ಕಲಿಯುಗದ ಕಾಲ ಪ್ರಪಂಚ ದಲ್ಲಿ ಅಜರಾಮರವಾಗಿ ಉಳಿದವರು ಡಾ.ಪಂ.ಪಂಡಿತ ಪುಟ್ಟರಾಜ ಗವಾಯಿಗಳು

ಬಳ್ಳಾರಿ: ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆ ಟ್ರಸ್ಟ್  ಬಳ್ಳಾರಿ, ಆಲಾಪ್ ಸಂಗೀತ ಕಲಾ ಟ್ರಸ್ಟ್, ಬಳ್ಳಾರಿ ಸಹಯೋಗದಲ್ಲಿ  ಡಾ.ಪಂಡಿತ ಪುಟ್ಟರಾಜ ಕವಿ ಗವಾಯಿಗಳು 13ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ನಿಮಿತ್ತ ಗಾನ ನಮನ ಸಂಗೀತ ಕಾರ್ಯಕ್ರಮವನ್ನು ರಾಘವ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.

 

ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆಂಗಲ್ ಹನುಮಂತಯ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಕರ್ನಾಟಕ ಇತಿಹಾಸ ಅಕಾಡೆಮಿ ಜಿಲ್ಲಾಧ್ಯಕ್ಷ ಟಿ.ಹೆಚ್.ಎಂ.ಬಸವರಾಜ್, ಕಲಿಯುಗದ ಕಲಾ ಪ್ರಪಂಚದಲ್ಲಿ ಅಜರಾಮರವಾಗಿ ಉಳಿದವರು ಪಂಡಿತ ಪುಟ್ಟರಾಜ ಗವಾಯಿಗಳು. ಇವರು ಹಿಂದುಸ್ತಾನಿ ಗಾಯನದಲ್ಲಿ ಪ್ರಖ್ಯಾತಿಯನ್ನು ಪಡೆದವರು. ಅಂದ ಅನಾಥ ಮಕ್ಕಳ ದೈವವಾಗಿ ಬೆಳೆದವರು ಮಾನವನ ಮನಸ್ಸಿನ ಕಲ್ಮಶ ತೊಳೆಯಬೇಕಾದರೆ ಸಂಗೀತ ಮುಖ್ಯ  ಎಂದು ತಿಳಿಸಿದರು.

ಜೀವನದಲ್ಲಿ ಸ್ಪೂರ್ತಿಯನ್ನು ನೀಡುವುದು ಸಂಗೀತ ಮಾತ್ರ ಇಂತಹ ಕಾರ್ಯಕ್ರಮಗಳು ಮತ್ತಷ್ಟು ನಡೆಯಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ರಾಘವ ಮೆಮೋರಿಯಲ್ ಅಸೋಸಿಯೇಷನ್ ಗೌರವಾಧ್ಯಕ್ಷ ಕೆ.ಚನ್ನಪ್ಪ ಹೇಳಿದರು

 

          ಆಶೀರ್ವಚನ ನೀಡಿ ಮಾತನಾಡಿದ ಕಲ್ಯಾಣ ಸ್ವಾಮಿಗಳು,  ಲಿಂಗನಿಷ್ಠ ಬ್ರಹ್ಮಾಚಾರಿ ತುಂಗದಾಯಾಳು ಮಹಾದುಪಕಾರಿಯಾಗಿ ಜೀವಿಸಿದಂತವರು ಹಲವಾರು ವಿದ್ಯಾರ್ಥಿಗಳಿಗೆ ಸಂಗೀತದ ಮುಖಾಂತರ ಬಾಳಿಗೆ ಬೆಳಕು ನೀಡಿದವರು ಪುಟ್ಟರಾಜ ಗವಾಯಿಗಳು ಎಂದು ನುಡಿದರು.

ಮಠದಲ್ಲಿ ಕಲಿತ ವಿದ್ಯಾರ್ಥಿಗಳು ಎಲ್ಲಿ ಬೇಕಾದರೂ ಜೀವನವನ್ನು ಸಾಗಿಸಬಹುದು ಕಲಾವಿದರಿಗೆ ವೇದಿಕೆ ಬಹಳ ಮುಖ್ಯ ಎಂದು ತುಂಗಭದ್ರಾ ರೈತ ಸಂಘ ಜಿಲ್ಲಾಧ್ಯಕ್ಷ ದರೂರು ಪುರುಷೋತ್ತಮ ಗೌಡ ಹೇಳಿದರು.

 

          ವೇದಿಕೆಯ ಮೇಲೆ ನಿವೃತ್ತ ಉಪನ್ಯಾಸಕ ಎನ್.ಬಸವರಾಜ, ಕೆಎಂ ಮಂಜುನಾಥ, ನಿವೃತ್ತ ಉಪನ್ಯಾಸಕರು ಖಾಸಿಂ ಅಲಿ, ಹಾಸ್ಯ ಕಲಾವಿದರಾದ ಎರಿಸ್ವಾಮಿ, ಮೃತ್ಯುಂಜಯ ಸ್ವಾಮಿ, ಒಡೆಯರ್, ಗೋವಿಂದವಾಡ, ವೆಂಕಟೇಶ್ ಆಲ್ಕೋಡ್, ಮಹಾಂತೇಶ ಚಿಕ್ಕಮಠ, ಪ್ರಕೃತಿ ರೆಡ್ಡಿ, ದೊಡ್ಡಬಸಪ್ಪ ಗವಾಯಿಗಳು ಹಾಗೂ ರಮಣಪ್ಪ ಭಜಂತ್ರಿ ಉಪಸ್ಥಿತರಿದ್ದರು.

ವಿಶೇಷ ಸಂಗೀತ ವೆಂಕಟೇಶ್ ಅಲ್ಕೋಡ್ ಗದಗ ನಡೆಸಿಕೊಟ್ಟರು. ಮಹಾಂತೇಶ ಚಿಕ್ಕಮಠ ತಬಲಾ ಸಾಥ್ ನೀಡಿದರು. ಪ್ರಕೃತಿ ರೆಡ್ಡಿ ವಿಶೇಷ ಗೀತೆ ಗಾಯನ ಪ್ರದರ್ಶಿಸಿದರು. ನಂತರ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳಿಂದ ಹಾಗೂ ಶ್ರೀ ಪುಟ್ಟರಾಜ ಕವಿ ಗವಾಯಿಗಳವರ ಗುರು ಬಂಧು ಬಳಗದಿಂದ ಗಾಯನ ಕಾರ್ಯಕ್ರಮ ಪ್ರಸ್ತುತಪಡಿಸಲಾಯಿತು

 

          ಸ್ವಾಗತ ಯೋಗೇಶ್, ಪ್ರಾರ್ಥನೆ ಅನನ್ಯ ಮತ್ತು ತಂಡ, ವಂದನಾರ್ಪಣೆ ರಮಣಪ್ಪ ಭಜಂತ್ರಿ, ನಿರೂಪಣೆ ವಿಷ್ಣು ಹಡಪದ,ವಿಜಯಕುಮಾರ್ ನೆರವೇರಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಪಂಡಿತ ಪುಟ್ಟರಾಜ ಗವಾಯಿಗಳ ಶಿಷ್ಯರುಂದದವರು, ಎಂ ರಾಮಾಂಜನೇಯಲು, ಮುದ್ದಟನೂರು ತಿಪ್ಪೇಸ್ವಾಮಿ, ಸುಬ್ಬಣ್ಣ, ನಾಗನಗೌಡ, ಎ ಎಂ ಪಿ ವೀರೇಶ್ ಸ್ವಾಮಿ, ಅಡವಿ ಸ್ವಾಮಿ, ಸಂಗೀತ ಕಲಾಭಿಮಾನಿಗಳು ಪಾಲ್ಗೊಂಡಿದ್ದರು.

Facebook
Twitter
LinkedIn
Print
WhatsApp
Email
Telegram

Leave a Comment

Your email address will not be published. Required fields are marked *

Translate »
Scroll to Top