ವಾಲ್ಮೀಕಿಯವರ ತತ್ವ ಆದರ್ಶ ಇಂದಿಗೂ ಪ್ರಸ್ಥುತ

ದೇವನಹಳ್ಳಿ : ಪುರಾಣ ಗ್ರಂಥಗಳ ಪ್ರಕಾರ, ಮಹರ್ಷಿ ವಾಲ್ಮೀಕಿ ಪವಿತ್ರ ರಾಮಾಯಣವನ್ನು ರಚಿಸಿದ್ದಾರೆ. ಅದಕ್ಕಾಗಿಯೇ ವಾಲ್ಮೀಕಿ ಜಯಂತಿಗೆ ವಿಶೇಷ ಮಹತ್ವವಿದೆ. ವಾಲ್ಮೀಕಿ ಜಯಂತಿಯು ವಾಲ್ಮೀಕಿ ಸಮಾಜದಲ್ಲಿ ಮಾತ್ರವಲ್ಲದೆ ಇಡೀ ಹಿಂದೂ ಸಮಾಜದೊಂದಿಗೆ ಮಹತ್ವ ಹೊಂದಿದೆ. ಸಂಸ್ಕೃತ ಭಾಷೆಯ ಅತ್ಯುನ್ನತ ವಿದ್ವಾಂಸರಾದ ಮಹರ್ಷಿ ವಾಲ್ಮೀಕಿಯವರ ಜನ್ಮದಿನವನ್ನು ದೇಶದ ಅನೇಕ ಭಾಗಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ವಾಲ್ಮೀಕಿಯವರು ಅನೇಕ ದುಶ್ಕೃತ್ಯಗಳಲ್ಲಿ ತೊಡಗಿದ್ದರು ಆದರೆ ನಾರದ ಮುನಿಯ ಮಾತು ಕೇಳಿದ ನಂತರ ಅವರ ಜೀವನವು ಮಹತ್ತರ ತಿರುವನ್ನು ಪಡೆದುಕೊಂಡು ಮಹರ್ಷಿ ವಾಲ್ಮೀಕಿ ಎಂದು ಪ್ರಸಿದ್ಧರಾದರು ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.

ದೇವನಹಳ್ಳಿ ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಹರ್ಷಿ ವಾಲ್ಮೀಕಿ ಜಯವನ್ನು ಸರಳವಾಗಿ ಆಚರಿಸಿ ಮಾತನಾಡಿ ಸೂರ್ಯಚಂದ್ರರಿರುವರೆಗೂ ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಅಮರಕಾವ್ಯವಾಗಿರುತ್ತದೆ ಮತ್ತು ಇದನ್ನು ರಚಿಸಿರುವ ಮಹರ್ಷಿ ವಾಲ್ಮೀಕಿಯೂ ಅಮರ ಕವಿಯಾಗಿರುತ್ತಾರೆ ಎಂದು ಮಹಾಕವಿ ವಾಲ್ಮೀಕಿಯನ್ನು ಅವರ ಜಯಂತಿ ಆಚರಿಸುವ ಮೂಲಕ ಸ್ಮರಿಸೋಣ ಇಂತಹ ಅನನ್ಯವಾದ ರಾಮಾಯಣ ಮಹಾಕಾವ್ಯವನ್ನು ರಚಿಸಿದ ಮಹರ್ಷಿ ವಾಲ್ಮೀಕಿಯನ್ನು ‘ಕವಿಗಳ ಕವಿ’ ಎಂದು ಮಹಾಕವಿ ಕಾಳಿದಾಸ ಗೌರವಿಸಿದ್ದಾರೆ ಎಂದು ಬಣ್ಣಿಸಿದರು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಅನಿಲ್ ಕುಮಾರ್ , ವಾಲ್ಮೀಕಿ ಸಂಘದ ತಾಲ್ಲೂಕು ಅಧ್ಯಕ್ಷ ನಾಗೇಶ್ ಬಾಬು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಸಮಾಜದ ಮುಖಂಡರು ಮತ್ತಿತರರು ಇದ್ದರು.


Leave a Comment

Your email address will not be published. Required fields are marked *

Translate »
Scroll to Top