ದೇವನಹಳ್ಳಿ:
ಕಾರ್ತಿಕ ಹುಣ್ಣಿಮೆಯ ದಿನವು ಅತ್ಯಂತ ಮಹತ್ವದ ದಿನ. ಈ ದಿನ ಕೈಗೊಳ್ಳುವ ಪೂಜಾ ಕ್ರಮ, ವ್ರತ ಆಚರಣೆ, ಪವಿತ್ರ ಸ್ನಾನ ಹಾಗೂ ದಾನ-ಧರ್ಮಗಳನ್ನು ಮಾಡಿದರೆ ನೂರು ಅಶ್ವಮೇಧ ಯಜ್ಞಗಳನ್ನು ಮಾಡಿದಷ್ಟು ಪುಣ್ಯ ಪ್ರಾಪ್ತಿಯಾಗುವುದು ಎಂದು ಶ್ರೀ ರೇಣುಕಾ ಎಲ್ಲಮ್ಮ ದೇವಿ ಕಲಾ ಬಳಗದ ಗೌರವಾಧ್ಯಕ್ಷ ಡಿ.ಎಂ. ಮುನಿಯಪ್ಪ ತಿಳಿಸಿದರು.
ದೇವನಹಳ್ಳಿ ತಾಲ್ಲೂಕು ವಿಜಯಪುರದ ಶ್ರೀ ರೇಣುಕಾ ಎಲ್ಲಮ್ಮದೇವಿ ದೇವಾಲಯದಲ್ಲಿ ದೇವನಹಳ್ಳಿ ವಂಶಸ್ಥರ ಕುಟುಂಬದವರ ವತಿಯಿಂದ ಕಾರ್ತಿಕ ಹುಣ್ಣಿಮೆಯ ಪ್ರಯುಕ್ತ ಎಲ್ಲಮ್ಮದೇವಿಗೆ ಏರ್ಪಡಿದ್ದ ವಿಶೇಷ ಹೂವಿನ ಅಲಂಕಾರ ಮತ್ತು ಪೂಜಾ ಕಾರ್ಯ ದಲ್ಲಿ ಪಾಲ್ಗೊಂಡು ಮಾತನಾಡಿ, .
ಕಾರ್ತಿಕ ಪೂರ್ಣಿಮೆಯ ದಿನ ಕೈಗೊಳ್ಳುವ ಶ್ರೇಷ್ಠ ವಿಧಿ-ವಿಧಾನಗಳಿಂದ ಅರ್ಥ, ಧರ್ಮ, ಕಾಮ ಮತ್ತು ಮೋಕ್ಷಗಳನ್ನು ಪಡೆದುಕೊಳ್ಳುಬಹುದು ಎಂದು ಪುರಾಣ ಕಥೆಗಳು ತಿಳಿಸುತ್ತವೆ.ಕಾರ್ತಿಕ ಹುಣ್ಣಿಮೆಯ ವಿಶೇಷ ದಿನದಂದು ಪರಶಿವನಿಂದ ತಿಮಿರಾಸುರ ನ ಸಂಹಾರ ವಾದದ್ದು ಹಾಗೂ ವಿಶೇಷವಾಗಿ ಕಾರ್ತಿಕ ದೀಪಾವಳಿಯನ್ನು (ಕಿರು ದೀಪಾವಳಿ) ಪಾಂಡವ ವಂಶಸ್ಥರು ಹಾಗೂ ಕೃಷ್ಣನ ಆರಾಧಕರು ಆದ ತಿಗಳ ಜನಾಂಗದವರು ತಲೆತಾಲಂತರದಿಂದ ಆಚರಿಸಿಕೊಂಡು ಹೋಗುತ್ತಿರುವುದು ವಿಶೇಷ ಎಂದು ತಿಳಿಸಿದರು.
ಶ್ರೀ ರೇಣುಕಾ ಎಲ್ಲಮ್ಮ ದೇವಿ ಕಲಾ ಬಳಗದ ವತಿಯಿಂದ ಭಕ್ತಿಗೀತೆಗಳ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ಪೂಜಾ ಕಾರ್ಯದಲ್ಲಿ ದೇವಾಲಯದ ಎಲ್ಲಾ ಕುಲಬಾಂದವರು ಧರ್ಮರಾಯಸ್ವಾಮಿ ದೇವಾಲಯದ ಮುಖಂಡರು ಹಾಗೂ ಪಟ್ಟಣದ ಭಕ್ತಾದಿಗಳು ಇದ್ದರು.