ಚಿಲ್ಕರಾಗಿ ಗ್ರಾಮದಲ್ಲಿ 5ಎ ಕಾಲುವೆ ಜಾರಿಗಾಗಿ 352ನೇ ದಿನಕ್ಕೆ ಕಾಲಿಟ್ಟ ರೈತರ ಅನಿರ್ದಿಷ್ಟಾವಧಿ ಧರಣಿ

ಮಸ್ಕಿ :ಮಸ್ಕಿ ಕ್ಷೇತ್ರದ 58ಕ್ಕೂ ಹೆಚ್ಚು ಹಳ್ಳಿಗಳ ರೈತರ ಜೀವನಾಡಿ ಯೋಜನೆಯಾದ ನಾರಾಯಣಪುರ ಬಲದಂಡೆ 5ಎ ಕಾಲುವೆ ಜಾರಿಗಾಗಿ ಕಳೆದ 13 ವರ್ಷಗಳ ಹೋರಾಟದಲ್ಲಿ ಕಳೆದ ನವೆಂಬರ್ 20 ರಂದು ಪಾಮನಕಲ್ಲೂರಿನಲ್ಲಿ ರೈತರು ಆರಂಭಿಸಿದ ಅನಿರ್ದಿಷ್ಟಾವಧಿ ಧರಣಿ ಚಿಲ್ಕರಾಗಿ ಗ್ರಾಮದಲ್ಲಿ 352 ನೇ ದಿನಕ್ಕೆ ಶನಿವಾರ ಕಾಲಿಟ್ಟಿದೆ ಸರ್ಕಾರ ಮತ್ತು ಜನಪ್ರತಿನಿಧಿಗಳ ದ್ವಂದ್ವ ನಿಲುವುಗಳನ್ನು ಧಿಕ್ಕರಿಸಿರುವ ರೈತರು ಯೋಜನೆ ಜಾರಿ ಗೊಂಡು ರೈತರ ಭೂಮಿಗಳಿಗೆ ನೀರು ಹರಿಯುವವರೆಗೂ ಹೋರಾಟ ಕೈ ಬಿಡುವುದಿಲ್ಲವೆಂದು ತಿರ್ಮಾನಿಸಿದ್ದಾರೆ ಜನರು ಜನಪ್ರತಿನಿಧಿಗಳಿಗೆ ಅಧಿಕಾರ ನೀಡುವುದು ತಾಂತ್ರಿಕ ಸಮಸ್ಯೆಗಳನ್ನು ಹೇಳುವುದಕ್ಕಲ್ಲ ಸಮಸ್ಯೆಗಳನ್ನು ಪರಿಹರಿಸಲಿಕ್ಕೆ ಸರ್ಕಾರಗಳು ಇರುವುದು ಜನರ ಬೇಡಿಕೆಯಂತೆ ಅಧಿಕಾರ ನೀಡಲು ಆದರೆ ಸರ್ಕಾರಗಳೇ ಜನರಿಗೆ ವಿರುದ್ಧವಾಗಿ ಕೆಲಸಮಾಡುವುದು ಸಂವಿಧಾನ ಬದ್ಧ ಕಾನೂನು ಬದ್ಧ ಅಪರಾಧವೆಂಬುದನ್ನು ಅರಿಯುತ್ತಿಲ್ಲ ನಾರಾಯಣಪುರ ಬಲದಂಡೆ 5ಎ ಯೋಜನೆ ಜಾರಿ ವಿಷಯದಲ್ಲಿ ಜನಪ್ರತಿನಿಧಿಗಳು, ಸರ್ಕಾರ ನಡೆದುಕೊಂಡಿರುವುದೇ ಉದಾಹರಣೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಎಂ, ಬಿ ಪಾಟೀಲರು ಇತ್ತೀಚೆಗೆ ವಿಜಯಪುರದ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ತಜ್ಞರ ಸಲಹೆಗಳನ್ನು ಅನುಸರಿಸಿದ್ದರೆ ವಿಜಯಪುರಕ್ಕೆ ಸಾಕಷ್ಟು ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿರಲಿಲ್ಲ ತಜ್ಞರ ಸಲಹೆಗಳನ್ನು ನಿರ್ಲಕ್ಷಿಸಿದ್ದರಿಂದ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಾಯಿತೆಂದು ತಿಳಿಸಿದ್ದಾರೆ.

ದುರಂತವೆಂದರೆ 5ಎ ಕಾಲುವೆ ಜಾರಿಗೆ ತಾಂತ್ರಿಕ ಕಾರಣಗಳಿವೆಯೆಂದು ತಜ್ಞರು ತಿಳಿಸಿದ್ದಾರೆಂದು ತಜ್ಞರ ಸಲಹೆಗೆ ನಮ್ಮ ಜನಪ್ರತಿನಿಧಿಗಳು ಜೋತು ಬಿದ್ದಿರುವುದರಿಂದ 5ಎ ಯೋಜನೆ ನೆನೆಗುದಿಗೆ ಬೀಳಲು ಮುಖ್ಯ ಕಾರಣ ಮತ್ತು ರೈತರ ನ್ಯಾಯಯುತ ಹೋರಾಟದ ಬೆನ್ನಿಗೆ ನಿಲ್ಲದೇ ರೈತ ಹೋರಾಟವನ್ನು ಹತ್ತಿಕ್ಕುವ ಕುತಂತ್ರಗಳನ್ನು ರೂಪಿಸಲು ಜನಪ್ರತಿನಿಧಿಗಳು ಮುಂದಾಗುತ್ತಿರುವುದು ವಿಪರ್ಯಾಸವೇ ಸರಿ ಎಂ,ಬಿ ಪಾಟೀಲರು, ಮತ್ತು ಹಾಸನ ಜಿಲ್ಲೆಯ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡರಂತವರು ರೈತರ ಪರವಾಗಿ ಕೆಲಸ ಮಾಡುವುದನ್ನು ನೋಡಿ ಕಲಿಯುವುದು ನಮ್ಮ ಜನಪ್ರತಿನಿಧಿಗಳಿಗೆ ಬಹಳಷ್ಟಿದೆ 5ಎ ಕಾಲುವೆ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ ವ್ಯರ್ಥ ಪ್ರಯತ್ನ ಕೈಬಿಟ್ಟು ರೈತರ ಬೆನ್ನಿಗೆ ಸಂಘಸಂಸ್ಥೆಗಳು, ಮಠಾಧೀಶರು,ಜನಪ್ರತಿನಿಧಿಗಳು ನಿಲ್ಲಬೇಕಿದೆ ಯೋಜನೆ ಜಾರಿಯಾಗುವವರೆಗೂ ರೈತರ ಹೋರಾಟ ಮುನ್ನುಗ್ಗಲಿದೆ ಎಂದು ನಾಗರಡೆಪ್ಪ ದೇವರಮನಿ ತಿಳಿಸಿದ್ದಾರೆ.ತಿಮ್ಮನಗೌಡ ಚಿಲ್ಕರಾಗಿ, ಬಸವರಾಜಪ್ಪಗೌಡ ಹರ್ವಾಪುರ, ನಾಗರಡ್ಡೆಪ್ಪ ದೇವರಮನಿ, ಶಿವನಗೌಡ ವಟಗಲ್,ವೆಂಕಟೇಶ್ ಪಾಟೀಲ ವಟಗಲ್, ಮಲ್ಲರಡ್ಡೆಪ್ಪ ಚಿಲ್ಕರಾಗಿ, ಶಿವಕುಮಾರ ಜಹಾಗೀರದಾರ, ಬಸನಗೌಡ ಅನಂದಗಲ್, ಕುಶಪ್ಪ ಅಮೀನಗಡ, ಮಂಜೂರಪಾಷ ಅಮೀನಗಡ, ವೆಂಕಟೇಶ್ ಅಮೀನಗಡ, ಮೌನೇಶ ಬೆಂಚಮರಡಿ ಇದ್ದರುಚಿಲ್ಕರಾಗಿ ಗ್ರಾಮದಲ್ಲಿ 5ಎ ಕಾಲುವೆ ಜಾರಿಗಾಗಿ ಶನಿವಾರ 352ನೇ ದಿನಕ್ಕೆ ಕಾಲಿಟ್ಟ ರೈತರ ಅನಿರ್ದಿಷ್ಟಾವಧಿ ಧರಣಿ.

Leave a Comment

Your email address will not be published. Required fields are marked *

Translate »
Scroll to Top