ದಲಿತರನ್ನು ಸುಟ್ಟ ಬೆಂಕಿ ದೇಶವನ್ನೇ ಸುಡುತ್ತದೆ ಎಚ್ಚರಿಕೆ

ದೇವನಹಳ್ಳಿ: ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿರುವ ಚುನಾಯಿತರಾಗಿ ಅಧಿಕಾರ ನಡೆಸುತ್ತಿರುವ ಸಂಸದ ಪ್ರತಾಪ್ ಸಿಂಹರವರೆ ನಿಮ್ಮ ಬಳಿ ಸಾಮಾಜಿಕ ನ್ಯಾಯ ಇಲ್ಲವೇ ಕೇಳುವಂತಹವರ ವಿರುದ್ಧ ಏನುಬೇಕಾದರೂ ಆರೋಪ ಮಾಡಬಹುದಾ ಸಂವಿಧಾನದಡಿಯಲ್ಲಿ ಕೆಲಸ ಮಾಡುವ ಜನಪ್ರತಿನಿಧಿಗಳು ಈ ರೀತಿಯಾದ ಹೇಳಿಕೆ ಮಾತನ್ನು ಆಡುವುದು ನಾಚಿಕೆಗೇಡಿನ ಸಂಗತಿ, ನಿಮಗೆ ಸಂವಿಧಾನದ ಮೇಲೆ ಗೌರವವಿದ್ದರೆ ಈ ಕೂಡಲೇ ನಿಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಭಾರತ ಜನಜಾಗೃತಿ ಸೇನೆಯ ರಾಜ್ಯಾಧ್ಯಕ್ಷ ಸಿ.ಮುನಿಯಪ್ಪ ಒತ್ತಾಯಿಸಿದರು.

ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಚಲವಾದಿ ಮಹಾಸಭಾ ವತಿಯಿಂದ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪ್ರಿಯಾಂಕ ಖರ್ಗೆ ವಿರುದ್ಧ ಅವಹೇಳನಕಾರಿ ಮಾತಾಇರುವುದು ಮತ್ತು ಹಂಸಲೇಖಾ ರವರು ಹೇಳಿರುವ ಮಾತಿಗೆ ಕ್ಷಮಾಪಣೆ ಕೇಳಿಸಿರುವುದನ್ನು ಖಂಡಿಸಿ ಮಾತನಾಡಿ, ವಿಶ್ವದ ಗುರು ಸ್ಥಾನಕ್ಕೆ ನಮ್ಮ ಸಮುದಾಯ ನಿಲ್ಲುತ್ತದೆ ಕೂಡಲೇ ಪ್ರತಾಪ್ ಸಿಂಹರವರು ಬೇಷರತ್ ಕ್ಷಮೆಯಾಚಿಸಬೇಕು ಇಲ್ಲವಾದಲ್ಲಿ ನೀವು ಭಾಗವಹಿಸುವ ಕಾರ್ಯಕ್ರಮದ ಮುಂದೆ ಕಪ್ಪು ಪಟ್ಟಿ ಧರಿಸಿ ನಿಮ್ಮ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

ಪ್ರಿಯಾಂಕ ಖರ್ಗೆ ವಿರುದ್ಧ ಹಗುರವಾಗಿ ಮಾತಾಡಿರುವುದು ಅವರಿಗೆ ಶೋಭೆ ತರುವ ವಿಷಯವಲ್ಲಾ ಬಿಟ್ ಕಾಯಿನ್ ವಿಚಾರದಲ್ಲಿ ಮೌನ ವಹಿಸಿರುವ ಬಿಜೆಪಿ ಯವರು ಕಾಂಗ್ರೆಸ್ ನಾಯಕರ ವಿರುದ್ಧ ಇಲ್ಲಸಲ್ಲದ ಆರೋಪಗಳು ಮಾಡುತ್ತಿರುವುದು ಖಂಡನೀಯ ಕೂಡಲೇ ಕ್ಷಮೆಯಾಚಿಸಬೇಕು ಹಾಗೂ ಸಂಗೀತ ನಿರ್ದೇಶಕ ಹಂಸಲೇಖಾ ರವರ ಹೇಳಿಕೆ ಪರವಾಗಿ ನಮ್ಮ ಸಮುದಾಯ ನಿಲ್ಲುತ್ತದೆ ಎಂದು ಚಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ಕೆ.ವಿ.ಸ್ವಾಮಿ ತಿಳಿಸಿದರು. ಈ ವೇಳೆ ಚಲವಾದಿ ಮಹಾಸಭಾದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಡಿ.ಎಸ್.ಎಸ್. ಸಂಚಾಲಕರಾದ ನರಸಪ್ಪ,ವಿಜಯಪುರ ಪುರಸಭಾ ಸದಸ್ಯ ನಾರಾಯಣಸ್ವಾಮಿ, ಹಾಗೂ ಸಮುದಾಯದ ಹಲವು ಮುಖಂಡರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top