ರಾಮನಗರ,ಜ, 10 : ನಿಮಗೆ ಕೊರೋನಾ ಬಂದಿದೆ,ಚೆಕ್ ಮಾಡಬೇಕು ಎಂದು ಅಧಿಕಾರಿಗಳು ನನ್ನ ಬಳಿ ಬಂದಿದ್ದರು. ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚು ಎಂದು ತೋರಿಸಲು ಹುನ್ನಾರ. ಜನರನ್ನು ಕಂಡ ಕಂಡಲ್ಲಿ ಬೆದರಿಸಲಾಗುತ್ತಿದೆ.ಕೊರೋನಾ ಸಂಖ್ಯೆ ಹೆಚ್ಚಳ ಎಂದು ಭೋಗಸ್ ಲೆಕ್ಕ ತೋರಿಸಲಾಗುತ್ತಿದೆ. ಕೊರೋನಾ ಹೆಸರಿನಲ್ಲಿ ಯಾವ ಮಟ್ಟದ ಭ್ರಷ್ಟಾಚಾರ ನಡೆದಿದೆ ಎಂದು ನನಗೆ ಗೊತ್ತು. ರ್ಯಾಲಿ ಮಾಡಬೇಡಿ ಎಂದು ನನಗೆ ನೋಟೀಸ್ ಕೊಟ್ಟಿದ್ದಾರೆ.ಇದು ಕಾನೂನು ಬಾಹಿರ.
