ಬೆಂಗಳೂರು : ಭಾವಸಾರ ಕ್ಷತ್ರಿಯ ಜನಾಂಗದ ಕುಲದೇವತೆ ಶ್ರೀ ಹಿಂಗುಳಾಂಬಿಕ ಮಾತೆಯ ಪೂಜೆ, ಆರಾಧನೆ ಮತ್ತು ಗೋಂದಳ ಕಾರ್ಯಕ್ರಮಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ಸಂಜೀವ್ ಕುಮಾರ್ ಅಂಚಾಟೆ ಅವರು ಭಾನುವಾರ ಬಸವನಗುಡಿಯ ಭವಾನಿ ಕಲ್ಯಾಣ ಮಂದಿರದಲ್ಲಿ ಚಾಲನೆ ನೀಡಿದರು.
ಗೊಂಧಳ್ ದೇವಿಯ ಕಥಾರೂಪವನ್ನು ಜಯಂತ್ ಲಕ್ಷ್ಮಣರಾವ್ ಬುರತ್, ಭದ್ರಾವತಿ ದೂರದರ್ಶನ ಹಾಗೂ ಆಕಾಶವಾಣಿ ಕಲಾವಿದರು ಪ್ರಸ್ತುತಪಡಿಸಿದರು.
ಹಿಂಗೂಳಾಂಬಿಕ ಭಾವಸಾರ ಕ್ಷತ್ರೀಯ ಸೇವಾ ಸಮಿತಿ ಗೌರವಾಧ್ಯಕ್ಷ ತಾರಾನಾಥ್ ಜಾಧವ್, ಅಧ್ಯಕ್ಷ ಪಿ.ಎನ್. ವಿಶ್ವನಾಥ್ ರಾವ್ ಮತ್ತಿತರೆ ಗಣ್ಯರು ಈ ಸಂದರ್ದಭದಲ್ಲಿ ಉಪಸ್ಥಿತರಿದ್ದರು. ಪಂಡಿತ ಅಭಿಷೇಕಾಚಾರ್ಯ ಅವರು ಪ್ರವಚನ ನೀಡಿದರು.
ಶ್ರೀ ಮಾತಾ ಹಿಂಗುಳಾಂಬಿಕ ದೇವಿಯ ಪಲ್ಲಕ್ಕಿ ಉತ್ಸವ ಗಾಂಧಿ ಬಜಾರ್, ಬಸವನಗುಡಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಪ್ರಧಾನ ಕಾರ್ಯದರ್ಶಿ ನಾಗೇಶ್ವರ್ ರಾವ್ ಕೆ.ಆರ್. ಉಪಾಧ್ಯಕ್ಷ ಹರೀಶ್ ಎಸ್. ಭೋಂಗಾಳೆ, ಖಜಾಂಚಿ ಶ್ರೀಹರಿರಾವ್ ಉತ್ತರ್ ಮತ್ತಿತರರು ಉಪಸ್ಥಿತರಿದ್ದರು.
Facebook
Twitter
LinkedIn
Telegram
Email
Print
WhatsApp