ಡಾ. ಅಂಬಣ್ಣನವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಮರಿಯಮ್ಮನಹಳ್ಳಿ : ಪಟ್ಟಣದ ನಿವಾಸಿ ಡಾ.ಬಿ ಅಂಬಣ್ಣ ರವರು ಸುಮಾರು 60 ವರ್ಷಗಳಿಂದ ವೈದ್ಯಕೀಯ ರಂಗದಲ್ಲಿ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ಪ್ರತಿ ವರ್ಷ ಕೊಡ ಮಾಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸರ್ಕಾರ ಘೋಷಣೆ ಮಾಡಿದೆ. ಡಾ.ಬಿ.ಅಂಬಣ್ಣ ರವರು ಕಳೆದ 60 ವರ್ಷಗಳಿಂದ ಮರಿಯಮ್ಮನಹಳ್ಳಿ ಹೋಬಳಿದ್ಯಾಂತ ಗ್ರಾಮೀಣ ಭಾಗದ ಜನರಿಗೆ ಮನೆ ಮನೆಗಳಿಗೆ ಹೋಗಿ ಸೇವೆ ಸಲ್ಲಿಸಿದ್ದಾರೆ. ಇವರೊಬ್ಬ ಬಡ ರೈತ ಕೂಲಿ ಕಾರ್ಮಿಕ ಮಗನಾಗಿ 1937ರಲ್ಲಿ ಜನಿಸಿದರು. ತಮ್ಮ ವೈದ್ಯಕೀಯ ವೃತ್ತಿಯೊಂದಿಗೆ ಸಮಾಜಸೇವೆಯಲ್ಲು ತೊಡಗಿದರು. ಚಿಲಕನಹಟ್ಟಿ ಬಳಿಯ ತರಳುಬಾಳು ವಿದ್ಯಾಸಂಸ್ಥೆಯ ಅಧ್ಯಕ್ಷರಾಗಿ, ಲಲಿತಕಲಾರಂಗದ ಸಂಸ್ಥಾಪಕ ಸದಸ್ಯರಾಗಿ 15ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆಸಲ್ಲಿಸಿದರು. ಅಲ್ಲದೇ ಅನೇಕ ಸಾಹಿತ್ಯ ಕೃತಿಗಳು ರಚಿಸಿದ್ದಾರೆ. ಹೊಸಪೇಟೆ ತಾ.ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.ಅಲ್ಲದೆ ಸಕ್ಕರೆ ಕಾಯಿಲೆಗೆ ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಿ ಕೂಡ ಕಂಡು ಹಿಡಿದು, ತಮ್ಮ ರೋಗಿಗಳಿಗೆ ನೀಡುತ್ತಾರೆ. ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದರೂ ಕೂಡ ಇವರು ತಮ್ಮ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತುರುವುದು ಕಂಡು ಬಂದಿದೆ. ಇವರು ಮೂಲತಃ ನಾಣಿಕೆರಿಯ ನಿವಾಸಿಯಾಗಿದ್ದರು. ಇವರು, ತಮ್ಮ 21ವಯಸ್ಸಿನಲ್ಲಿಯೇ ವೃತ್ತಿ ಆರಂಭಿಸಿದರು.

ಗ್ರಾಮವು 1953 ರಲ್ಲಿ ತುಂಗಭದ್ರ ಆಣೆಕಟ್ಟಿನ ಹಿನ್ನೀರಿನ ಜಲಾಶಯದಲ್ಲಿ ಮುಳುಗಿ ನಿರ್ಣಮವಾಗಿದೆ. ನಾವು ಪುರ್ನವಸತಿಗಾಗಿ ಮರಿಯಮ್ಮನಹಳ್ಳಿಯಲ್ಲಿ ವಾಸವಾದ ಇವರು ಬಡ ರೈತ ಕೂಲಿ ಕಾರ್ಮಿಕರ ಕುಟುಂಬದಲ್ಲಿ ಜನಿಸಿದರು. ಅವರ ವಿದ್ಯಾಭ್ಯಾಸವನ್ನು ಅದೇ ಗ್ರಾಮದಲ್ಲಿ 1ರಿಂದ 7ನೇ ತರಗತಿಯವರೆಗೂ ಕನ್ನಡ. ಶಾಲೆಯಲ್ಲಿ ಓದಿದರು. ತದನಂತರ ಹೊಸಪೇಟೆಯ ಮುನ್ಸಿಪಾಲ್ ಹೈಸ್ಕೂಲ್ ನಲ್ಲಿ 8ರಿಂದ 10ನೇ ತರಗತಿವರೆಗೂ ವಿದ್ಯಾಭ್ಯಾಸ ಮಾಡಿದರು. ನಂತರ ಬಳ್ಳಾರಿ ತಾರುನಾಥ ಆರ್ಯುವೇದಿಕ್ ವಿದ್ಯಾಪೀಠದಲ್ಲಿ ಸಮನ್ವಯ ಪದ್ಧತಿಗಾಗಿ (ಅಲೋಪಥಿ + ಆರ್ಯುವೇದ) ಡಿಪ್ಲೋಮ್‌ ಸಮನ್ವುಪದ್ಧತಿ ವೈದ್ಯಕಿಯ ವಿದ್ಯಾರ್ಥಿಯಾಗಿ ಸೇರಿದೆ ಇಂಗ್ಲೀಷ್ ಮಾಧ್ಯಮ ವಾಗಿರುವುದರಿಂದ ನನಗೆ ಈ ಕೋರ್ಸ್ ಕಷ್ಟವಾದರು ಯಾವ ಅಡೆತಡೆ ಇಲ್ಲದೆ ಪಾಸ್ ಮಾಡಿದರು. ನಂತರ 1959ರಲ್ಲಿ ಮೈಸೂರ ಮಿಷಿನ್ ಆಸ್ಪತ್ರೆ ಇಂಗ್ಲೀಷ್ ನವರಿಂದ ನಡೆಯುತಿದ್ದ ಆಸ್ಪತ್ರೆಗೆ  ಪ್ರವೇಶ ಪಡೆದುಕೊಂಡರು ಈ ಆಸ್ಪತ್ರೆಯಲ್ಲಿ ಯಾವ ಪ್ರತಿಫಲವು ಇಲ್ಲದೇ ಇರುವುದರಿಂದ, ಸರ್ಕಾರವು ಕೂಡ  ನಿರ್ಲಕ್ಷಿಸಿದರ ಫಲವಾಗಿ, ಯಾವ ಪ್ರತಿಫಲವನ್ನು ಕೊಡದಿದ್ದಕ್ಕಾಗಿ ರಾತ್ರಿ ಎಲ್ಲಾ ಪೆಟ್ರೋಲ್ ಬಂಕ್‌ನಲ್ಲಿ ದುಡಿದು ಹಗಲೆಲ್ಲಾ ಆಸ್ಪತ್ರೆಯಲ್ಲಿ ದುಡಿಯಬೇಕಾದ ಪ್ರಸಂಗ ಬಂದಿತು ಎಂದು ಅಂದಿನ ಕಷ್ಟದ ದಿನಗಳು ಸ್ಮರಿಸುತ್ತಾರೆ.

ಸರ್ಕಾರೇತರ ಆಸ್ಪತ್ರೆಯಲ್ಲಿ ದುಡಿಯುವ ಸಂದರ್ಭವಿದ್ದರೂ ಮತ್ತು ಸರ್ಕಾರದಲ್ಲಿ ಕೆಲಸಮಾಡುವ ಅವಕಾಶವನ್ನು ತೊರೆದು  ಸ್ವಂತ ಊರಿನಲ್ಲಿಯೇ ಬಡ ಜನರ ಸೇವೆಗಾಗಿ ಒಂದು ಪುಟ್ಟ ಆಸ್ಪತ್ರೆಯನ್ನು ತೆರೆಯಲು ನಿರ್ಧಾರ ಮಾಡಿ ನಮ್ಮ ಊರಿನ ಸುತ್ತಮುತ್ತಲಿನ ಮೂವತ್ತು ಮೂರು ಹಳ್ಳಿಯಲ್ಲಿ ಯಾವುದೇ ಸರ್ಕಾರಿ ಆಸ್ಪತ್ರೆಗಳಾಗಲಿ ಅಥವಾ ಖಾಸಗಿ ಆಸ್ಪತ್ರೆಗಳ ಸೇವೆಯು ಜನರಿಗೆ ದೊರೆಯುತ್ತಿರಲಿಲ್ಲ ನನ್ನ ಹೊಟ್ಟೆಪಾಡಿಗಾಗಿ ಕೇವಲ 10 ರೂ. ಬಂಡವಾಳದಿಂದ ನನ್ನ ಕರುಣಾಚಿಕಿತ್ಸಾಲಯವನ್ನು ಆಸ್ಪತ್ರೆಯನ್ನು 1960 ಮಾರ್ಚ್‌ನಲ್ಲಿ ಪ್ರಾರಂಭಿಸಿದೆ ಅದರಿಂದ  ಜನರ ಆಶೀರ್ವಾದದಿಂದ ನನಗೆ ಪ್ರಶಸ್ತಿಗಳು ಸಂದಿವೆ ಎನ್ನುತ್ತಾರೆ. ಇವರ ಅಮೂಲ್ಯವಾದ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ  ಸಂಕೀರ್ಣ ಕ್ಷೇತ್ರದಿಂದ ಪ್ರಶಸ್ತಿ ಘೋಷಣೆ ಮಾಡಿದೆ.ಮರಿಯಮ್ಮನಹಳ್ಳಿಗೆ ಜಾನಪದ ಅಕಾಡಿಮಿ ಅಧ್ಯಕ್ಷೆ ಮಂಜಮ್ಮ ಜೋಗತಿ, ರಂಗಕಲಾವಿದೆ ಕೆ.ನಾಗರತ್ನಮ್ಮ ಮತ್ತು 2021-22ನೇ ಸಾಲಿಗೆ ಡಾ.ಬಿ ಅಂಬಣ್ಣ ರವರನ್ನು ಒಳಗೊಂಡಂತೆ ಮೂರು ರಾಜ್ಯೋತ್ಸವ ಪ್ರಶಸ್ತಿಗಳನ್ನು ಮರಿಯಮ್ಮನಹಳ್ಳಿಯ ಮಾಣಿಕ್ಯಗಳು ಎಂದು ಪ್ರಸಿದ್ಧಿಯಾಗಿ ಪಡೆದು ಮುಡಿಗೇರಿಸಿಕೊಂಡಿದೆ‌.ಹಗರಿಬೊಮ್ಮನಹಳ್ಳಿಯ ಗುರು ಮೂರ್ತಿ ಪಂಡಕೂರು ಅಭಿನಂದನಾ ಗ್ರಂಥವನ್ನು ಡಾ. ಬಿ ಅಂಬಣ್ಣನವರ ಬಗ್ಗೆ ಪುಸ್ತಕವನ್ನು ಹೊರ ತಂದಿದ್ದಾರೆ.‌ ಡಾ.ಬಿ ಅಂಬಣ್ಣರವರು ಎರಡು ಕವನ ಸಂಕಲನದ ಪುಸ್ತಕಗಳನ್ನು ಬರೆದಿದ್ದಾರೆ. 

Leave a Comment

Your email address will not be published. Required fields are marked *

Translate »
Scroll to Top