ದುನಿಯಾ ವಿಜಯ್-ನಾಗರತ್ನ ವಿಚ್ಛೇದನ ಪ್ರಕರಣ; ಇಂದು ಬರಲಿದೆ ಸಾಧ್ಯತೆ

ಬೆಂಗಳೂರು: ಸದ್ಯ ಸ್ಯಾಂಡಲ್ವುಡ್ನಲ್ಲಿ ಹಲವಾರು ವಿಚ್ಛೇದನ ಪ್ರಕರಣಗಳು ನಡೆಯುತ್ತಲೆ ಇವೆ. ಮೊದಲು ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನ ಪಡೆಯೋ ಘೋಷಣೆ ಮಾಡಿದರು. ಆ ಬಳಿಕ ಯುವ ಹಾಗೂ ಶ್ರೀದೇವಿ ವಿಚ್ಛೇದನ ವಿಚಾರ ಚರ್ಚೆ ಆಯಿತು. ಈಗ ದುನಿಯಾ ವಿಜಯ್ ಹಾಗೂ ನಾಗರತ್ನ ವಿಚ್ಛೇದನ ವಿಚಾರ ಕೋರ್ಟ್ ಗೆ ಬಂದಿದೆ. ಇಂದು (ಜೂನ್ ೧೩) ಈ ಪ್ರಕರಣದಲ್ಲಿ ತೀರ್ಪು ಹೊರಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ದುನಿಯಾ ವಿಜಯ್ ಹಾಗೂ ನಾಗರತ್ನ ಮಧ್ಯೆ ವೈಮನಸ್ಸು ಮೂಡಿತ್ತು. ಹೀಗಾಗಿ 2018ರಲ್ಲಿ ವಿಜಯ್ ಅವರು ವಿಚ್ಛೇದನ ಕೋರಿ ಅರ್ಜಿಸಲ್ಲಿಕೆ ಮಾಡಿದ್ದರು. ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಳ್ಳಲು ವಿಜಯ್ ರೆಡಿ ಇದ್ದಾರೆ. ಇಷ್ಟೇ ಅಲ್ಲ ಪತ್ನಿಗೆ ಜೀವನಾಂಶ ಕೂಡ ಕೊಡಲು ರೆಡಿ ಇದ್ದಾರೆ. ಆದರೆ, ಗೆ ಹೋದಾಗಲೆಲ್ಲ ನಾಗರತ್ನ ಅವರು ಪತಿಯನ್ನು ಬಿಡಲು ಒಪ್ಪಿಲ್ಲ. ಹೀಗಾಗಿ ಪ್ರಕರಣ ಮುಂದೂಡುತ್ತಲೇ ಬರುತ್ತೊದೆ. ಇಂದು ಪ್ರಕರಣದ ತೀರ್ಪು ಹೊರ ಬರಲಿದೆ.

 

ಬೆಂಗಳೂರಿನ ಶಾಂತಿನಗರ ಫ್ಯಾಮಿಲಿ ಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ನಡೆದಿದೆ. ವಾದ-ವಿವಾದವನ್ನು ಆಲಿಸಲಾಗಿದೆ. 3 ಘಂಟೆ ನಂತರ ಅರ್ಜಿ ವಿಚಾರಣೆ ನಡೆಯೋ ಸಾಧ್ಯತೆ ಇದೆ ಎನ್ನಲಾಗಿದೆ. ದುನಿಯಾ ವಿಜಯ್ ಅವರು ಸದ್ಯ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಹೀಗಾಗಿ ಅವರ ಪರ ವಕೀಲರು ಮಾತ್ರ ಕೋರ್ಟ್ ಗೆ ಹಾಜರಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top