ರಸ್ತೆ ಕಾಮಗಾರಿಗಳಿಗೆ ಸೋಮಶೇಖರ ರೆಡ್ಡಿ ಅವರಿಂದ ಭೂಮಿಪೂಜೆ

ಬಳ್ಳಾರಿ, ಮಾ.26 : ನಗರದ 15ನೇ ವಾರ್ಡ್ ನ ಹೊಯ್ಸಳ ಹೋಟಲ್ ಮುಂಭಾಗದ ರಸ್ತೆಯನ್ನು 17ಲಕ್ಷ ರೂ.ವೆಚ್ಚದಲ್ಲಿ ಹಾಗೂ 21ನೇ ವಾರ್ಡ್ ನ ಗಾಂಧಿನಗರದ ಲಿಂಕ್ ರಸ್ತೆಗಳಿಗೆ 70ಲಕ್ಷ ರೂ.ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಬಳ್ಳಾರಿ ನಗರ ಶಾಸಕ‌ ಜಿ.ಸೋಮಶೇಖರ್ ರೆಡ್ಡಿ ಅವರು ಶನಿವಾರ ಭೂಮಿಪೂಜೆ ನೆರವೇರಿಸಿದರು.


ಈ ಸಂದರ್ಭದಲ್ಲಿ ಬಳ್ಳಾರಿ ಮಹಾನಗರ ಪಾಲಿಕೆ ಮಹಾಪೌರರಾದ ಎಂ.ರಾಜೇಶ್ವರಿ. ಉಪ ಮಹಾಪೌರರಾದ ಮಲನ್ ಬೀ. ಮಹಾನಗರ ಪಾಲಿಕೆ ಸದಸ್ಯರಾದ ಶ್ರೀನಿವಾಸ್ ಮೋತ್ಕರ್, ಸುರೇಖಾ ಗೌಡ, ಹನುಮಂತಪ್ಪ, ಮೊಹಮ್ಮದ್ ನೂರ್, ರಾಬಕೋ ಹಾಲು ಒಕ್ಕೂಟದ ನಿರ್ದೇಶಕರಾದ ಜಿ.ವೀರಶೇಖರ ರೆಡ್ಡಿ, ಎಪಿಎಂಸಿ ಸದಸ್ಯರಾದ ಜಿ. ಕೃಷ್ಣಾರೆಡ್ಡಿ, ಮುಖಂಡರಾದ ಡಾ.ಬಿ.ಕೆ.ಸುಂದರ್ ಮತ್ತಿತರರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top