ಸಹಕಾರ ರತ್ನ ಪ್ರಶಸ್ತಿಗೆ ಡಾ. ಬಿ.ಎಂ.ಉಮೇಶ್ ಕುಮಾರ್ ಭಾಜನ

ಬೆಂಗಳೂರು : ಯುವ ಸಹಕಾರಿ ಧುರೀಣ ಡಾ. ಬಿ. ಎಂ. ಉಮೇಶ್ ಕುಮಾರ್ ಅವರಿಗೆ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪದಲ್ಲಿ  ಪ್ರತಿಷ್ಠಿತ “ಸಹಕಾರ ರತ್ನ” ಪ್ರಶಸ್ತಿ ಯನ್ನು  ಪ್ರದಾನ ಮಾಡಲಾಯಿತು.

 

ಮಂಗಳವಾರ ವಿಜಯಪುರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ  ಸಹಕಾರ ಸಚಿವ ಕೆ. ಎನ್. ರಾಜಣ್ಣ ಹಾಗೂ ಮಹಾಮಂಡಲದ ಅಧ್ಯಕ್ಷ ಜಿ. ಟಿ. ದೇವೇಗೌಡ ಅವರು ಪ್ರಶಸ್ತಿ ಪ್ರದಾನ ಮಾಡಿ ಸಹಕಾರ ರಂಗದಲ್ಲಿನ ನಿಮ್ಮ ಸಾಧನೆ ಮತ್ತಷ್ಟು ಪ್ರಜ್ವಲಿಸಲಿ ಎಂದು ಶುಭ ಹಾರೈಸಿದರು.  

ಸಚಿವರಾದ ಎಂ. ಬಿ. ಪಾಟೀಲ್, ಶಿವಾನಂದ್ ಪಾಟೀಲ್, ಸಂಸದ ರಮೇಶ್ ಜಿಗಜಿಣಗಿ ಸೇರಿದಂತೆ ಹಲವು ಶಾಸಕರು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರುಗಳು ಸೇರಿ ರಾಜ್ಯದ  ಹಿರಿಯ ಸಹಕಾರಿ ಧುರೀಣ ರು ಕಾರ್ಯ ಕ್ರಮ ದಲ್ಲಿ ಪಾಲ್ಗೊಂಡು ಶುಭ ಹಾರೈಸಿ ದರು.

ಉದ್ಯಮ, ಸಹಕಾರಿ ಯಲ್ಲಿ ಸಾಧನೆ

 

ವೃತ್ತಿಯಿಂದ ಉದ್ಯಮಿಯಾದ ಉಮೇಶ್ ಕುಮಾರ್ ಅವರು ಸಹಕಾರ, ಸಾಮಾಜಿಕ ಸೇವೆ, ಧಾರ್ಮಿಕ, ಸಮುದಾಯ ಸಂಘಟನೆ ಮುಂತಾದ ವೈವಿಧ್ಯಮಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಗ್ಲೋಬಲ್ ಸಿಟಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಎನ್ನುವ ಸಹಕಾರಿ ಸಂಸ್ಥೆಯನ್ನು ಸ್ಥಾಪಿಸಿ, ಅದರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಾ, ಸಹಕಾರ ರಂಗದಲ್ಲಿ ಮಹತ್ವದ ಛಾಪು ಮೂಡಿಸಿದ್ದಾರೆ. 

ಸಹಕಾರಿ ಕ್ಷೇತ್ರದತ್ತ ಯುವ ಸಮೂಹವನ್ನು ಸೆಳೆಯುವುದಕ್ಕೆ ಈ ಬಾರಿಯ ಸಹಕಾರಿ ಸಪ್ತಾಹದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಯುವ ಸಹಕಾರಿ ಸಾಧಕ ಉಮೇಶ್ ಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿರುವುದು ಅತ್ಯಂತ ಅರ್ಥಪೂರ್ಣವಾಗಿದೆ.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top