ದೇವನಹಳ್ಳಿ : ಪಟ್ಟಣದ ಶ್ರೀ ಗಂಗಾಪರಮೇಶ್ವರಿ ದೇವಾಲಯದ ಆವರಣದಲ್ಲಿ ನಿಜ ಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತಿಯ ಅಂಗವಾಗಿ ದೇವಾಲಯದ ನಾಮಫಲಕ ಕೊಡುಗೆಯಾಗಿ ನೀಡಿರುವ ಪುರಸಭಾ ಸದಸ್ಯ ವೈ.ಆರ್.ರುದ್ರೇಶ್ ಅವರನ್ನು ದೇವಾಲಯ ಸಮಿತಿಯ ವತಿಯಿಂದ ಅಭಿನಂದಿಸಲಾಯಿತು.

ಗಂಗಾಪರಮೇಶ್ವರಿ ಅಭಿವೃದ್ದಿ ಟ್ರಸ್ಟ್ ಅಧ್ಯಕ್ಷ ಆರ್.ಗೋಪಾಲ್, ನಗರ ಘಟಕದ ಅಧ್ಯಕ್ಷ ಜಿ.ರಾಘವೇಂದ್ರ, ಕರ್ನಾಟಕ ರಾಜ್ಯ ಗಂಗಮತಸ್ಥರ ಸಂಘದ ಸಂಘಟನಾ ಕಾರ್ಯದರ್ಶಿ ಮುನಿರಾಜ್, ತಾಲೂಕು ಅಧ್ಯಕ್ಷ ರಾಮಾಂಜಿನಪ್ಪ, ಮುಖಂಡರಾದ ಆದಿನಾರಾಯಣ, ಸುರೇಶ್, ವೆಂಕಟೇಶ್, ಮುನಿಕೃಷ್ಣಪ್ಪ, ನಾರಾಯಣಸ್ವಾಮಿ, ಕೃಷ್ಣಪ್ಪ, ರಾಮಚಂದ್ರಪ್ಪ, ವೆಂಕಟೇಶಪ್ಪ, ಗೋಪಾಲಪ್ಪ, ರಾಮಣ್ಣ, ಮುನಿರಾಜು, ಮಂಜುರಾಜ್, ಮಂಜುನಾಥ್, ಅಂಬಿಗರ ಚೌಡಯ್ಯ ಯುವಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಹೆಚ್.ಜಿ.ಮಹೇಶ್, ಕಾರ್ಯಾಧ್ಯಕ್ಷ ಜಿ.ನಂದಕುಮಾರ್, ಖಜಾಂಚಿ ವೆಂಕಟೇಶ್, ನಿರ್ದೇಶಕರಾದ ವಸಂತ್, ರವಿಕುಮಾರ್, ಮನೋಜ್, ನಾಗೇಶ್, ದೇವರಾಜ್, ತಾಲೂಕು ಮಟ್ಟದ ಅಧಿಕಾರಿಗಳು, ಸಮುದಾಯದ ಮುಖಂಡರು ಇದ್ದರು.