100 ಕುಂಬಾರರು ಹಾಗೂ 40 ಮಹಿಳೆಯರಿಗೆ ಅಗಬತ್ತಿ ಉತ್ಪಾದಿಸುವ ಯಂತ್ರ ಉಚಿತವಾಗಿ ವಿತರಣೆ

ಬೆಂಗಳೂರು, ಮಾ, 12; ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಖಾದಿ ಮತ್ತೊ ಗ್ರಾಮೋದ್ಯೋಗ ವಲಯಕ್ಕೆ ಹೊಸ ಆಯಾಮ ನೀಡಿದ್ದು, ಖಾದಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ. ಮಣ್ಣಿನ ಲೋಟ, ಅಗರಬತ್ತಿಗೆ ವ್ಯಾಪಕ ಬೇಡಿಕೆ ಇದೆ ಎಂದು ಕೆವಿಐಸಿಯ ಅಧ್ಯಕ್ಷ ವಿನಯ್ ಕುಮಾರ್ ಸಕ್ಸೇನಾ ಹೇಳಿದ್ದಾರೆ. ಕೇಂದ್ರ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ, ಎಂಎಸ್ಎಂಇ ಸಚಿವಾಲಯ ಹಾಗೂ ಕೇಂದ್ರ ಸರ್ಕಾರದ “ಗ್ರಾಮೋದ್ಯೋಗ್ ವಿಕಾಸ್ ಯೋಜನೆ”ಯಡಿ ವಿಜನಾಪುರದ ದೂರವಾಣಿ ನಗರದ ಖಾದಿ ವಿಲೇಜ್ ನಲ್ಲಿ ಗ್ರಾಮೀಣ ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಮಡಿಕೆ ಮಾಡುವ 100 ಯಂತ್ರಗಳು, ಅಗರಬತ್ತಿ ಉತ್ಪಾದಿಸುವ 40 ಸುಧಾರಿತ ಯಂತ್ರಗಳನ್ನು ಮಹಿಳೆಯರಿಗೆ ಉಚಿತವಾಗಿ ವಿತರಿಸಿದರು. ಇದೇ ಸಂದರ್ಭದಲ್ಲಿ ಸಗಣಿಯಿಂದ ನೈಸರ್ಗಿಕ ಬಣ್ಣ ಉತ್ಪಾದಿಸುವ ಘಟಕವನ್ನು ಉದ್ಘಾಟಿಸಿದರು. ಇದು ದಕ್ಷಿಣ ಭಾರತದಲ್ಲೇ ಮೊದಲ ಘಟಕವಾಗಿದೆ.

ದೇಶದಲ್ಲಿ ಅಗರಬತ್ತಿಗೆ ವ್ಯಾಪಕ ಬೇಡಿಕೆ ಇದ್ದು. ಪ್ರತಿದಿನ 40 ಲಕ್ಷ ಟನ್ ಅಗರ ಬತ್ತಿಗೆ ಬೇಡಿಕೆ ಇದೆ. ಆದರೆ ನಮ್ಮಲ್ಲಿ 8 ರಿಂದ 10 ಲಕ್ಷ ಟನ್ ಮಾತ್ರ ಉತ್ಪಾದನೆಯಾಗುತ್ತಿದೆ. ಚೈನಾ ಮತ್ತಿತರ ದೇಶದಗಳಿಂದ ಶೇ 85 ಕ್ಕೂ ಹೆಚ್ಚು ಅಗರಬತ್ತಿ ಆಮದು ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಬೇಡಿಕೆಗೆ ತಕ್ಕಂತೆ ಅಗರಬತ್ತಿ ಉತ್ಪಾದಿಸಲು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಸುಧಾರಿತ ಯಂತ್ರಗಳನ್ನು ವಿತರಿಸುತ್ತಿದ್ದು, ಇದರಿಂದ ಉತ್ಪಾದನೆ ಹೆಚ್ಚಾಗುತ್ತಿದೆ. ಹೆಚ್ಚು ಜನ ಅಗರಬತ್ತಿ ಉತ್ಪಾದನೆಯತ್ತ ಆಸಕ್ತಿ ತೋರಿದರೆ ಹೆಚ್ಚಿನ ಆದಾಯ ಗಳಿಸಬಹುದು ಎಂದು ಹೇಳಿದರು. ಕರ್ನಾಟಕ ಗುಣಮಟ್ಟದ ಖಾದಿ ಉತ್ಪಾದನೆಗೆ ಖ್ಯಾತಿ ಪಡೆದಿದ್ದು, ದೇಶದ ಎಲ್ಲಾ ಪ್ರದೇಶಗಳಲ್ಲೂ ಖಾದಿ ಉತ್ಪಾದನೆಗೆ ವಿಪುಲ ಅವಕಾಶಗಳಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವಾತಂತ್ರೋತ್ತರದಲ್ಲಿ ಖಾದಿಗೆ ಹೊಸ ಆಯಾಮ, ಹೊಸ ಸ್ಪರ್ಷ ನೀಡಿದ್ದಾರೆ. ಇದರಿಂದ ಖಾದಿಗೆ ಹೊಸ ಬ್ರ್ಯಾಂಡ್ ಸೃಷ್ಟಿಯಾಗಿದ್ದು, ಮಾರಾಟ ಹೆಚ್ಚಾಗಿದೆ. ಹೊಸ ವಿನ್ಯಾಸದಲ್ಲಿ ಖಾದಿ ಕಂಗೊಳಿಸುತ್ತಿದ್ದು, ಇದರಿಂದ ಆದಾಯ ಹೆಚ್ಚಾಗಿದೆ ಎಂದರು.

ಮಡಿಕೆ ಮಾಡುವ ಕುಂಬಾರ ಸಮುದಾಯದ ತೀವ್ರ ಸಂಕಷ್ಟದಲ್ಲಿರುವುದನ್ನು ಪರಿಗಣಿಸಿದ ಪ್ರಧಾನಮಂತ್ರಿ ಅವರು, ಮೂರು ವರ್ಷಗಳ ಹಿಂದೆ ಈ ವಲಯದಲ್ಲಿ ಹೊಸ ಬದಲಾವಣೆ ತಂದರು. ಸ್ವಾತಂತ್ರ್ಯೋತ್ತರದ ನಂತರ ಈ ಸಮುದಾಯದ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಮೂರು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಎಲೆಕ್ಟ್ರಿಕಲ್ ಯಂತ್ರಗಳನ್ನು ನೀಡಿದ್ದು, ಇವರ ಶ್ರಮ ಕಡಿಮೆಯಾಗಿದೆ. ಉತ್ಪಾದನೆ ವೃದ್ದಿಸಿದೆ ಎಂದರು, ಮಡಿಕೆ ಮಾಡುವ ಯಂತ್ರಗಳನ್ನು ಆಯೋಗದ ಮೂಲಕ ವ್ಯಾಪಕವಾಗಿ ವಿತರಣೆ ಮಾಡಲಾಗುತ್ತಿದೆ. ಇಂದು ವಿತರಿಸಿರುವ ಈ ಯಂತ್ರ ಇವರ ಜೀವನ ಚಕ್ರದಲ್ಲಿ ಮಹತ್ವದ ಬದಲಾವಣೆ ತರಲಿದೆ. ಭಾರತೀಯ ರೈಲ್ವೆಯಲ್ಲಿ ಇದೀಗ ಮಣ್ಣಿನ ಲೋಟದಲ್ಲಿ ನೀರು, ಚಹಾ ಸೇವನೆಗಾಗಿ ಬಳಕೆಯಾಗುತ್ತಿದೆ. ಹೋಟೆಲ್ ಗಳಲ್ಲೂ ಸಹ ಇದನ್ನು ಖರೀದಿಸುವಂತೆ ಮನವೊಲಿಸಲಾಗುತ್ತಿದೆ. ದೇಶದ ನೂರಾರು ಕೋಟಿ ಜನ ದಿನದಲ್ಲಿ ಒಂದು ಎರಡು ಬಾರಿ ಚಹಾ ಸೇವಿಸುತ್ತಾರೆ. ಇಂತಹವರು ಒಂದು ಬಾರಿ ಮಣ್ಣಿನ ಲೋಟ ಬಳಸಿದರೆ ಕೋಟ್ಯಂತರ ಕುಂಬಾರ ಸಮುದಾಯಕ್ಕೆ ಅನುಕೂಲವಾಗಲಿದೆ ಎಂದರು. ಕಾರ್ಯಕ್ರಮದಲ್ಲಿ ಕೆ.ವಿ.ಐ.ಸಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top