ಬೆಂಗಳೂರು,ಫೆ,13 : ಬೆಳಗಿನ ಜಾಗಿಂಗ್ ಮುಗಿಸಿಕೊಂಡು ನೇರವಾಗಿ ವಿಮ್ಸ್ ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸಿ, ಆಸ್ಪತ್ರೆಯಲ್ಲಿನ ರೋಗಿಗಳ ಆರೋಗ್ಯ ವಿಚಾರಿಸಿ, ರೋಗಿಗಳ ಅಹವಾಲುಗಳನ್ನು ಆಲಿಸಿ, ಅವರ ಮನವಿಗಳಿಗೆ ಸೂಕ್ತವಾಗಿ ಸ್ಪಂದಿಸಲಾಯಿತು. ಹಾಗು ವೈದ್ಯರೊಂದಿಗೆ ಚರ್ಚಿಸಿ ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸಿ ಸಮರ್ಪಕ ಚಿಕಿತ್ಸೆ ನೀಡಬೇಕೆಂದು ವೈದ್ಯರಿಗೆ ಸೂಚನೆ ನೀಡಲಾಯಿತು.ಈ ವೇಳೆ ಆಸ್ಪತ್ರೆಯ ಮೂಲಭೂತ ಸೌಕರ್ಯಗಳು, ಸ್ವಚ್ಛತೆ ಬಗ್ಗೆ ಪರಿವೀಕ್ಷಣೆ ನೆಡೆಸಿ, ಆಸ್ಪತ್ರೆಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ, ಸ್ವಚ್ಛತೆಗೆ ಆದ್ಯತೆ ನೀಡಲು ಸೂಚಿಸಲಾಯಿತು.ಬಳ್ಳಾರಿ ಉಸ್ತುವಾರಿ ಸಚಿವನಾದ ಮೇಲೆ ವಿಮ್ಸ್ ಆಸ್ಪತ್ರೆಗೆ ಹಲವಾರು ಬಾರಿ ಭೇಟಿ ನೀಡಿ, ವ್ಯವಸ್ಥೆಯನ್ನು ಸರಿ ಪಡಿಸಲು ಶ್ರಮಿಸುತ್ತಿದ್ದೇನೆ. ನವ ಬಳ್ಳಾರಿ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯ.