ಸೌರವ್ ಗಂಗೂಲಿ ಹೆಸರಿನಲ್ಲಿರುವ ಅಪರೂಪದ ರೆಕಾರ್ಡ್‌ಗಳು ಯಾವುವು ಗೊತ್ತಾ : ದಾದಾ ಹುಟ್ಟುಹಬ್ಬದ ಸಂಭ್ರಮ!
ಭಾರತೀಯ ಕ್ರಿಕೆಟ್‌ನ ದಿಕ್ಕನ್ನೇ ಬದಲಿಸಿದ ಕ್ರಿಕೆಟಿಗ ಅಂದ್ರೆ ಅದು ಸೌರವ್ ಗಂಗೂಲಿ. ದಾದಾ ಬ್ಯಾಟಿಂಗ್‌ನಲ್ಲಿ ಧೈರ್ಯ, ನಾಯಕತ್ವದಲ್ಲಿ ಛಲ, ಹೊಸ ಚೈತನ್ಯ ತುಂಬಿದ ಕ್ಯಾಪ್ಟನ್. ಕ್ರಿಕೆಟ್ ಇತಿಹಾಸದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಗಂಗೂಲಿ ಹುಟ್ಟುಹಬ್ಬ ಇಂದು.
ನಾಲ್ಕು ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿ ಪಡೆದ ಏಕೈಕ ಕ್ರಿಕೆಟಿಗ ಎನ್ನುವ ಹೆಗ್ಗಳಿಕೆ ಸೌರವ್ ಗಂಗೂಲಿ ಹೆಸರಿನಲ್ಲಿದೆ. ಒಡಿಐ ಕ್ರಿಕೆಟ್‌ನಲ್ಲಿ ಇದೊಂದು ಅಪರೂಪದ ಸಾಧನೆ. ದಾದಾ ಹೊರತುಪಡಿಸಿ ಮತ್ತೆ ಯಾವ ಆಟಗಾರನಿಗೂ ಇದು ಸಾಧ್ಯವಾಗಿಲ್ಲ.
ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್‌ನಲ್ಲಿ 11,363 ರನ್‌ಗಳಿಸಿದ ಅಗ್ರಕ್ರಮಾಂಕದ ಎಡಗೈ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದಾರೆ. ಇದಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತಿಹೆಚ್ಚು ರನ್ ಬಾರಿಸಿದ ಎಡಗೈ ಅಗ್ರಕ್ರಮಾಂಕದ ಬ್ಯಾಟರ್‌ಗಳ ಪೈಕಿ ಕುಮಾರ ಸಂಗಕ್ಕರ, ಸನತ್ ಜಯಸೂರ್ಯ ನಂತರ ದಾದಾ ಮೂರನೇ ಸ್ಥಾನದಲ್ಲಿದ್ದಾರೆ.
ಈ ಇಬ್ಬರಿಂದಲೇ ನನ್ನ ಕ್ರಿಕೆಟ್ ಜೀವನ ಬೇಗ ಮುಗಿಯಿತು: ಹೊಸ ಬಾಂಬ್ ಸಿಡಿಸಿದ ಶಿಖರ್ ಧವನ್
ಈ ಇಬ್ಬರಿಂದಲೇ ನನ್ನ ಕ್ರಿಕೆಟ್ ಜೀವನ ಬೇಗ ಮುಗಿಯಿತು: ಹೊಸ ಬಾಂಬ್ ಸಿಡಿಸಿದ ಶಿಖರ್ ಧವನ್
ರೂಪಾಲಿ ಗಂಗೂಲಿ ಮನೆ ಹೇಗಿದೆ ನೋಡಿ; ಕಣ್ ಕಣ್, ಬಾಯ್ ಬಾಯ್ ಬಿಟ್ಟಲ್ಲಾ ಅಂದ್ರೆ ಹೇಳಿ..!
ರೂಪಾಲಿ ಗಂಗೂಲಿ ಮನೆ ಹೇಗಿದೆ ನೋಡಿ; ಕಣ್ ಕಣ್, ಬಾಯ್ ಬಾಯ್ ಬಿಟ್ಟಲ್ಲಾ ಅಂದ್ರೆ ಹೇಳಿ..!
ಬ್ಯಾಟಿಂಗ್ ಮಾತ್ರವಲ್ಲ, ಬೌಲಿಂಗ್‌ನಲ್ಲೂ ದಾದಾ ಮಿಂಚಿದ್ದಾರೆ. ಒಡಿಐನಲ್ಲಿ 10,000ಕ್ಕೂ ಹೆಚ್ಚು ರನ್, 100ಕ್ಕೂ ಹೆಚ್ಚು ವಿಕೆಟ್ ಪಡೆದ ಅಪರೂಪದ 6 ಆಟಗಾರರಲ್ಲಿ ಗಂಗೂಲಿ ಕೂಡಾ ಒಬ್ಬರು ಎನಿಸಿಕೊಂಡಿದ್ದಾರೆ.
1997 ರಿಂದ 2000 ರವರೆಗೆ ಸತತ ನಾಲ್ಕು ವರ್ಷ 1000ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಕ್ರಿಕೆಟಿಗ ಗಂಗೂಲಿ.
1997ರಲ್ಲಿ – 1338 ರನ್
1998ರಲ್ಲಿ – 1328 ರನ್
1999ರಲ್ಲಿ – 1767 ರನ್
2000ದಲ್ಲಿ – 1579 ರನ್
ದೊಡ್ಡ ಪಂದ್ಯಗಳಲ್ಲಿ ಮಿಂಚುವುದು ಗಂಗೂಲಿ ಸ್ಟೈಲ್. ಐಸಿಸಿ ಟೂರ್ನಿ ಫೈನಲ್ ಪಂದ್ಯದಲ್ಲಿ ಶತಕ ಬಾರಿಸಿದ ಏಕೈಕ ಭಾರತೀಯ ಆಟಗಾರ. ಐಸಿಸಿ ನಾಕೌಟ್ ಹಂತದಲ್ಲಿ ಮೂರು ಶತಕ ಬಾರಿಸಿದ ಮೂವರು ಆಟಗಾರರಲ್ಲಿ ದಾದಾ ಕೂಡಾ ಒಬ್ಬರು. ಉಳಿದ ಇಬ್ಬರು ಪಾಂಟಿಂಗ್ ಮತ್ತು ಸಯೀದ್ ಅನ್ವರ್.
ಗಂಗೂಲಿ ಸಿಡಿಸಿದ ಒಟ್ಟು 22 ಅಂತಾರಾಷ್ಟ್ರೀಯ ಏಕದಿನ ಶತಕಗಳಲ್ಲಿ 18 ಶತಕಗಳನ್ನು ವಿದೇಶದಲ್ಲೇ ಬಾರಿಸಿದ್ದಾರೆ. ಗಂಗೂಲಿ ಶತಕ ಬಾರಿಸಿದ ಹೆಚ್ಚಿನ ಪಂದ್ಯಗಳಲ್ಲಿ ಭಾರತ ಗೆದ್ದಿದೆ.ಆಸ್ಟ್ರೇಲಿಯಾದಲ್ಲಿ ಅಂತಾರಾಷ್ಟ್ರೀಯ ಏಕದಿನ ಶತಕ ಬಾರಿಸಿದ ಮೊದಲ ಭಾರತೀಯ ಗಂಗೂಲಿ. ಆಸೀಸ್ ಪಿಚ್‌ಗಳಲ್ಲಿ ಶತಕ ಬಾರಿಸುವುದು ಕಷ್ಟ ಎನಿಸಿದ್ದ ಕಾಲದಲ್ಲಿ 90ರ ದಶಕದಲ್ಲೇ ಈ ಸಾಧನೆ ಮಾಡಿದ್ದಾರೆ.ಎಲ್ಲರನ್ನೂ ಮುನ್ನಡೆಸುವ ಸಾಮರ್ಥ್ಯ, ಆಟದಲ್ಲಿ ಉತ್ಸಾಹ, ಆಟಗಾರರಲ್ಲಿ ಧೈರ್ಯ ತುಂಬಿದ ನಾಯಕತ್ವ. ಭಾರತೀಯ ಕ್ರಿಕೆಟ್‌ಗೆ ಹೊಸ ದಿಕ್ಕು ತೋರಿಸಿದ ಸೌರವ್ ಗಂಗೂಲಿ ಹೆಸರು ಕ್ರಿಕೆಟ್ ಇರುವವರೆಗೂ ಚಿರಸ್ಥಾಯಿಯಾಗಿ ಉಳಿಯುತ್ತದೆ. ದಾದಾಗೆ ಹುಟ್ಟುಹಬ್ಬದ ಶುಭಾಶಯಗಳು.