ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಮಾಲರ್ಪಣೆ ಮಾಡಿದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ

ಕುಷ್ಟಗಿ:- ಕೊಪ್ಪಳ ಬಿಜೆಪಿ ಪಕ್ಷದ‌ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ವಾಲ್ಮೀಕಿ ಭಾವಚಿತ್ರಕ್ಕೆ ಮಾಲಾರ್ಪಣೆಯನ್ನು ಮಾಡಿ ಪುಷ್ಪವನ್ನು ಅರ್ಪಿಸಿದರು.ಕರ್ನಾಟಕ ಸರ್ಕಾರ ತಾಲೂಕು ಆಡಳಿತ, ತಾಲೂಕು ಪಂಚಾಯತ್,ಹಾಗೂ ಪುರಸಭೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಕುಷ್ಟಗಿ ಇವರ ಸಹಯೋಗದಲ್ಲಿ ಇಂದು ಶ್ರೀ ಬುತ್ತಿ ಬಸವೇಶ್ವರ ಸಭಾಭವನದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಅಲ್ಪ ಸಂಖ್ಯಾತ ಕೊಪ್ಪಳ ಜಿಲ್ಲಾ ಅಧ್ಯಕ್ಷ ಅಮೀನುದ್ದೀನ್ ಮುಲ್ಲಾ, ಪುರಸಭೆ ಅಧ್ಯಕ್ಷ ಜಿ.ಕೆ ಹಿರೇಮಠ, ಪುರಸಭೆ ಸದಸ್ಯರಾದ ಮಾಹಾಂತೇಶ ಕಲಬಾವಿ, ವಾಲ್ಮೀಕಿ ಸಮಾಜದ ತಾಲೂಕ ಅಧ್ಯಕ್ಷ ಬಸವರಾಜ ನಾಯಕ, ರಮೇಶ ಕೊಳ್ಳಿ, ರಮೇಶ ಕೊನಸಾಗರ, ಚಂದ್ರಕಾಂತ ವಡಗೇರಿ ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top