ಬ್ಯಾಂಗ್ ಚಿತ್ರಕ್ಕೆ ಹಿನ್ನೆಲೆ  ಧ್ವನಿ ಕೊಟ್ಟು ಪ್ರೋತ್ಸಾಹಿಸಿದ : ಕಿಚ್ಚ ಸುದೀಪ್

ಶಾನ್ವಿ ಶ್ರೀವಾತ್ಸವ್ ಅಭಿನಯದ ಡಾರ್ಕ್ ಕಾಮಿಡಿ ಆಕ್ಷನ್ ಚಿತ್ರ ‘ಬ್ಯಾಂಗ್  ಬಿಡುಗಡೆಗೆ ಸಜ್ಜಾಗಿದೆ. ಚಿತ್ರವು ಆಗಸ್ಟ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಇದೀಗ ಚಿತ್ರಕ್ಕೆ ಸ್ಟಾರ್ ಸ್ಪರ್ಶ ಸಿಕ್ಕಿದೆ. ‘ಬ್ಯಾಂಗ್  ಚಿತ್ರಕ್ಕೆ ಕಿಚ್ಚ ಸುದೀಪ್, ಹಿನ್ನೆಲೆ ಧ್ವನಿ ನೀಡಿದ್ದು ಚಿತ್ರತಂಡದ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದೆ. ಈ ಕುರಿತು ಮಾತನಾಡಿರುವ ನಿರ್ದೇಶಕ ಗಣೇಶ್ ಪರಶುರಾಮ್, “ನಾವೆಲ್ಲರೂ ಸುದೀಪ್ ಅವರ ಚಿತ್ರಗಳನ್ನು ನೋಡಿ ಬೆಳೆದವರು. ಮೊದಲ ದಿನ ಮೊದಲ ಪ್ರದರ್ಶನದಲ್ಲೇ ಅವರ ಚಿತ್ರ ನೋಡಿ ಪುಳಕಿತರಾದವರು. ಅವರು ನಮ್ಮ ಚಿತ್ರಕ್ಕೆ ಧ್ವನಿ ನೀಡಿದಾಗ, ಅವರನ್ನು ಭೇಟಿಯಾಗಿ ಕೈಕುಲುಕಿದಾಗ, ನಮ್ಮ ಬಹುವರ್ಷಗಳ ಕನಸು ನನಸಾದಂತಾಯಿತು. ಚಿತ್ರದಲ್ಲಿನ ಸುದೀಪ್ ಅವರ ಉಪಸ್ಥಿತಿಯನ್ನು ಅವರ ಅಭಿಮಾನಿಗಳು ಸಹ ಇಷ್ಟಪಡುತ್ತಾರೆ ಎಂಬ ನಂಬಿಕೆ ಇದೆ. ಈ ಕನಸನ್ನು ನನಸು ಮಾಡಿದ ಶಾನ್ವಿ ಶ್ರೀವಾತ್ಸವ್ ಅವರಿಗೆ ಮತ್ತು ಒಂದು ಹೊಸ ತಂಡದ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಿಕ್ಕೆ ಸುದೀಪ್ ಅವರಿಗೆ ಧನ್ಯವಾದಗಳು” ಎಂದು ಹೇಳಿದ್ದಾರೆ.

     ಪೂಜಾ ವಸಂತ್ ಕುಮಾರ್ ನಿರ್ಮಾಣದ ‘ಬ್ಯಾಂಗ್  ಚಿತ್ರದಲ್ಲಿ ಶಾನ್ವಿ ಶ್ರೀವಾತ್ಸವ್ ಜೊತೆಗೆ ರಘು ದೀಕ್ಷಿತ್, ಸಾತ್ವಿಕಾ, ರಿತ್ವಿಕ್ ಮುರಳೀಧರ್, ಸುನಿಲ್ ಗುಜ್ಜಾರ್, ನಾಟ್ಯರಂಗ ಮುಂತಾದವರು ಅಭಿನಯಿಸಿದ್ದು, ರಿತ್ವಿಕ್ ಮುರಳೀಧರ್  ಸಂಗೀತ ಮತ್ತು ಉದಯ್ ಲೀಲಾ  ಛಾಯಾಗ್ರಹಣವಿದೆ. ಬ್ಯಾಂಗ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಹುತೇಕ ಮುಗಿದಿದ್ದು, ನಾಳೆ ಶನಿವಾರ (ಜುಲೈ 29) ಟ್ರೇಲರ್ ಬಿಡುಗಡೆಯಾಗಲಿದೆ.

Facebook
Twitter
LinkedIn
WhatsApp
Telegram
Email

Leave a Comment

Your email address will not be published. Required fields are marked *

Translate »
Scroll to Top