ನಾಯಕನಹಟ್ಟಿ,: ವಿದ್ಯಾರ್ಥಿಗಳ ಕಲಿಕ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸುವುದಕೋಸ್ಕರ ಇಂಗ್ಲಿಷ್ ಕಮ್ಯುನಿಕೇಶನ್ ಮತ್ತು ಕೌಶಲ್ಯವನ್ನು ಹೆಚ್ಚಿಸಲು ಹಾಗೂ ಪ್ರತಿಯೊಬ್ಬರೂ ಸರಳವಾಗಿ ಇಂಗ್ಲಿಷ್ ಭಾಷೆಯನ್ನು ಮಾತನಾಡಿಸಲು ಕಲಿಸುವಂತಹ ಒಂದು ಚಟುವಟಿಕೆಗೋಸ್ಕರ ಎಂದು ಜೆ,ಜೆ,ಆರ್, ಸ್ಕೂಲಿನ ಮುಖ್ಯ ಶಿಕ್ಷಕರಾದ ಟಿ.ಮಹಾಂತೇಶ್ ಮಾತನಾಡಿದರು
ಪಟ್ಟಣದ ಜೆ,ಜೆ,ಆರ್ ಇಂಪೀರಿಯಲ್ ಎಜುಕೇಶನ್ ಸೆಂಟರ್ ಫಾರ್ ಎಕ್ಸಲೆನ್ಸ್ ಕಾರ್ಯಕ್ರಮದಲ್ಲಿ ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು.
ನಂತರ ಮಾತನಾಡಿದ ಅವರು. ವಿದೇಶಿ ತರಬೇತಿ ಹೊಂದಿದ ಶಿಕ್ಷಕರನ್ನು ಆಯ್ಕೆ ಮಾಡಿಕೊಂಡು ಮತ್ತು ನೇಮಕ ಮಾಡಿಕೊಂಡು ಮಕ್ಕಳ ಆಂಗ್ಲ ಭಾಷೆಯ ಕೌಶಲ್ಯದ ತರಬೇತಿಗೆ ಅನುವು ಮಾಡಿಕೊಡಲಾಗಿದೆ.
ಈ ಚಟುವಟಿಕೆಯ ಮಕ್ಕಳ ಅಷ್ಟೇ ಅಲ್ಲದೆ ಸ್ಥಳೀಯ ಶಿಕ್ಷಕರು ಸಹ ಈ ತರಬೇತಿಯನ್ನು ನೀಡಿ ಶಾಲೆಯಲ್ಲಿ ಬೋಧಿಸುವ ವಿಷಯಗಳನ್ನು ಪರಿಣಾತ್ಮಕವಾಗಿ ಬೋಧಿಸಲು ಈ ಒಂದು ತರಬೇತಿ ಅನುಕೂಲ ಮಾಡಿಕೊಟ್ಟಿದೆ ಎಂದು ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ಜೆ,ಜೆ,ಆರ್ ಶಾಲೆಯ ಮುಖ್ಯೋಪಾಧ್ಯಾಯರಾದ ಟಿ. ಮಹಾಂತೇಶ್, ಜೆ,ಜೆ,ಆರ್, ಸ್ಕೂಲಿನ ಶಿಕ್ಷಕರು, ಶಿಕ್ಷಕಿಯರು, ಸಿಬ್ಬಂದಿಗಳು ಇದ್ದರು.