ಬೆಂಗಳೂರು : ಭಾರತದ ಅತಿದೊಡ್ಡ ಉಡುಪು ತಯಾರಕ ಮತ್ತು ರಫ್ತುದಾರ ಆಗಿರುವ ಶಾಹಿ ಎಕ್ಸ್‌ಪೋರ್ಟ್ಸ್, ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯಲ್ಲಿ ಅರ್ಥಪೂರ್ಣ ಮತ್ತು ಸಕಾರಾತ್ಮಕ ಬದಲಾವಣೆಗಳನ್ನು ತರಲು ನಗರದ ಅನೇಕ ಶಾಲೆಗಳಿಗೆ ತನ್ನ ಬೆಂಬಲವನ್ನು ವಿಸ್ತರಿಸಿದೆ. ಈ ಅಕ್ಷರ ಕಾರ್ಯಕ್ರಮದ ಉಪಕ್ರಮದ ಭಾಗವಾಗಿ, ಶಾಹಿ ಅವರು ಪೀಣ್ಯದ ಚೊಕ್ಕಸಂದ್ರದಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ ಕಂಪ್ಯೂಟರ್ ಲ್ಯಾಬ್ ಅನ್ನು ಒದಗಿಸಿದ್ದಾರೆ ಮತ್ತು ಸ್ಯಾನಿಟರಿ ನ್ಯಾಪ್ಕಿನ್ ಇನ್ಸಿನರೇಟರ್ ಯಂತ್ರ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಪೂರೈಸುವಲ್ಲಿ ಬೆಂಬಲ ನೀಡಿದ್ದಾರೆ. ನಗರದಲ್ಲಿ ಶಾಹಿ ತಂಡ, ಶಾಲಾ ಅಧಿಕಾರಿಗಳು, ಶಿಕ್ಷಕರು, ಮಕ್ಕಳ ಸಮ್ಮುಖದಲ್ಲಿ ಈ ನೂತನ ಸೌಲಭ್ಯದ ಉದ್ಘಾಟನೆ ನಡೆಯಿತು.
ಶಾಲೆಯ ಮೂಲಸೌಕರ್ಯ ಅಭಿವೃದ್ಧಿಯ ವಿವರಗಳನ್ನು ಹಂಚಿಕೊಂಡ ಶಾಹಿ, ಕಂಪೆನಿಯ ಅಧಿಕಾರಿಗಳು ಶಾಲಾ ಮಕ್ಕಳಿಗೆ ಒದಗಿಸಲಾದ ಸೌಲಭ್ಯಗಳ ಕೆಳಗಿನ ಪಟ್ಟಿಯನ್ನು ನೀಡಿದ್ದಾರೆ.
• ಕಂಪ್ಯೂಟರ್ ಲ್ಯಾಬ್: 5 ರಿಂದ 8 ನೇ ತರಗತಿಯ ಮಕ್ಕಳಿಗೆ 10 ಕಂಪ್ಯೂಟರ್‌ಗಳು ಮತ್ತು UPS ಬ್ಯಾಟರಿಗಳು
• 1 ರಿಂದ 3 ನೇ ತರಗತಿಯ ಮಕ್ಕಳಿಗೆ ಫ್ಲೋರ್ ಆರ್ಟ್ ಪೇಂಟಿಂಗ್ (ನಲಿ ಕಲಿ ತಟ್ಟೆಗಳು)
• ಮೂಲಭೂತ ಸೌಕರ್ಯಗಳು: ಬೀರುಗಳು, ಕ್ರೀಡಾ ಸಾಮಗ್ರಿಗಳು, ಗ್ರಂಥಾಲಯ ಪುಸ್ತಕಗಳು, ಹಸಿರು ಬೋರ್ಡ್‌ಗಳು, ಸಲಹೆ ಪೆಟ್ಟಿಗೆ, ಕುರ್ಚಿಗಳು, ಟೇಬಲ್‌ಗಳು ಮತ್ತು ಎಲ್ಲಾ ಮಕ್ಕಳು ಮತ್ತು ಸಿಬ್ಬಂದಿಗೆ ಶೈಕ್ಷಣಿಕ ಸಂಬಂಧಿತ ಚಾರ್ಟ್‌ಗಳು
• ಆಡಿಯೋ-ವಿಶುವಲ್ ಪರಿಕರಗಳು ಮತ್ತು ವರ್ಚುವಲ್ ತರಗತಿಗಳಿಗೆ ಸಂವಾದಾತ್ಮಕ ಪರದೆ: ಇದನ್ನು 1 ರಿಂದ 8 ನೇ-ತರಗತಿಯ ವಿದ್ಯಾರ್ಥಿಗಳು ಸ್ಮಾರ್ಟ್ ಕ್ಲಾಸ್‌ಗಾಗಿ ಬಳಸುತ್ತಾರೆ
• ಸ್ಯಾನಿಟರಿ ನ್ಯಾಪ್ಕಿನ್ ಇನ್ಸಿನರೇಟರ್: ಶಾಲಾ ಸಮಯದಲ್ಲಿ ಹುಡುಗಿಯರು ಸ್ಯಾನಿಟರಿ ನ್ಯಾಪ್ಕಿನ್ ಅನ್ನು ನಾಶ ಮಾಡಲು ಬಳಸಲಾಗುತಿದ್ದು ಇದು ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಕಾರ್ಯಕ್ರಮದಲ್ಲಿ ಪೀಣ್ಯ ಬೆಂಗಳೂರು ಬ್ಲಾಕ್ ಶಿಕ್ಷಣಾಧಿಕಾರಿ ಆಂಜನಪ್ಪ,ಬೆಂಗಳೂರು ಉತ್ತರದ ಬಿಬಿಎಂಪಿ ಕಾರ್ಪೊರೇಟರ್ ಶ್ರೀ ಎಂ.ಮುನಿಯಪ್ಪ, ಶಾಹಿ ಮಾನವ ಸಂಪನ್ಮೂಲ ಹಿರಿಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ವೆಂಕಟಾಚಲಪತಿ, ಹಿರಿಯ ಪ್ರಧಾನ ವ್ಯವಸ್ಥಾಪಕರು, ಸಾಂಸ್ಥಿಕ ಅಭಿವೃದ್ಧಿ ಸುಗುಣ ಸರೋಜಿನಿ ಮನ್ನೆ,ಹಿರಿಯ ವ್ಯವಸ್ಥಾಪಕಿ ಕು|ಚಿತ್ರಾ ಪ್ರಸಾದ್ ಮತ್ತು ಉತ್ಪಾದನಾ ವಿಭಾಗದ ಜನರಲ್‌ಮ್ಯಾನೇಜರ್‌ಆಗಿರುವ ಶ್ರೀ ರಾಮಪ್ರಸಾದ್ ಮುರುಗೇಶನ್ ಅವರು ಉಪಸ್ಥಿತರಿದ್ದರು.
ಅಕ್ಷರ ಕಾರ್ಯಕ್ರಮವನ್ನು ಶಾಹಿಯ ಶಿಕ್ಷಣಂ ಉಪಕ್ರಮದ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಕಾರ್ಯಕ್ರಮವು ಶಾಲೆಗಳು ಮತ್ತು ಅಂಗನವಾಡಿಗಳ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಸಂಪೂರ್ಣ ಅಗತ್ಯ-ಮೌಲ್ಯಮಾಪನ ಅಧ್ಯಯನವನ್ನು ನಡೆಸುತ್ತದೆ ಮತ್ತು ಬೆಂಬಲವನ್ನು ಒದಗಿಸಲು ಯೋಜನೆಯನ್ನು ನಿರ್ಮಿಸುತ್ತದೆ. ಮೌಲ್ಯಮಾಪನದಲ್ಲಿ ಕಂಡುಬರುವ ಸಮಸ್ಯೆಗಳು ಮೂಲಭೂತ ಸೌಕರ್ಯಗಳ ಸುಧಾರಣೆ, ಶಾಲಾ ಮಕ್ಕಳಿಗೆ ಶಿಕ್ಷಣವನ್ನು ಪಡೆಯಲು ಮೂಲಭೂತ ಸೌಕರ್ಯಗಳು ಮತ್ತು ಶೈಕ್ಷಣಿಕ ಪ್ರೋತ್ಸಾಹದ ಅಗತ್ಯತೆಯನ್ನು ಒದಗಿಸುತ್ತಿದೆ . ಶಾಹಿ ಈ ಅಕ್ಷರ ಕಾರ್ಯಕ್ರಮದ ಮೂಲಕ ಸುಮಾರು 2824 ಮಕ್ಕಳು, 11296 ಪೋಷಕರು ಮತ್ತು ಕುಟುಂಬದ ಸದಸ್ಯರ ಮೇಲೆ ರಾಷ್ಟ್ರಮಟ್ಟದಲ್ಲಿ ಪ್ರಭಾವ ಬೀರಿದ್ದಾರೆ.
ಯೋಜನೆಯ ಬಗ್ಗೆ:
ಪ್ರಾಜೆಕ್ಟ್ ಅಕ್ಷರವು ಮೂಲ ಸೌಕರ್ಯಗಳ ಅಭಿವೃದ್ಧಿ, ನೈರ್ಮಲ್ಯ ಸೌಲಭ್ಯಗಳು, ಸುರಕ್ಷಿತ ಮತ್ತು ಶುದ್ಧ ಕುಡಿಯುವ ನೀರು, ಐಸಿಟಿ ವಸ್ತುಗಳು, ಗೋಡೆ ವರ್ಣಚಿತ್ರಗಳು ಮತ್ತು ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಲ್ಲಿನ ಪರಿಕಲ್ಪನಾ / ಕಲಾ ವರ್ಣಚಿತ್ರಗಳಂತಹ ಮೂಲಭೂತ ಸೌಕರ್ಯಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ. ಅಲ್ಲದೆ, ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಉತ್ತೇಜನ ನೀಡಲಿದೆ. ತರಗತಿಗಳಿಗೆ ನಿಯಮಿತವಾಗಿ ಮತ್ತು ಹೆಚ್ಚು ಗಮನದಿಂದ ಹಾಜರಾಗಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದರ ಜತೆಗೇ ಅವರ ಶೈಕ್ಷಣಿಕ ಕಾರ್ಯಕ್ಷಮತೆಗೆ ಸಕಾರಾತ್ಮಕ ವಾತಾವರಣವನ್ನು ಕಲ್ಪಿಸಿಕೊಡುತ್ತಿದೆ.