ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸದೆ ಇದ್ದರೆ ಉಗ್ರ ಪ್ರತಿಭಟನೆ

ಕುಷ್ಟಗಿ,ಜ,6 :- ಕರ್ನಾಟಕ ಸರಕಾರಿ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಥಿತಿ ಉಪನ್ಯಾಸಕರನ್ನು ಸೇವಾಸಕ್ರಮಾತಿ ಮಾಡಬೇಕು ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರಾಗಿ ಸಂಘ ಕುಷ್ಟಗಿ, ತವರಗೇರಾ, ಹಿರೇವಂಕಲಕುಂಟ ಘಟಕ ರಾಜ್ಯ ಶಿಕ್ಷಣ ಸಚಿವ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರಿಗೆ ಗ್ರೇಡ್-೨ ತಹಶೀಲ್ದಾರ ಮೂಲಕ ಮನವಿ ಪತ್ರ ಸಲ್ಲಿಸಿದರು. ಇದಕ್ಕು ಮುಂಚೆ ಕುಷ್ಟಗಿ ಪಟ್ಟದ ಮಲ್ಲಯ್ಯ ವೃತ್ತದಿಂದ ಮೆರವಣಿಗೆ ಹಮ್ಮಿಕೊಂಡು ಬಸ್ ನಿಲ್ದಾಣದ ಮೂಲಕ ಮುರಡಿ ಬೀಮಜ್ಜ ವೃತ್ತ, ಮಾರುತಿ ವೃತ್ತ ಬಸವೇಶ್ವರ ವೃತ್ತದಲ್ಲಿ ಜಮಾವಣೆಗೊಂಡು ಶಿಕ್ಷಣ ಸಚಿವರಾದ ನಾಗೇಶ ಇವರ ಬಾವ ಚಿತ್ರಕ್ಕೆ ಬೆಂಕಿ ಹಂಚಿದರು.

ತದನಂತರ ತಹಶೀಲ್ದಾರ ಕಾರ್ಯಲಯಕ್ಕೆ ತೆರಳಿ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕುಗುತ್ತಾ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಲೇಬೇಕು ಎಂದು ಸರಕಾರವನ್ನು ಒತ್ತಾಯಿಸಿದರು. ಕುಷ್ಟಗಿ ಸರಕಾರಿ ಪ್ರಥಮ ದರ್ಜೆ ಕಾಜೀನ ಉಪನ್ಯಾಸ ಶಂಕರ ಕರಪಡಿ ಮಾತನಾಡಿ ರಾಜ್ಯದ ೪೩೦ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು ೧೫೦೦ಕ್ಕು ಹೆಚ್ಚು ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದು ಇದರಲ್ಲಿ ಎಲ್ಲಾ ವಿಷಯವಾರು ಉಪನ್ಯಾಸಕರು ಇದ್ದೇವೆ ಹಾಗೂ ಎಲ್ಲಾ ವಿದ್ಯಾರ್ಹತೆಯನ್ನು ಹೊಂದಿದ್ದೇವೆ.‌ ಸುಮಾರು ಹತ್ತಾರು ವರ್ಷಗಳಿಂದ ನಾವುಗಳು ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ ಆದ್ದರಿಂದ ಸರಕಾರ ಅತಿಥಿ ಉಪನ್ಯಾಸಕರನ್ನು ಖಾಯಂ ‌ಸರಕಾರಿ ನೌಕರರನ್ನಾಗಿ ಮಾಡಬೇಕು.


ಈ ಹಿಂದೆ ಕರ್ನಾಟಕ ಸರ್ಕಾರ ಮಾನವಿಯತೆ ಆಧಾರದ ಮೇಲೆ ಸೂಕ್ತ ಕಾಯ್ದೆ ತಿದ್ದುಪಡಿ ಮಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ ಉಪನ್ಯಾಸಕರನ್ನು ಖಾಯಂಗೊಳಿಸಿದೆ ಅದರಂತೆ ಈಗ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತೀರುವ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಕೊಪ್ಪಳ, ಹಿರೇವಂಕಲಕುಂಟಿ, ತಾವರಗೇರಾ ಉಪನ್ಯಾಸಕರು ಮಾತನಾಡಿ ಸರಕಾರಕ್ಕೆ ಖಾಯಂಗೊಳಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ಪ್ರಥಮ ದರ್ಜೆ ಅತಿಥಿ ಉಪನ್ಯಾಸಕರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top