ಕೊಲೆ ಆರೋಪಿ ಪವಿತ್ರಾ ಗೌಡ ಬಗ್ಗೆ ಮಾಜಿ ಪತಿ ಸಂಜಯ್ ಮಾತು

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ ಆರೋಪಿ ನಂಬರ್ 1 ಆಗಿದ್ದಾರೆ. ರೇಣುಕಾ ಸ್ವಾಮಿಯ ಕೊಲೆಗೆ ಮೂಲ ಕಾರಣವೇ ಪವಿತ್ರಾ ಗೌಡ ಎನ್ನಲಾಗಿದೆ. ದರ್ಶನ್ ಆರೋಪಿ ನಂಬರ್ 2. ಅಭಿಮಾನಿಗಳು ಕೆಲ ರ‍್ಶನ್ ಆಪ್ತರು ಈಗ ಆಗಿರುವದಕ್ಕೆಲ್ಲ ಪವಿತ್ರಾ ಗೌಡ ಕಾರಣ ಎಂದು ದೂಷಣೆಗೆ ತೊಡಗಿದ್ದಾರೆ. ಅತಿ ಮಹಾತ್ವಾಕಾಂಕ್ಷೆ ಹೊಂದಿರುವ ಮಹಿಳೆ ಪವಿತ್ರಾ ಗೌಡ ಜೈಲಿನಲ್ಲಿರುವ ಈ ಸಂರ‍್ಭದಲ್ಲಿ ಅವರ ಮಾಜಿ ಪತಿ ಸಂಜೀವ್ ಸಿಂಗ್, ಪವಿತ್ರಾ ಗೌಡ ಹಾಗೂ ತಮ್ಮ ಸಂಬಂಧದ ಬಗ್ಗೆ ಖಾಸಗಿ  ಕನ್ನಡ ವಾಹಿನಿ ಜೊತೆಗೆ ಮಾತನಾಡಿದ್ದಾರೆ.

ತುಸು ಹಿಂಜರಿಕೆಯಿಂದಲೇ ಮಾತನಾಡಿರುವ ಸಂಜೀವ್ ಸಿಂಗ್, ‘ನಾನು ಹಾಗೂ ಪವಿತ್ರಾ ಗೌಡ ದೂರಾದಿ 12 ವರ್ಷಗಳಾಗಿವೆ. ನನಗೂ ಅವರಿಗೂ ಯಾವುದೇ ರೀತಿಯ ಸಂಪರ್ಕವಾಗಲಿ, ಸಂಬಂಧವಾಗಲಿ ಇಲ್ಲ ಎಂದಿದ್ದಾರೆ. ‘ನಾವಿಬ್ಬರೂ ಬೆಂಗಳೂರಿನಲ್ಲಿಯೇ ಮೊದಲು ಪರಿಚಯವಾಗಿದ್ದವು. ಮದುವೆಯಾದವು, ಆದರೆ ನಮ್ಮಿಬ್ಬರ ವೃತ್ತಿಗಳು ಬೇರೆ ಬೇರೆ ಆಗಿದ್ದವು. ನಾನು ಐಟಿ ಉದ್ಯಮದವನು, ಅವರ ಸಿನಿಮಾ ಕ್ಷೇತ್ರದವರು. ನಮ್ಮಿಬ್ಬರ ನಡುವೆ ಇದೇ ಕಾರಣಕ್ಕೆ ಹೊಂದಾಣಿಕೆ ಕೊರತೆ ಇತ್ತು. ಪರಸ್ಪರರಿಗೆ ಸಮಯ ಕೊಟ್ಟುಕೊಳ್ಳಲು ಸಾಧ್ಯವಾಗಿರಲಿಲ್ಲ ಹಾಗಾಗಿ ವಿಚ್ಛೇದನ ಪಡೆದುಕೊಂಡೆವು ಎಂದಿದ್ದಾರೆ ಸಂಜಯ್ ಸಿಂಗ್.

ಮಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಂಜಯ್ ಸಿಂಗ್, ‘ಮಗಳೊಂದಿಗೆ ಬಹಳ ಕಡಿಮೆ ಮಾತನಾಡಿದ್ದೇನೆ. ಈ ೧೨ ರ‍್ಷಗಳಲ್ಲಿ ನಾನು ಒಂದೆರಡು ಬಾರಿಯಷ್ಟೆ ನನ್ನ ಮಗಳ ಬಳಿ ಮಾತನಾಡಿದ್ದೇನೆ. ನನ್ನ ಹಾಗೂ ಪವಿತ್ರಾರ ವಿಚ್ಛೇದನಕ್ಕೆ ವೃತ್ತಿ ಬೇರೆಯಾಗಿರುವುದೇ ಮೂಲ ಕಾರಣ ಆಗಿತ್ತು. ಬೇರೆಯೇನಲ್ಲ ಎಂದಿದ್ದಾರೆ ಸಂಜಯ್ ಸಿಂಗ್. ಈಗ ನಡೆಯುತ್ತಿರುವ ಪ್ರಕರಣವಾಗಲಿ, ರ‍್ಶನ್ ಜೊತೆಗಿನ ಪವಿತ್ರಾರ ಸಂಬಂಧದ ಬಗೆಗಾಗಲಿ ಯಾವುದೇ ಪ್ರತಿಕ್ರಿಯೆಯನ್ನು ನೀಡಲು ಸಂಜಯ್ ಸಿಂಗ್ ನಿರಾಕರಿಸಿದ್ದಾರೆ.

 

ಒಲ್ಲದ ಮನಸ್ಸಿನಿಂದಲೇ ಮಾತನಾಡಿರುವ ಸಂಜಯ್ ಸಿಂಗ್ ಅವರ ಮಾತುಗಳಲ್ಲಿ ಪವಿತ್ರಾ ಗೌಡರ ಸಹವಾಸವೇ ತಮಗೆ ಬೇಡ ಎಂಬ ಧೋರಣೆ ಇದ್ದಂತೆ ಕಂಡು ಬರುತ್ತಿತ್ತು. ಸಂಜಯ್ ಸಿಂಗ್ ಹಾಗೂ ಪವಿತ್ರಾ ಗೌಡ ಪ್ರೀತಿಸಿ ಮದುವೆಯಾಗಿದ್ದರು. ಅವರಿಗೆ ಒಂದು ಹೆಣ್ಣು ಮಗು ಸಹ ಜನಿಸಿತ್ತು. ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಬೇಕೆಂಬ ಮಹಾತ್ವಾಕಾಂಕ್ಷೆ ಹೊಂದಿದ್ದ ಪವಿತ್ರಾ ಗೌಡ ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯರಾಗುವ ಪ್ರಯತ್ನದಲ್ಲಿ ನಿರತರಾದರು. ಅದು ಸಾಧ್ಯವಾಗಲಿಲ್ಲ. ಕೆಲವು ಸಿನಿಮಾಗಳಲ್ಲಿ ನಟಿಸಿದರೂ ಸಹ ದೊಡ್ಡ ಯಶಸ್ಸು ಸಿಗಲಿಲ್ಲ. ಬಳಿಕ ಪರಿಚಯವಾಗಿದ್ದೇ ದರ್ಶನ್. ಆ ಬಳಿಕ ಪವಿತ್ರಾ ತಮ್ಮ ಬದುಕನ್ನು ಬೇರೆ ರೀತಿಯಾಗಿಯೇ ತಿರುಗಿಸಿಕೊಂಡರು. ಈಗ ಕೊಲೆ ಪ್ರಕರಣದಲ್ಲಿ ಮೊದಲ ಆರೋಪಿಯಾಗಿ ಜೈಲು ಸೇರಿದ್ದಾರೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top