ಡಾ.ಪುನೀತ್ ರಾಜ್ ಕುಮಾರ್ ಕರುನಾಡಿನ ನಿಜವಾದ ರಾಜಕುಮಾರ

ದೇವನಹಳ್ಳಿ,ಮಾ,17 : ಪುನೀತ್ ರಾಜ್‍ಕುಮಾರ್ ರವರ ದಾನಧರ್ಮ ಮಾಡಿರುವುದು ಎಲ್ಲಿಯೂ ಪ್ರಚಾರ ಮಾಡದೇ ಎಲೆಮರೆಕಾಯಿಯಂತೆ ಸಮಾಜ ಸೇವೆ ಮಾಡುತ್ತಿರುವುದು ಇಂದಿನ ಯುವಕರು ಅವರ ಜೀವನದಲ್ಲಿ ಮಾದರಿಯಾಗಿ ತೆಗೆದುಕೊಳ್ಳಬೇಕು ಮಯೂರ ಯುವಕ ಸಂಘ ಪುನೀತ್ ರವರ ಪುತ್ಥಳಿ ಅನಾವರಣ ಮಾಡಿರುವುದು ಶ್ಲಾಘನೀಯ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು. ದೇವನಹಳ್ಳಿ ಪಟ್ಟಣದ 14 ನೆ ವಾರ್ಡ್ ನಲ್ಲಿ ಮಯೂರ ಯುವಕ ಸಂಘ, ಅಯೋಧ್ಯಾ ನಗರ ಶುವಾಚಾರ ವೈಶ್ಯ ನಗರ್ತ ಸಂಘ, ಮಹಿಳಾ ಸಂಘ, ಯುವಕ ಸಂಘದ ಅಧ್ಯಕ್ಷ ವೈ.ಆರ್.ರುದ್ರೇಶ್ ರವರ ನೇತೃತ್ವದಲ್ಲಿ ಹಾಗೂ ದೇವನಹಳ್ಳಿ ಜೇಸಿಐ ಇವರುಗಳ ಸಂಯುಕ್ತಾಶ್ರಯದಲ್ಲಿ ಕರುನಾಡ ಕಂದ ಪುನೀತ್ ರಾಜ್‍ಕುಮಾರ್ ರವರ 47 ನೇ ಹುಟ್ಟುಹಬ್ಬದ ಅಂಗವಾಗಿ ಕಂಚಿನ ಪುತ್ಥಳಿ ಅನಾವರಣ, ನೇತ್ರದಾನ ನೋಂದಣಿ ಅಭಿಯಾನ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಕಲಿಕಾ ಉಪಕರಣಗಳನ್ನು ನೀಡಿ ಮಾತನಾಡಿ, ಚಿಕ್ಕ ವಯಸ್ಸಿನಲ್ಲೇ ಬಣ್ಣ ಹಚ್ಚಿನ ಹೆಗ್ಗಳಿಕೆ ಅಪ್ಪನ ಹಾದಿಯಲ್ಲೇ ನಡೆದು ಅಭಿಮಾನಿಗಳ ಆರಾಧ್ಯ ದೈವವಾಗಿ ನಿಂತ ಯುವಕರ ಆಶಾಕಿರಣ ಪುನೀತ್ ಎಂದು ಬಣ್ಣಿಸಿದರು.ಅವರ ನಿಸ್ವಾರ್ಥ ಸೇವೆ ಎಲ್ಲಾ ಸಮುದಾಯಕ್ಕೂ ಪ್ರಸ್ತುತ ಎಂದರು.

ಕಾರ್ಯಕ್ರಮದಲ್ಲಿ ಮಯೂರ ಯುವಕ ಸಂಘದ ಅಧ್ಯಕ್ಷ ಹಾಗೂ ಪುರಸಭಾ ಸದಸ್ಯ ವೈ.ಆರ್.ರುದ್ರೇಶ್, ಗೌರವಾಧ್ಯಕ್ಷ ರವಿಕುಮಾರ್ ದೇವನಹಳ್ಳಿ ಜೇಸಿಐ ಅಧ್ಯಕ್ಷ ಪ್ರವೀಣ್ ಕುಮಾರ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಮುನೇಗೌಡ, ಟೌನ್ ಅಧ್ಯಕ್ಷ ಮುನಿನಂಜಪ್ಪ, ಪುರಸಭಾ ಅಧ್ಯಕ್ಷೆ ಗೋಪಮ್ಮ, ಉಪಧ್ಯಕ್ಷೆ ಗೀತಾ, ಸದಸ್ಯ ನಾಗೇಶ್, ಮುನಿಕೃಷ್ಣ, ರವೀಂದ್ರ, ಮುಖ್ಯಾಧಿಕಾರಿ ನಾಗರಾಜ್, ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಮಹೇಶ್, ತಾಲ್ಲೂಕು ಯುವ ಜೆಡಿಎಸ್ ಅಧ್ಯಕ್ಷ ಭರತ್ ಮತ್ತಿತರರು ಇದ್ದರು.
ವರದಿ: ವಿನಯ್. ಎಂ, ದೇವನಹಳ್ಳಿ.

Leave a Comment

Your email address will not be published. Required fields are marked *

Translate »
Scroll to Top