ಎನ್ಎಂಐಟಿಯಲ್ಲಿ ‘ನೆಟ್ವರ್ಕ್ಗಳು, ಮಲ್ಟಿಮೀಡಿಯಾ ಮತ್ತು ಮಾಹಿತಿ ತಂತ್ರಜ್ಞಾನ’ ಕುರಿತ ಮೊದಲನೇ ಅಂತರರಾಷ್ಟ್ರೀಯ ಸಮ್ಮೇಳನ
ಬೆಂಗಳೂರು; ‘ನಾವು ಡಿಜಿಟಲ್ ಯುಗದ ರೋಚಕ ಕಾಲಘಟ್ಟದಲ್ಲಿದ್ದು, ವ್ಯಾಪಕವಾಗಿ ಬೆಳೆಯುತ್ತಿರುವ ತಂತ್ರಜ್ಞಾನವು ಪರಿವರ್ತನೆಯ ಹಾದಿಯಲ್ಲಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತ 2020 ಮೂಲಕ, ಭಾರತವು ವಿದ್ಯಾರ್ಥಿ ಕೇಂದ್ರಿತವಾಗಿ ಸಂಶೋಧನೆ ಮತ್ತು ನಾವೀನ್ಯತೆ ವಲಯವನ್ನು ಸುಧಾರಣೆಗೆ ಕ್ರಮ ತೆಗೆದುಕೊಂಡಿದೆ ಎಂದು ಎಐಸಿಟಿ ಅಧ್ಯಕ್ಷ ಡಾ.ಟಿ.ಜಿ.ಸೀತಾರಾಮನ್ ಹೇಳಿದ್ದಾರೆ
ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿನಲ್ಲಿ ವಿದ್ಯಾರ್ಥಿಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವ ಉದ್ದೇಶದಿಂದ ‘ನೆಟ್‌ವರ್ಕ್‌ಗಳು, ಮಲ್ಟಿಮೀಡಿಯಾ ಮತ್ತು ಮಾಹಿತಿ ತಂತ್ರಜ್ಞಾನ ವಿಷಯ ಕುರಿತು ಆಯೋಜಿಸಿದ್ದ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿ, ಎಐಸಿಟಿಇಯು ಎನ್‌ಎಂಐಟಿಯಂತಹ ತಾಂತ್ರಿಕ ಸಂಸ್ಥೆಗಳನ್ನು ಎಸ್‌ಟಿಇಎಂ ಕ್ಷೇತ್ರಗಳಲ್ಲಿ ಉತ್ಕೃಷ್ಟಗೊಳಿಸಲು ಮತ್ತು ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಪ್ರಗತಿಗಾಗಿ ನಿರ್ಣಯ ತೆಗೆದುಕೊಳ್ಳಲಾಗಿದೆ. ತಾಂತ್ರಿಕ ಸಂಸ್ಥೆಗಳು ವೃತ್ತಿಪರ ಕೌಶಲ್ಯಗಳೊಂದಿಗೆ ವಿದ್ಯಾರ್ಥಿಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಎಐಸಿಟಿಇ ಪ್ರಾಯೋಜಿಸಿದ ಈ ಸಮ್ಮೇಳನದಲ್ಲಿ ಸ್ಪೇನ್‌ನ ಮ್ಯಾಡ್ರಿಡ್‌ನ ತಾಂತ್ರಿಕ ವಿಶ್ವವಿದ್ಯಾಲಯದ ಡಾ. ಡೇವಿಡ್ ಕ್ಯಾಮಾಚೊ ಮತ್ತು ಮುಂಬೈನ ಹಿರಿಯ ಆದಾಯ ತೆರಿಗೆ ಲೆಕ್ಕ ಪರಿಶೋಧಕರಾದ ಶ್ರೀಮತಿ ನಮ್ರತಾ ದತ್ತಾ ಸೇರಿದಂತೆ ಮಾಹಿತಿ ತಂತ್ರಜ್ಞಾನದ ಹಲವು ದಿಗ್ಗಜರು ಭಾಗಿಯಾದರು.
ನೆಟ್‌ವರ್ಕ್, ಮಲ್ಟಿಮೀಡಿಯಾ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಉತ್ತೇಜಿಸುವ ಉದ್ದೇಶವನ್ನು ಸಮ್ಮೇಳನ ಹೊಂದಿದೆ. ಪ್ರಪಂಚದಾದ್ಯಂತ ಕೆಲಸ ಮಾಡುವ ಸಂಶೋಧಕರು, ಎಂಜಿನಿಯರ್‌ಗಳು, ವಿದ್ಯಾರ್ಥಿಗಳು ಮತ್ತು ವೃತ್ತಿಪರ ಅಭ್ಯಾಸ ಮಾಡುತ್ತಿರುವವರ ನಡುವೆ ವೈಜ್ಞಾನಿಕ ಮಾಹಿತಿ ವಿನಿಮಯವನ್ನು ಉತ್ತೇಜಿಸುವ ಗುರಿಯನ್ನು ಇದು ಹೊಂದಿದೆ. ಮಾಹಿತಿ ತಂತ್ರಜ್ಞಾನದ ವಿನ್ಯಾಸ, ಅಪ್ಲಿಕೇಶನ್ ಮತ್ತು ಅಭಿವೃದ್ಧಿಯಲ್ಲಿ ಇತ್ತೀಚಿನ ಟ್ರೆಂಡ್‌ಗಳು ಮತ್ತು ತಂತ್ರಜ್ಞಾನಗಳ ಕುರಿತ ಚರ್ಚಗೆ ಸಮ್ಮೇಳನವು ವೇದಿಕೆಯಾಯಿತು.
ಅಮೆರಿಕ, ಇಂಗ್ಲೆಂಡ್ ಮತ್ತು ಜರ್ಮನಿ ಸೇರಿದಂತೆ ಭಾರತೀಯ ಲೇಖಕರು ಮತ್ತು ಐಐಏಸ್ಐ, ಐಐಟಿ, ಐಐಐಟ ಮತ್ತು ಎನ್.ಐ.ಟಿ ಗಳಂತಹ ಪ್ರಮುಖ ಸಂಸ್ಥೆಗಳ ಗಣ್ಯರು ಈ ಸಮ್ಮೇಳನದಲ್ಲಿ ತಮ್ಮ ಪ್ರಬಂಧಗಳನ್ನು ಮಂಡಿಸಿದರು.
ಕಾಫ್ಲಿನ್ ಅಸೋಸಿಯೇಟ್ಸ್ ಅಧ್ಯಕ್ಷರು, 2004 ಐಇಇ ಅಮೆರಿಕದ ಅಧ್ಯಕ್ಷರಾದ ಥಾಮಸ್ ಎಂ. ಕಾಫ್ಲಿನ್, 2024 ಐಇಇ ಅಮೆರಿಕ ಕಂಪ್ಯೂಟರ್ ಸೊಸೈಟಿ ಅಧ್ಯಕ್ಷರಾದ ಜ್ಯೋತಿಕಾ ಅಠವಳೆ, ಎನ್‌ಇಟಿ ಕುಲಪತಿ, ಸಿಯುಕೆ, ಕಲಬುರಗಿಯ ಡಾ. ಎನ್.ಆರ್. ಶೆಟ್ಟಿ ಮುಖ್ಯ ಭಾಷಣಕಾರರು, ವಿಶೇಷ ಆಹ್ವಾನಿತರಾಗಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ಎಜುಕೇಶನ್ ಟ್ರಸ್ಟ್‌ನ ಕುಲಪತಿ ಎನ್.ವಿನಯ ಹೆಗ್ಡೆ ವಹಿಸಿದ್ದರು.
ಇದೇ ವೇಳೆ ಎಐಸಿಟಿಇಯು – ಐಡಿಸಿಟಿ ಪ್ರಯೋಗಾಲಯವನ್ನು ಡಾ. ಟಿ.ಜಿ. ಸೀತಾರಾಮನ್ ಅವರು ಉದ್ಘಾಟಿಸಿದರು. ಪ್ರಯೋಗಾಲಯವು ವಿದ್ಯಾರ್ಥಿಗಳಿಗೆ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತಶಾಸ್ತ್ರದ ಮೂಲಭೂತ ಅಂಶಗಳ ವರ್ಧಿತ ಅನುಭವ ನೀಡುತ್ತದೆ. ಈ ಪ್ರಯೋಗಾಲಯ ಅಭಿವೃದ್ಧಿಗೆ ಎಐಸಿಟಿಇ 15 ಲಕ್ಷ ರೂ. ಮಂಜೂರು ಮಾಡಿದೆ.