ಮೊದಲ ಬಾರಿಗೆ ಬೆಂಗಳೂರಿನಲ್ಲಿ ಶ್ರೀ ರಾಮಾಂಜನೇಯರ ಬೃಹತ್ ಪ್ರತಿಮೆಯ ಶಂಕುಸ್ಥಾಪನೆ

63ಅಡಿ ಶ್ರೀ ರಾಮಾಂಜನೇಯರ ಬೃಹತ್ ಪ್ರತಿಮೆಯ ಶಂಕುಸ್ಥಾಪನೆ ಹಾಗೂ ಪ್ರತಿಮೆ ಬ್ಲೂ ಪ್ರಿಂಟ್ ಬಿಡುಗಡೆ  ಕಾರ್ಯಕ್ರಮ

ರಾಜಾಜಿನಗರ ವಿಧಾನಸಭಾ ಕ್ಷೇತ್ರದ, ಶ್ರೀರಾಮಮಂದಿರ ದೇವಸ್ಥಾನದಲ್ಲಿ ಶ್ರೀರಾಮ ಸೇವಾ ಮಂಡಳಿ ವತಿಯಿಂದ 63ಅಡಿ ಶ್ರೀ ರಾಮಾಂಜನೇಯ ಬೃಹತ್ ಪ್ರತಿಮೆಯ ಶಂಕುಸ್ಥಾಪನೆ ಕುರಿತು ಶ್ರೀ ರಾಮ ಸೇವಾ ಮಂಡಳಿ ಅಧ್ಯಕ್ಷರಾದ ಕೆ.ಎಸ್.ಶ್ರೀಧರ್ ರವರು ಮಾಹಿತಿ ನೀಡಿದರು. ಶ್ರೀ ರಾಮ ಸೇವಾ ಮಂಡಳಿ 3ನೇ ಬ್ಲಾಕ್ ರಾಜಾಜಿನಗರ, ಶ್ರೀರಾಮಮಂದಿರ ದೇವಸ್ಥಾನ ಅವರಣದಲ್ಲಿ 63ಅಡಿ ಶ್ರೀ ರಾಮಾಂಜನೇಯರ ಬೃಹತ್ ಪ್ರತಿಮೆಯ ಶಂಕುಸ್ಥಾಪನೆ ಕಾರ್ಯಕ್ರಮವನ್ನು ದಿನಾಂಕ 23-8-2023ರ ಬುಧವಾರ ಸಂಜೆ 4ಗಂಟೆಗೆ ನೇರವೆರಲಿದೆ. ಶ್ರೀ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು ಮತ್ತು  ಸಿದ್ದಗಂಗಾ ಮಠ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಸಿದ್ದಲಿಂಗ ಶ್ರೀಪಾದಂಗಳ ಅಮೃತ ಹಸ್ತದಿಂದ ಶಂಕುಸ್ಥಾಪನೆ

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ  ಕೆ.ಎಸ್.ಈಶ್ವರಪ್ಪ ಮತ್ತು ಮಾಜಿ ಸಚಿವರು, ಶಾಸಕರುಗಳಾದ ಎಸ್.ಸುರೇಶ್ ಕುಮಾರ್, ಕೆ.ಗೋಪಾಲಯ್ಯರವರು ಭಾಗವಹಿಸಿಲಿದ್ದಾರೆ.

ಶ್ರೀ ರಾಮಮಂದಿರ ದೇವಸ್ಥಾನಕ್ಕೆ 75ವರ್ಷಗಳ ಇತಿಹಾಸವಿದೆ ಬೆಂಗಳೂರಿನ ಮೊಟ್ಟಮೊದಲ 63ಅಡಿ ಉದ್ದದ ಶ್ರೀ ರಾಮಾಂಜನೇಯ ಪ್ರತಿಮೆ ಸ್ಥಾಪನೆಗೆ ಶಂಕುಸ್ಥಾಪನೆ ಮಾಡುತ್ತಿರುವುದು ಭಕ್ತರಲ್ಲಿ ಸಂತೋಷ ಉಂಟು ಮಾಡಿದೆ.

ಸರಿಸುಮಾರು ಕೂಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ ಹಾಗೂ 1ವರ್ಷದ ಅವಧಿಯಲ್ಲಿ ಪ್ರತಿಮೆ ನಿರ್ಮಾಣವಾಗಲಿದೆ.

 

ಶ್ರೀ ರಾಮನ ಭಕ್ತರಿಗೆ ಪವಿತ್ರ ಯಾತ್ರ ಸ್ಥಳವಾಗಿ ಶ್ರೀ ರಾಮಾಂಜನೇಯ ಸ್ಥಳವಾಗಲಿದೆ ಎಂದು ಹೇಳಿದರು.

Facebook
Twitter
LinkedIn
Email
WhatsApp
Telegram
Tumblr

Leave a Comment

Your email address will not be published. Required fields are marked *

Translate »
Scroll to Top