 ರವರೆಗೆ ಸಿಪಿಎಂ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಎರಡು ಬಾರಿ ಕ್ಷೇತ್ರದಲ್ಲಿ ಶಾಸಕರಾಗಿ ಹಲವು  ಕಾಮಗಾರಿಗಳನ್ನು  ಕ್ಷೇತ್ರಕ್ಕೆ ತಂದು ಅಭಿವೃದ್ಧಿಗೆ ಕಾರಣರಾಗಿದ್ದರು.

ಸುಮಾರು ಐದು ದಶಕಗಳ ಕಾಲ ಸಿಪಿಎಂನ‌ ಕಾರ್ಯಕರ್ತರಾಗಿ ಸುದೀರ್ಘ ಸೇವೆ ಸಲ್ಲಿಸಿ ಹಲವು ಹೋರಾಟ, ಚಳುವಳಿಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಈ ಭಾಗದ ದೀನದಲಿತರು, ಕೃಷಿ ಕೂಲಿಕಾರ್ಮಿಕರು ಮತ್ತು ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದ್ದರು.ಅವಿವಾಹಿತರಾಗಿದ್ದ ಅವರು ಇಡೀ ಜೀವಮಾನವನ್ನು ಪ್ರಗತಿಪರ ಚಟುವಟಿಕೆಗಳು, ಹೋರಾಟಗಳಲ್ಲಿ‌ ಭಾಗವಹಿಸಿ ಅದರಲ್ಲಿಯೇ ಬದುಕು ಸವೆಸಿದ್ದರು. ಕಳೆದ ಕೆಲವು ವರ್ಷಗಳ ಹಿಂದೆಯಷ್ಟೇ ಸಿಪಿಐಎಂ ನಿಂದ ಹೊರಬಂದು ಪ್ರಜಾ ಸಂಘರ್ಷ ಸಮಿತಿ ಎಂಬ ಹೊಸ ಪಕ್ಷವೊಂದನ್ನು ಕಟ್ಟಿ  ಅದರ ಸಂಚಾಲಕರಾಗಿದ್ದರು. ಮಾಜಿ ಶಾಸಕ‌ ಜಿ.ವಿ.ಶ್ರೀರಾಮರೆಡ್ಡಿ ಅವರ ಅಗಲಿಕೆಯಿಂದ ಅವರ ಅಪಾರ ಅಭಿಮಾನಿಗಳು, ಬೆಂಬಲಿಗರು, ಕಾರ್ಯಕರ್ತರು ಕಂಬನಿ‌ ಮಿಡಿದಿದ್ದಾರೆ. ಅವರ ಪಾರ್ಥಿವ  ಶರೀರವನ್ನು  ಸಾರ್ವಜನಿಕರ ದರ್ಶನಕ್ಕಾಗಿ ಬಾಗೇಪಲ್ಲಿಯ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಇಡಲಾಗಿತ್ತು. ಚಿಕ್ಕಬಳ್ಳಾಪುರ ಜಿಲ್ಲೆಯ ನೀರಿನ ಸಮಸ್ಯೆಗಳ ಬಗ್ಗೆ ಅಪಾರ ಜ್ಞಾನ ಮತ್ತು‌ ಕಾಳಜಿಯನ್ನು‌ ಹೊಂದಿದ್ದ ಅವರು, ಶಾಶ್ವತ ನೀರಾವರಿ ಹೋರಾಟವನ್ನು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹುಟ್ಟು ಹಾಕಿದ ಕೀರ್ತಿ ಅವರಿಗೇ ಸಲ್ಲುತ್ತದೆ. ಜಿವಿಎಸ್ ಎಂದೇ ಖ್ಯಾತರಾಗಿದ್ದ ಅವರು ನಿಧನ‌ ಹೊಂದಿರುವುದಕ್ಕೆ ಹಲವು ಗಣ್ಯರು ಸಂತಾಪ. ಸೂಚಿಸಿಸದ್ದಾರೆ.

Leave a Comment

Your email address will not be published. Required fields are marked *

Translate »
Scroll to Top