ನೈಟ್ ಶಿಫ್ಟ್ ಸ್ಟುಡಿಯೋಸ್ ನಿರ್ಮಾಣದಲ್ಲಿ ಖ್ಯಾತ ನಟ ಮಮ್ಮುಟ್ಟಿ 

 ಹಲವು ಯಶಸ್ವಿ ಚಿತ್ರಗಳನ್ನು ನೀಡಿರುವ ಹಿರಿಯ ನಿರ್ಮಾಪಕರಾದ ಎಸ್ ಶಶಿಕಾಂತ್ ಮತ್ತು ಚಕ್ರವರ್ತಿರಾಮಚಂದ್ರ ಅವರು ಜಂಟಿಯಾಗಿ ನೂತನವಾಗಿ ಸ್ಥಾಪಿಸಿರುವ  ’ನೈಟ್ ಶಿಫ್ಟ್ ಸ್ಟುಡಿಯೋ’  ಮೂಲಕ ಮಮ್ಮುಟ್ಟಿ ಅಭಿನಯದ  ’ಬ್ರಹ್ಮಯುಗಂ’ ಪೌರಾಣಿಕ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

 

     ‘ಬ್ರಹ್ಮ ಯುಗಂ’ ಶೀರ್ಷಿಕೆಗೆ ’ದ ಏಜ್ ಆಫ್ ಮ್ಯಾಡ್‌ನೆಸ್’ ಎಂಬ ಅಡಿಬರಹ ಇರಲಿದೆ. ಮೊನ್ನೆ ನಡೆದ ಸಂಸ್ಥೆ ಉದ್ಗಾಟನೆ ಸಂದರ್ಭದಲ್ಲಿ ಸಿನಿಮಾದ ಶೀರ್ಷಿಕೆ ಅನಾವರಣಗೊಂಡಿತು.  ರಾಹುಲ್‌ ಸದಾಸಿವನ್ ರಚನೆ ಹಾಗೂ ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. 

ಇದರ ಕುರಿತಂತೆ ಮಾತನಾಡಿರುವ ನಿರ್ದೇಶಕರು “ಧೀಮಂತ ನಾಯಕನ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಕನಸು ಇಂದು ನನಸಾಗಿದೆ. ಇದಕ್ಕೆ ಬೆನ್ನೆಲುಬಾಗಿ ನಿರ್ಮಾಪಕರುಗಳು ಇದ್ದಾರೆ. ಕೇರಳದ ಕರಾಳ ಯುಗದಲ್ಲಿ ಬೇರೂರಿರುವ ಕಥೆಯಾಗಿರುವುದು ವಿಶೇಷ. ಇದು ಖಂಡಿತವಾಗಿಯೂ ಮಮ್ಮುಟ್ಟಿ ಅಭಿಮಾನಿಗಳು, ವಿಶ್ವದ ಫ್ಯಾನ್ಸ್‌ಗಳಿಗೆ ಇಷ್ಟವಾಗಬಹುದೆಂದು ನಂಬಿದ್ದೇವೆ” ಎನ್ನುತ್ತಾರೆ.

 

       “ನಮ್ಮ ಸಂಸ್ಥೆಯ ಮೊದಲ ಚಿತ್ರದಲ್ಲಿ ಖ್ಯಾತ ನಟ ಅಭಿನಯಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಅವರ ಅದ್ಬುತ ಅನುಭವಕ್ಕೆ ಇದು ಜೀವ ತುಂಬುವ ಚಿತ್ರವಾಗಲಿದೆ. ನಿರ್ದೇಶಕರು ಆಯ್ಕೆ ತಾರಾಗಣ, ತಂತ್ರಜ್ಞರು ಇರುತ್ತಾರೆ. ಕೊಚ್ಚಿ, ಒಟ್ಟಪಲಂ ಸುಂದರ ತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಚಿತ್ರಿಸಲಾಗುವುದು” ಎಂದು ನಿರ್ಮಾಪಕರು ಮಾಹಿತಿ ಹಂಚಿಕೊಂಡಿದ್ದಾರೆ.

ಮಮ್ಮುಟ್ಟಿ ಅವರೊಂದಿಗೆ ಅರ್ಜುನ್ ಅಶೋಕನ್, ಸಿದ್ದಾರ್ಥ್ ಭರತನ್, ಅಮಲ್‌ದ ಲಿಜ್ ಮುಂತಾದವರು ಅಭಿನಯಿಸುತ್ತಿದ್ದಾರೆ. ಸಂಗೀತ  ಕ್ರಿಸ್ಟೋ ಕ್ಸೇವಿಯರ್, ಛಾಯಾಗ್ರಹಣ ಶೆಹನಾದ್ ಜಲಾಲ್, ಸಂಕಲನ ಶಫಿಕ್ಯೂ ಮೊಹಮ್ಮದ್ ಅಲಿ, ಸಂಭಾಷಣೆ ಟಿ.ಡಿ.ರಾಮಕೃಷ್ಣ, ಮೇಕಪ್ ರೋನೆಕ್ಸ್ ಕ್ಸೇವಿಯರ್, ಕಾಸ್ಟ್ಯೂಮ್ ಮೆಲ್ವಿ.ಜೆ, ಕಾರ್ಯಕಾರಿ ನಿರ್ಮಾಪಕ ವಿಕ್ಟರ್ ಪ್ರಭಾಹರನ್ ಎಂ ಅವರದಾಗಿದೆ. ಚಿತ್ರವು ಮಲಯಾಳಂ ಸೇರಿದಂತೆ ಕನ್ನಡ, ತೆಲುಗು, ಹಿಂದಿ ಹಾಗೂ ತಮಿಳು ಭಾಷೆಗಳಲ್ಲಿ 2024ರ ಪ್ರಾರಂಭದಲ್ಲಿ ವಿಶ್ವದಾದ್ಯಂತ ಏಕಕಾಲಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top