ಚಲನಚಿತ್ರ ಕಾರ್ಮಿಕರು, ಚಾಲಕರಿಗೆ ರಿಯಾಯಿತಿ ದರದಲ್ಲಿ ರೇಷನ್ ಕಿಟ್ ವಿತರಣೆಗೆ ಚಾಲನೆ

ಬೆಂಗಳೂರು : ಇಂಡಿಯನ್ ಫಿಲಂಮೇಕರ್ ಅಸೋಸಿಯೇಷನ್ ಸಹಯೋಗದಲ್ಲಿ ಚಲನಚಿತ್ರ ರಂಗದ ಕಾರ್ಮಿಕರು, ಕಲಾವಿದರು, ಚಾಲಕರು, ಸಂಕಷ್ಟದಲ್ಲಿರುವ ಜನ ಸಾಮಾನ್ಯರಿಗೆ ರಿಯಾಯಿತಿ ದರದಲ್ಲಿ ಆಹಾರ ಸಾಮಾಗ್ರಿಗಳನ್ನು ಒದಗಿಸುವ ನಿಟ್ಟಿನಲ್ಲಿ ‘ಹೋಲ್ ಸೇಲ್ ಬಾಸ್ಕೆಟ್’ ನಿಂದ “ಮೂಕಾಂಬಿಕಾ ರೇಷನ್ ಕಿಟ್” ಅನಾವರಣಗೊಳಿಸಲಾಯಿತು.

 

ನಾಗರಬಾವಿಯಲ್ಲಿಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಗವಾನ್ ವಿಷ್ಣುದತ್ತ ಗುರೂಜಿ ಗೀತ ರಚನೆಕಾರ ವಿ. ನಾಗೇಂದ್ರ ಪ್ರಸಾದ್, ನಟ, ನಿರ್ಮಾಪಕ ಗಂಡಸಿ ಸದಾನಂದ ಸ್ವಾಮಿ, ಸಂಗೀತ ನಿರ್ದೇಶಕ ವಿ. ಮನೋಹರ್, ಇಂಡಿಯನ್ ಫಿಲಂ ಮೇಕರ್ ಅಸೋಸಿಯೇಷನ್ ಕರ್ನಾಟಕ ಘಟಕದ ಅಧ್ಯಕ್ಷ ಎಚ್.ಆರ್. ದಿಲೀಪ್ ಕುಮಾರ್ ಮತ್ತಿತರರು ವಿಧ್ಯುಕ್ತವಾಗಿ ಚಲನಚಿತ್ರ ಕಾರ್ಮಿಕರಿಗೆ ರಿಯಾಯಿತಿ ದರದ ರೇಷನ್ ಕಿಟ್ ಗಳನ್ನು ವಿತರಿಸಿದರು. 

 “ಮೂಕಾಂಬಿಕಾ ರೇಷನ್ ಕಿಟ್” ನಲ್ಲಿ ಅಕ್ಕಿ, ಎಲ್ಲಾ ರೀತಿಯ ಧಾನ್ಯಗಳು, ಎಣ್ಣೆ, ಡ್ರೈ ಫ್ರೂಟ್ಸ್, ಪೌಷ್ಟಿಕ ಮತ್ತು ಮಸಾಲ ಪದಾರ್ಥಗಳನ್ನು ಒದಗಿಸಲಾಗುತ್ತಿದೆ. ರೈತರಿಂದ ಖರೀದಿಸುವ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದ್ದು, ಇದರಿಂದ ಪ್ರತಿ ತಿಂಗಳು ದಿನಸಿಗಾಗಿ ಮಾಡುವ ವೆಚ್ಚ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಶ್ರೀ ಸ್ಟಾರ್ ಗೋಲ್ಡ್ ಕಂಪೆನಿ ಮಾಲೀಕರಾದ ಶ್ರೀಕಾಂತ್ ತಿಳಿಸಿದರು.

 

ಗಂಡಸಿ ಸದಾನಂದ ಸ್ವಾಮಿ ಮಾತನಾಡಿ, ಚಾಲಕರಿಗೆ ರಿಯಾಯಿತಿ ದರಲ್ಲಿ ಆಹಾರ ಧಾನ್ಯಗಳನ್ನು ಒದಗಿಸುವ ಸಂಬಂಧ ಸಂಸ್ಥೆಯೊಂದಿಗೆ ಈಗಾಗಲೇ ಮಾತುಕತೆ ಮಾಡಿದ್ದು, ಶೀಘ್ರದಲ್ಲೇ ಚಾಲಕರ ಮನೆ ಮನೆಗಳಿಗೆ ಖುದ್ದಾಗಿ ರಿಯಾಯಿತಿ ದರದ ಆಹಾರ ಕಿಟ್ ಗಳನ್ನು ಒದಗಿಸಲಾಗುವುದು ಎಂದು ಹೇಳಿದರು.

Facebook
Twitter
LinkedIn
Telegram
WhatsApp
Print

Leave a Comment

Your email address will not be published. Required fields are marked *

Translate »
Scroll to Top