ಜಿಲ್ಲಾ ಹಾಗೂ ತಾಲೂಕು, ಮತ್ತು ನಗರ ಘಟಕದ ಪದಾಧಿಕಾರಿಗಳ ಸಭೆ

ಕುಷ್ಟಗಿ,ಮಾ,16 :- ಕೃಷಿಕ ಸಮಾಜ ನವದೆಹಲಿ ರಾಜ್ಯಧ್ಯಕ್ಷೆ ಬಿ.ಮಾಣಿಕ್ಯ ಚಿಲ್ಲೂರು ಇವರ ಸಯೋಗದೊಂದಿಗೆ ಹಾಗೂ ಜಿಲ್ಲಾಧ್ಯಕ್ಷರಾದ ಪ್ರಕಾಶ ಎಸ್.ಪಟ್ಟೇದ್ ಹಾಗೂ ಕುಷ್ಟಗಿ ತಾಲೂಕು ಅಧ್ಯಕ್ಷ ನಾಗನಗೌಡ ಆರ್ ಪಾಟೀಲ್ ಇವರ ನೇತೃತ್ವದಲ್ಲಿ ಜಿಲ್ಲಾ ಹಾಗೂ ತಾಲೂಕು, ಮತ್ತು ನಗರ ಘಟಕದ ಪದಾಧಿಕಾರಿಗಳ ಸಭೆ ಹಳೆ ಪ್ರವಾಸಿ ಮಂದಿರದಲ್ಲಿ ಕರೆಯಲಾಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಪ್ರಕಾಶ ಪಟ್ಟೇದ್ ಕೃಷಿಕ ಸಮಾಜ ಸಂಘಟನೆ ರಾಜ್ಯಾದ್ಯಂತ ಅಲ್ಲದೆ ಈ ನಮ್ಮ ಭಾರತ ದೇಶಾದ್ಯಂತ ಮಾಣಿಕ್ಯ ಬಿ.ಚಿಲ್ಲೂರ ಇವರು ರೈತರ ಏಳಿಗೆಗಾಗಿ ಸಾಕಷ್ಟು ರೀತಿಯಲ್ಲಿ ಸಂಘಟಿಸುತ್ತಾ ರೈತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ ಎಂದರು. ಕೃಷಿಕ ಸಮಾಜ ನವದೆಹಲಿ ಜಿಲ್ಲಾ ಕಾನೂನು ಸಲಹೆಗಾರ ನಾಗರಾಜ ಉಪ್ಪಾರ ಮಾತನಾಡಿ ನಮ್ಮ ರೈತರು ಸರಕಾರದ ಸೌಲಭ್ಯವನ್ನು ಪಡೆಯುವಲ್ಲಿ ಯಾರು ಮುಂದೆ ಬರುತ್ತಿಲ್ಲ ಆದ್ದರಿಂದ ರೈತರ ಪರ ಕೃಷಿಕ ಸಮಾಜ ನಿಂತು ನ್ಯಾಯ ಕೊಡಿಸುವಂತ ಕೆಲಸ ಆಗಬೇಕು ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಘಟಕದ ಕಾನೂನು ಸಲಹೆಗಾರ ನಾಗರಾಜ ಉಪ್ಪಾರ, ಜಿಲ್ಲಾ ಉಪಾಧ್ಯಕ್ಷರು, ಹನಮೇಶ ಭೋವಿ, ರಮೇಶ ಕೂಡ್ಲೂರು ಜಿಲ್ಲಾ ಪ್ರಧಾನ ಕಾರ್ಯಧರ್ಶಿ, ಶರಣಬಸವ ಡಿ. ಮುದಗಲ್ ಜಿಲ್ಲಾ ಸಂಘಟನಾ ಕಾರ್ಯಧರ್ಶಿ, ತಾಲೂಕು ಘಟಕದ ಉಪಾಧ್ಯಕ್ಷ ಅಮರೇಶ ನಾಗರಾಳ, ರಾಮನಗೌಡ ಪೋಲಿಸ್ ಪಾಟೀಲ ತಾಲೂಕು ಗೌರವ ಅಧ್ಯಕ್ಷರು, ವೀರೇಶ ಕಲಗುಡಿ ತಾಲೂಕು ಪ್ರಧಾನ ಕಾರ್ಯಧರ್ಶಿ, ನೀರುಪಾದಿ ಗಾಣದಾಳ ತಾಲೂಕು ಸಂಚಾಲಕರು, ಮುತ್ತಣ್ಣ ಹೊಸಮನಿ ನಗರ ಘಟಕದ ಅಧ್ಯಕ್ಷರು, ನಗರ ಘಟಕದ ಉಪಾಧ್ಯಕ್ಷ ಬಸವರಾಜ ಶಾಂತಪ್ಪ ಭೋವಿ, ಇನ್ನೊರ್ವ ನಗರ ಘಟಕದ ಉಪಾಧ್ಯಕ್ಷ ಲಕ್ಷ್ಮಣ ಭೋವಿ, ಈಶಪ್ಪ ಭೋವಿ ನಗರ ಘಟಕದ ಕಾರ್ಯದರ್ಶಿ, ಹೊನ್ನಪ್ಪ (ಮುಕ್ಕಣ್ಣ ಯಲಬುರ್ತಿ) ಖಂಜಾಚಿ, ಹನಮಂತಪ್ಪ ದ್ಯಾರಗ್ಲಿ ಸದಸ್ಯರು ಈ ಎಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಹಸಿರು ಶಾಲ್ ಹಾಕಿ ಅಭಿನಂದಿಸಿ ಇವರುಗಳನ್ನು ಆಯ್ಕೆ ಮಾಡಲಾಯಿತು.

Leave a Comment

Your email address will not be published. Required fields are marked *

Translate »
Scroll to Top