ಬೆಂಗಳೂರು: ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿಗೆ ಪೈಪೋಟಿ ನಡೆದಿತ್ತು. ಮೈಸೂರು, ತುಮಕೂರು ಮತ್ತು ಧಾರವಾಡ ಜಿಲ್ಲೆಗಳ ಉಸ್ತುವಾರಿಗಾಗಿ ಸಚಿವರುಗಳ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು.
ಇನ್ನು ಸಚಿವರುಗಳಿಲ್ಲದ ಜಿಲ್ಲೆಗಳಾದ ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಕೋಲಾರ, ಹಾಸನ, ದಕ್ಷಿಣ ಕನ್ನಡಕ್ಕೆ ಯಾರು ಉಸ್ತುವಾರಿಗಳಾಗಲಿದ್ದಾರೆ ಎಂಬ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ. ಜೊತೆಗೆ ಇಬ್ಬಿಬ್ಬರು ಸಚಿವರಿರುವ ಜಿಲ್ಲೆಗಳಲ್ಲಿ ತವರು ಜಿಲ್ಲೆಯ ಉಸ್ತುವಾರಿಗಾಗಿ ಪೈಪೋಟಿ ನಡೆದಿತ್ತು. ನಾಡಹಬ್ಬ ದಸರಕ್ಕೆ ಹೆಸರಾಗಿರುವ ಮೈಸೂರು ಹಾಗೂ ಬೆಂಗಳೂರು ಪ್ರಮುಖ ಜಿಲ್ಲೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಉಸ್ತುವಾರಿಗೆ ಬೇಡಿಕೆ ಹೆಚ್ಚಾಗಿತ್ತು.
ಈ ನಡುವೆ ರಾಜ್ಯಪಾಲರ ಆದೇಶಾನುಸಾರ ಸರ್ಕಾರದ ಅಧೀನ ಕಾರ್ಯದರ್ಶಿ ಮಲ್ಲಿನಾಥ್ ಅವರು ಅಧಿಸೂಚನೆ ಹೊರಡಿಸಿದ್ದಾರೆ.
· ಬೆಂಗಳೂರು ನಗರ ಉಸ್ತುವಾರಿ ಸಚಿವ- ಡಿ.ಕೆ.ಶಿವಕುಮಾರ್
· ತುಮಕೂರು ಜಿಲ್ಲಾ ಉಸ್ತುವಾರಿ-ಡಾ.ಜಿ.ಪರಮೇಶ್ವರ್
· ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಹೆಚ್.ಕೆ.ಪಾಟೀಲ್
· ಬೆಂಗಳೂರು ಗ್ರಾಮಾಂತರ-ಕೆ.ಹೆಚ್.ಮುನಿಯಪ್ಪ
· ರಾಮಲಿಂಗಾರೆಡ್ಡಿ-ರಾಮನಗರ
· ಕೆ.ಜೆ.ಜಾರ್ಜ್-ಚಿಕ್ಕಮಗಳೂರು
· ಎಂ.ಬಿ.ಪಾಟೀಲ್-ವಿಜಯಪುರ
· ದಿನೇಶ್ ಗುಂಡೂರಾವ್-ದಕ್ಷಿಣ ಕನ್ನಡ
· ಹೆಚ್.ಸಿ.ಮಹದೇವಪ್ಪ-ಮೈಸೂರು,
· ಸತೀಶ್ ಜಾರಕಿಹೊಳಿ-ಬೆಳಗಾವಿ
· ಪ್ರಿಯಾಂಕ್ ಖರ್ಗೆ-ಕಲಬುರಗಿ
· ಶಿವಾನಂದಪಾಟೀಲ್-ಹಾವೇರಿ
· ಜಮೀರ್ ಅಹ್ಮದ್ ಖಾನ್-ವಿಜಯನಗರ
· ಶರಣಬಸಪ್ಪ ದರ್ಶನಾಪುರ-ಯಾದಗಿರಿ
· ಈಶ್ವರ್ ಖಂಡ್ರೆ-ಬೀದರ್,
· ಚಲುವರಾಯಸ್ವಾಮಿ-ಮಂಡ್ಯ
· ಎಸ್.ಎಸ್.ಮಲ್ಲಿಕಾರ್ಜುನ್-ದಾವಣಗೆರೆ
· ಸಂತೋಷ್ ಲಾಡ್-ಧಾರವಾಡ
· ಶರಣಪ್ರಕಾಶ್ ಪಾಟೀಲ್-ರಾಯಚೂರು
· ಆರ್.ಬಿ.ತಿಮ್ಮಾಪುರ-ಬಾಗಲಕೋಟೆ
· ಕೆ.ವೆಂಕಟೇಶ್-ಚಾಮರಾಜನಗರ
· ಕೊಪ್ಪಳ-ಶಿವರಾಜ್ ತಂಗಡಗಿ
· ಡಿ.ಸುಧಾಕರ್-ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ
· ಬಿ.ನಾಗೇಂದ್ರ-ಬಳ್ಳಾರಿ
· ಕೆ.ಎನ್.ರಾಜಣ್ಣ-ಹಾಸನ
· ಭೈರತಿ ಸುರೇಶ್-ಕೋಲಾರ
· ಲಕ್ಷ್ಮೀ ಹೆಬ್ಬಾಳ್ಕರ್-ಉಡುಪಿ
· ಮಂಕಾಳ್ ವೈದ್ಯ-ಉತ್ತರ ಕನ್ನಡ
· ಮಧು ಬಂಗಾರಪ್ಪ-ಶಿವಮೊಗ್ಗ
· ಡಾ.ಎಂ.ಸಿ.ಸುಧಾಕರ್-ಚಿಕ್ಕಬಳ್ಳಾಪುರ
· ಎನ್.ಎಸ್.ಬೋಸರಾಜು-ಕೊಡಗು ಜಿಲ್ಲಾ