ಗಂಗಾವತಿ : ಗಂಗಾವತಿ ವಡ್ಡರಹಟ್ಟಿಯ ಶ್ರೀ ವಿದ್ಯಾನಿಕೇತನ ಪದವಿ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಹಾಗೂ ಬೀಳ್ಕೊಡುಗೆ ಸಮಾರಂಭ 23-24 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಶಾಸಕ ಜನಾರ್ದನರೆಡ್ಡಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ನಂತರ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಚೆಕ್ ನೀಡುವ ಮೂಲಕ ಗೌರವಿಸಲಾಯಿತು. ತದನಂತರ ಸಂಸ್ಥೆಯ ವತಿಯಿಂದ ಸರ್ಕಾರಿ ಶಾಲೆಗಳಿಗೆ ಟಿವಿಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜನಾರ್ಧನರೆಡ್ಡಿಯವರು, ದೊಡ್ಡ ದೊಡ್ಡ ನಗರಗಳಲ್ಲಿನ ಕಾಲೇಜುಗಳ ರೀತಿ ಉತ್ತರ ಕರ್ನಾಟಕ ಭಾಗದಲ್ಲಿ ಹಾಗೂ ಗಂಗಾವತಿಯಲ್ಲಿ ಈ ರೀತಿಯ ಉತ್ತಮ ಸೌಕರ್ಯವುಳ್ಳ ಕಾಲೇಜುಗಳು ಇನ್ನಷ್ಟು ಬರಬೇಕಿದೆ ಹಾಗೂ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ನುಡಿಗಳನ್ನು ನೆನೆದು, ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸವನ್ನು ಮಾಡಿ ನಾಡಿಗೆ ಹಾಗೂ ದೇಶಕ್ಕೆ ಕೊಡುಗೆ ನೀಡುವಂತಾಗಬೇಕು ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಿದ್ಯಾನಿಕೇತನ ಸಂಸ್ಥೆಯ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು, ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಚ್.ಆರ್.ಶ್ರೀನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಂಜುಳ ಶಿವಪ್ಪ ನಾಯಕ, ವಾಣಿಜ್ಯೋದ್ಯಮಿಗಳಾದ ಎನ್.ಆರ್.ಶ್ರೀನಿವಾಸ್, ಮಾಜಿ ಜಿಲ್ಲಾಧ್ಯಕ್ಷ ಸಿಂಗನಾಳ್ ವಿರೂಪಾಕ್ಷಪ್ಪ, ಜೋಗದ ನಾರಾಯಣಪ್ಪ ನಾಯಕ, ಹನುಮನ ಗೌಡ ಸಣ್ಣ ರಾಮನಗೌಡ, ಟಿ ದುರ್ಗಪ್ಪ, ಸಿದ್ದಪ್ಪ ನಾಯಕ, ಗಡ್ಡಿ ಹನುಮಂತಪ್ಪ ಹಾಗೂ ಇನ್ನಿತರ ಮುಖಂಡರು, ಕಾಲೇಜಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.