ಬೆಂಗಳೂರು: ನಿರ್ಮಲ ಮನಸ್ಸಿನ ಹಿರಿಯ ರಾಜಕೀಯ ಮುತ್ಸದ್ಧಿ. ಚಿಂತಕ ಡಿ.ಬಿ.ಚಂದ್ರೇಗೌಡ ಅವರ ಕುರಿತು ಸಂಸದೀಯ ಬದುಕಿನ ಕುರಿತು ಅಧ್ಯಯನ ಪೀಠ ಸ್ಥಾಪಿಸಬೇಕು ಎಂದು ರಾಜ್ಯ ಪರಿಷತ್ ಸದಸ್ಯರು ಹಾಗೂ ವಿಧಾನ ಮಂಡಲ ಅಧಿಕಾರಿ ಮತ್ತು ನೌಕರರ ಸಂಘದ ಮಾಜೀ ಅಧ್ಯಕ್ಷ ಎಂ.ಎನ್.ಪಿಳ್ಳಪ್ಪ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಾಜ್ಯದ ಯಾವುದಾದರೂ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು ಎಂದಿದ್ದಾರೆ.
ವಿಧಾನಸಭೆ.ವಿಧಾನಪರಿಷತ್ತು ಸದಸ್ಯರಾಗಿ, ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿದ ಅವರು ಸಚಿವರಾಗಿ ಅವರ ಆದರ್ಶ ಬದುಕು , ವಿಚಾರ ಪೂರ್ಣ ಆಲೋಚನೆ , ಪರಿಣಾಮಕಾರಿ ಭಾಷಣ , ಅಧ್ಯಯನ ಶೀಲ ಮನಸ್ಸು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಬೇಕು . ಸ್ಪೀಕರ್ ಸ್ಥಾನಕ್ಕೆ ಗಾಂಭೀರ್ಯ ತಂದುಕೊಟ್ಟ .ನಾಡಿನ ಸಜ್ಜನ ರಾಜಕಾರಣಿಗಳ ಸಾಲಿನಲ್ಲಿ ಅವರು ಅಗ್ರಗಣ್ಯರು ಎಂದು ಹೇಳಿದ್ದಾರೆ.
Facebook
Twitter
LinkedIn
WhatsApp
Email
Print
Telegram