ಶ್ರೀ ಬಸವ ಸೇವಾ ಟ್ರಸ್ಟ್ ವತಿಯಿಂದ ಆಹಾರ ದಿನಸಿ ಸಾಮಗ್ರಿಗಳ ವಿತರಣೆ

ಕುಷ್ಟಗಿ : ಶ್ರೀ ಬಸವ ಸೇವಾ ಟ್ರಸ್ಟ್ ವತಿಯಿಂದ ಮೈಲಾಪೂರ ಗ್ರಾಮದ ನರಸಪ್ಪ ಕುಷ್ಟಗಿ ಹಿರಿಯ ಮಗನಾದ ಹುಲುಗಪ್ಪ ತಂದೆ ನರಸಪ್ಪ ಕುಷ್ಟಗಿ ಇತನು ಗ್ಯಾಂಗ್ರೀನ ರೋಗಕ್ಕೆ ತುತ್ತಾಗಿ ಜೀವನ್ಮರಣದೊಂದಿಗೆ ಹೋರಾಡತ್ತಿದ್ದು ಇವರ ಕುಟುಂಬ ಕಡು ಬಡತನದಿಂದ ಕೂಡಿದ್ದು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಿಗೆ ಸುಮಾರು 2-3 ತಿಂಗಳಿಗೆ ಆಗುವಷ್ಟು ಆಹಾರ ದಿನಸಿ ಸಾಮಗ್ರಿಗಳನ್ನು ನೀಡಿ ಅವರಿಗೆ ಸಾಂತ್ವಾನವನ್ನು ಹೇಳಲಾಯಿತು.

ಶ್ರೀ ಬಸವ ಸೇವಾ ಟ್ರಸ್ಟಿನ ಅಧ್ಯಕ್ಷರಾದ ಅಮರೇಶಪ್ಪ ಬನ್ನೂರು ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಶರಣಪ್ಪ ಉಪ್ಪಾರ ಮಾತನಾಡಿ ಶ್ರೀ ಬಸವ .ಸೇವಾ ಟ್ರಸ್ಟ್ ಸದಾ ನಿಮ್ಮೊಂದಿಗೆ ಇರುತ್ತದೆ ಎಂಬ ಭರವಸೆಯ ಮಾತುಗಳನ್ನಾಡಿದರು. ಈ ಶಿವರಾಜ್ ಬನ್ನೂರು ಮಾತಾಡಿ ಸೊಸೈಟಿ ವತಿಯಿಂದ ವಿಮೆ ಪಾಲಿಸಿ ಮಾಡಿಸಿ ಕೊಡುವುದಾಗಿ ಭರವಸೆ ನೀಡಿದರು.ಇದೆ ಸಂದರ್ಭದಲ್ಲಿ ಅಮರೇಶ ಮೈಲಾಪುರ ಹಾಗೂ ತೋಟಯ್ಯ ಅಂಗಡಿ ಶಿಕ್ಷಕರು ಮಾತಾಡಿ ನೊಂದ ಜೀವಕ್ಕೆ ಆಸರೆ ನೀಡುವ ಮೂಲಕ ಮಾನವೀಯತೆಯನ್ನು ಬಸವ ಸೇವಾ ಟ್ರಸ್ಟ್ನ ಸದಸ್ಯರು ಮೆರಿದಿದ್ದಾರೆ ಎಂದರು.

ಟ್ರಸ್ಟಿನ ಸದಸ್ಯರುಗಳಾದ ದೊಡ್ಡೇಶ್ ಕುರ್ತಕೋಟಿ,ನೀಲಕಂಠಪ್ಪ ಪಾನಶಾಪ,ಬಸವರಾಜ ಕಲ್ಮಂಗಿ ,ಮರಿಯಪ್ಪ ಮಡಿವಾಳ, ಮಲ್ಲಿಕಾರ್ಜುನ ಗಿರಿಣಿ,ಬಸವರಾಜ ಕುರ್ತಕೋಟಿ,ಬಸವರಾಜ ಮುಕ್ಕುಂದಿ, ಶಿವರಾಜ್ ಬನ್ನೂರು, ಶಿವು ಗೋನಾಳ, ಶರಣಬಸವ ದಾಸನಾಳ ಹಾಗೂ ಊರಿನ ಯುವಕರಾದ ಶರಣಪ್ಪ ಪನ್ನಾಪುರ, ಬಸವರಾಜ ಮುಕ್ಕುಂದಿ,ಭಾಗಪ್ಪ ತಳವಾರ,ರಹೀಮಾನ್ ಸಾಬ್ ಬಸವನಗೌಡ ಭೋಗಾಪುರ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top