ಕೃಷಿಕ ಸಮಾಜ ನವದೆಹಲಿ ಸಂಘಟನೆಯ ಪದಾಧಿಕಾರಿಗಳ ಆಯ್ಕೆ

ಕುಷ್ಟಗಿ : ಕೃಷಿಕ ಸಮಾಜ ನವದೆಹಲಿ ರೈತ ಸಂಘದ ರಾಜ್ಯಧ್ಯಕ್ಷರಾದ ಮಾಣಿಕ್ಯ ಬಿ‌ ಚಿಲ್ಲೂರ್ ಇವರ ಆದೇಶದ ಮೇರಿಗೆ ಹಾಗೂ ಕೃಷಿಕ ಸಮಾಜದ ರೈತ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷರಾದ ಪ್ರಕಾಶ ಎಸ್ ಪಟ್ಟೇದರ್ ಇವರ ಅಧ್ಯಕ್ಷತೆಯಲ್ಲಿ ಹಾಗೂ ಕೃಷಿಕ ಸಮಾಜ ರೈತ ಸಂಘ ನವದೆಹಲಿ ಕುಷ್ಟಗಿ ತಾಲೂಕು ಅಧ್ಯಕ್ಷರಾದ ನಾಗನಗೌಡ ಪಾಟೀಲ ಗೌಡ್ರ ಇವರ ನೇತೃತ್ವದಲ್ಲಿ ಇಲ್ಲಿನ ಹಳೇ ಪ್ರವಾಸಿ ಮಂದಿರದಲ್ಲಿ ಹೋಬಳಿ ಘಟಕ ಮತ್ತು ಗ್ರಾಮ ಘಟಕ ಹಾಗೂ ಯಲಬುರ್ಗಾ ತಾಲೂಕು ಯುವ ಘಟಕದ ಅಧ್ಯಕ್ಷರ ಪದಾಧಿಕಾರಿಗಳ ಸಭೆ ಕರೆಯಲಾಗಿತ್ತು. ಜಿಲ್ಲಾಧ್ಯಕ್ಷರ ಅಪ್ಪಣೆಯ ಮೇರಿಗೆ ಸಭೆಯಲ್ಲಿ ಚರ್ಚಿಸಿ ಸರ್ವಾನುಮತದಿಂದ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಆದೇಶ ಪತ್ರವನ್ನು ನೀಡಿ ಗೌರವಿಸಲಾಯಿತು.

ಕೃಷಿಕ ಸಮಾಜ ನವದೆಹಲಿ ರೈತ ಸಂಘದ ಜಿಲ್ಲಾ ಯುವ ಘಟಕದ ಅಧ್ಯಕ್ಷರನ್ನಾಗಿ ಬಸವರಾಜ ಕಡಿವಾಲ, ತಾಲೂಕು ಯುವ ಘಟಕದ ಅಧ್ಯಕ್ಷರನ್ನಾಗಿ ಆನಂದ ಆಗರಗಿ, ಯಲಬುರ್ಗಾ ತಾಲೂಕು ಯುವ ಘಟಕದ ಅಧ್ಯಕ್ಷರನ್ನಾಗಿ ರಾಮಣ್ಣ ಭಜೇಂತ್ರಿ, ತಾಲೂಕು ಕಾನೂನು ಸಲಹೆಗಾರರನ್ನಾಗಿ ಮಾಹಾಂತೇಶ ಎಂ. ಬಂಡೇರ ವಕೀಲರು, ಗ್ರಾಮ ಘಟಕದ ಅಧ್ಯಕ್ಷರನ್ನಾಗಿ ಶಂಕ್ರಪ್ಪ ಗದಗೇರಿ, ನವನಹಳ್ಳಿ ಗ್ರಾಮ ಘಟಕದ ಅಧ್ಯಕ್ಷರನ್ನಾಗಿ ಮೌನೇಶ ಬಡಿಗೇರ್, ಶರಣಪ್ಪ ಟಿ.ಚಿಟಗಿ, ಪ್ರಧಾನ ಕಾರ್ಯದರ್ಶಿ ಬಸಬಗೌಡ ಸಿ.ಪಾಟೀಲ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿ ಆದೇಶ ನೀಡಿ ಗೌರವಿಸಿದರು.

ನಂತರ ಪದಾಧಿಕಾರಿಗಳ ಸಭೆಯನ್ನು ಕುರಿತು ಮಾತನಾಡಿದ ಕುಷ್ಟಗಿ ತಾಲೂಕು ಕೃಷಿಕ ಸಮಾಜದ ನವದೆಹಲಿ ರೈತ ಸಂಘದ ಕಾನೂನು ಸಲಹೆಗಾರ ಮಾಹಾಂತೇಶ ಬಂಡೇರ್ ಮಾತನಾಡಿ ಕೃಷಿಕ ಸಮಾಜ ರೈತ ಸಂಘ ನಮ್ಮ ಕರ್ನಾಟಕದಲ್ಲಿ ಈಗಾಗಲೇ ಅನೇಕ ಕಾರ್ಯವನ್ನು ರೂಪಿಸಿ ಹೋರಾಟದ ಮೂಲಕ ಸಮಾಜದ ಕಾರ್ಯ ರೂಪಕ್ಕೆ ತಂದಿದ್ದು ರೈತರ ಸರ್ವೋತ್ತಮ ಅಭಿವೃದ್ಧಿಗಾಗಿ ಇವತ್ತು ಕೃಷಿಕ ಸಮಾಜ ರೈತ ಸಂಘ ಅಸ್ತಿತ್ವಕ್ಕೆ ಆದ್ದರಿಂದ ಪ್ರಮಾಣಿಕವಾಗಿ ರೈತರ ಪರ ಹೋರಾಟವನ್ನು ನೆಡೆಸಿ ನ್ಯಾಯಯುತವಾಗಿ ರೈತರ ಪರ ಶ್ರಮಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಕೃಷಿಕ ಸಮಾಜದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top