ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಕಾವೇರಿ ತಟ ಸಂಗಮದಲ್ಲಿ ಚಾಲನೆ

ರಾಮನಗರ : ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಸಂಗಮದಲ್ಲಿ ಶನಿವಾರ ಚಾಲನೆ ನೀಡಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ, ರಾಜ್ಯದಲ್ಲಿ‌ ನೀರಾವರಿ ಯೋಜನೆಗಳನ್ನು ಸಮಗ್ರವಾಗಿ ಅನುಷ್ಠಾನ ಗೊಳಿಸುವ ಬದ್ದತೆ ಇರುವುದು ಕುಮಾರಸ್ವಾಮಿ ಅವರಿಗೆ ಮಾತ್ರ. ಇದರಿಂದಾಗಿ ರಾಜ್ಯದ ಜನರ ಕುಡಿಯುವ ನೀರಿನ ಬವಣೆ ನೀಗಲು ಮತ್ತು ರೈತರ ಬದುಕು ಹಸನಾಗಲು ಮುಂದಿನ ಚುನಾವಣೆಯಲ್ಲಿ ಕುಮಾರಸ್ವಾಮಿ‌ ಅವರಿಗೆ ಪೂರ್ಣ ಅಧಿಕಾರ ನೀಡಬೇಕು ಎಂದು ಮನವಿ ಮಾಡಿದರು. ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಮಾತನಾಡಿ, ಇಂದು ಬೆಂಗಳೂರಿನ ಜನರು ಕುಡಿಯುವ ನೀರಿಗೆ ತೊಂದರೆ ಅನುಭವಿಸುತ್ತಿದ್ದಾರೆ. ರೈತರಿಗೆ ವ್ಯವಸಾಯಕ್ಕೆ ನೀರು ಸಿಗುತ್ತಿಲ್ಲ. ಇವೆಲ್ಲ ಸಮಸ್ಯೆಗಳಿಗೆ ಇಡಿ ರಾಜ್ಯದಲ್ಲಿ ಹದಿನೈದು ಸ್ಥಳಗಳಲ್ಲಿ ಏಕಕಾಲದಲ್ಲಿ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ ಎಂದರು.

ಶಾಸಕ ಅನ್ನಧಾನಿ ಮಾತನಾಡಿ, ಇಡಿ ರಾಜ್ಯದಲ್ಲಿ ರೈತರ ಸಾಲವನ್ನು ಮನ್ನಾ ಮಾಡಿದ ಎಕೈಕ ಜನನಾಯಕ ಕುಮಾರಸ್ವಾಮಿ‌ ಎಂಬುದು ಹೆಗ್ಗಳಿಕೆಯ ವಿಚಾರ. ಇಂದು ನೀರಿನ ಹೋರಾಟದಲ್ಲಿ ಇಡಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಇಡಿ ಕಾವೇರಿ ನೀರಿನ ಹಕ್ಕು ನಮ್ಮ ರಾಜ್ಯದ ಜನರಿಗಿದ್ದು ಇದನ್ನು‌ ನ್ಯಾಯಯುತವಾಗಿ ಪಡೆದುಕೊಳ್ಳಲು ಹೋರಾಟ ನಡೆಸಲಾಗುತ್ತಿದೆ ಎಂದರು. ಮಾಗಡಿ ಶಾಸಕ ಎ.ಮಂಜುನಾಥ್, ಪಕ್ಷದ ಪ್ರಮುಖರಾದ ಜಯಮುತ್ತು, ಕುಪೇಂದ್ರ ರೆಡ್ಡಿ, ಕನಕಪುರ ಚಿಕ್ಕಪ್ಪ ನಾಗರಾಜು, ಮಾಗಡಿ ರಾಮಣ್ಣ, ಹಾಪ್ ಕಾಮ್ಸ್ ದೇವರಾಜು, ದೊಡ್ಡಬಳ್ಳಾಪುರ ಮುನೇಗೌಡ, ರಾಜಶೇಖರ್, ಚಂದ್ರಣ್ಣ, ಕಬ್ಬಾಳೇಗೌಡ, ಮೀಸೆ ರಾಮಕೃಷ್ಣಪ್ಪ, ಪೂಜಾರಿಪಾಳ್ಯ ಕೃಷ್ಣಮೂರ್ತಿ, ಗುತ್ತಿಗೆದಾರ ಪ್ರಕಾಶ್, ಹೊಟೇಲ್ ಉಮೇಶ್, ಮತ್ತಿತರರಿದ್ದರು. ಸಾವಿರಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Comment

Your email address will not be published. Required fields are marked *

Translate »
Scroll to Top