ಪ್ರೀತಿ, ವಿಶ್ವಾಸ ಮೂಲಕ ಕ್ರೀಡಾ ಮನೋಭಾವನೆ ಬೆಳಸಿಕೊಳ್ಳಿ: ಡಿ.ಆರ್.ವಿಜಯಸಾರಥಿ

ಗೋವಿಂದರಾಜನಗರ: ವಾಸವಿ ಜ್ಞಾನಪೀಠ ಫಸ್ಟ್ ಗ್ರೆಡ್ ಕಾಲೇಜು ಸಭಾಂಗಣ. ಅಂತರಕಾಲೇಜು ಕ್ರೀಡಾಕೂಟ-23 ಪ್ರಶಸ್ತಿ ವಿಜೇತ ತಂಡಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ.ಸಂಸ್ಥೆಯ ಕಾರ್ಯದರ್ಶಿ ಡಿ.ಆರ್.ವಿಜಯಸಾರಥಿರವರು ಮತ್ತು ಪ್ರಾಂಶುಪಾಲರುಗಳಾದ ಪದ್ಮರವರು,ರಚನ, ರಂಗಸ್ವಾಮಿ, ಸೌಭಾಗ್ಯ ರವರು ಗೆದ್ದ ತಂಡಗಳಿಗೆ ಬಹುಮಾನ ವಿತರಿಸಿದರು . 

 

16ಕಾಲೇಜಿನ 500ಕ್ರೀಡಾಪಟುಗಳು ಪಾಲ್ಗೊಂಡಿದ್ದರು.ಹುಡುಗಿಯರ ಥ್ರೋಬಾಲ್ ಪ್ರಥಮ ಸ್ಥಾನ ವಾಸವಿ ಜ್ಞಾನ ಪೀಠ ಫಸ್ಟ್ ಗ್ರೆಡ್ ಕಾಲೇಜು , ರನ್ನರ್ ಅಪ್ ವಾಸವಿ ಶಿಕ್ಷಣ ಸಂಸ್ಥೆ.  ಯುವಕರ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ವಿವೇಕಾನಂದ ಕಾಲೇಜು, ದ್ವಿತೀಯ ಸ್ಥಾನ ವಾಸವಿ ಜ್ಞಾನಪೀಠ ಫಸ್ಟ್ ಗ್ರೆಡ್ ಕಾಲೇಜ್.  ಕ್ರಿಕೆಟ್ ನಲ್ಲಿ ಪ್ರಥಮ ಸ್ಥಾನ ವಿ.ಇ.ಟಿ ಫಸ್ಟ್ ಗ್ರೆಡ್ ಕಾಲೇಜ್, ದ್ವಿತಿಯ ಸ್ಥಾನ ವಾಸವಿ ಗ್ರೂಪ್ ಆಫ್ ಎಜುಕೇಷನಲ್ ಇನ್ಸಟ್ಯೂಷನ್   ಫೈನಲ್ ಪಂದ್ಯದಲ್ಲಿ ಜಯಗಳಿಸಿದ ತಂಡಗಳಿಗೆ ಪ್ರಥಮ ಸ್ಥಾನ ಗಳಿಸಿದವರಿಗೆ 10ನಗದು ಪುರಸ್ಕಾರ ಜೊತೆಯಲ್ಲಿ ಪಾರಿತೋಷಕ ನೀಡಲಾಯಿತು.  

ವಿಜಯಸಾರಥಿರವರು ಮಾತನಾಡಿ ಜೀವನದಲ್ಲಿ ಸಾಧನೆ ಮಾಡಲು ವಿದ್ಯಾರ್ಥಿಗಳಲ್ಲಿ ಶಿಸ್ತ್ರು, ಸಂಯಮ ಮುಖ್ಯ ಮನುಷ್ಯ, ಮನುಷ್ಯರ ನಡುವೆ ಪ್ರಿತಿ, ವಿಶ್ವಾಸ ಮುಖ್ಯ. ಕ್ರೀಡಾ ಚಟುವಟಿಕೆಗಳಲ್ಲಿ ಎಲ್ಲರು ಭಾಗವಹಿಸಿದಾಗ ಆತ್ಮೀಯತೆ ಬೆಳೆಯುತ್ತದೆ.  ಕ್ರೀಡೆಗಳಲ್ಲಿ ಆಟ ಆಡುವಾಗ ಕ್ರೀಡಾ ಮನೋಭಾವನೆ ಬೆಳೆಸಿಕೊಂಡಾಗ ಸ್ನೇಹಮಯವಾಗಿ ವೈಸುದೈವ ಕುಟುಬಂ ಎಂಬಂತೆ ಎಲ್ಲರು ನೆಮ್ಮದಿಯಾಗಿ ಬದುಕಬಹುದು.  ಜೀವನದಲ್ಲಿ ಸಾಧನೆ ಮಾಡಬೇಕಾದರೆ ಗುರಿ ಮತ್ತು ಗುರು ಇರಬೇಕು. ಪಾಠ ಮತ್ತು ಕ್ರೀಡೆಗಳಲ್ಲಿ ಗುರುಗಳ ಮಾರ್ಗದರ್ಶನದಲ್ಲಿ ನಡೆದರೆ ಯಶ್ವಸಿ ಸಿಗುವುದು ಸುಲಭ.ಎರಡು ದಿನಗಳ ಕಾಲ ಯಶ್ವಸಿಯಾಗಿ ಕ್ರೀಡಾ ಕೂಟ ಜರುಗಿತು ಮತ್ತು ಮಾನಸಿಕ, ದೃಹಿಕವಾಗಿ ಸಧೃಡವಾಗಿ ಕ್ರೀಡಾ ಚಟುವಟಿಕೆ ಮುಖ್ಯ.ಯುವ ಶಕ್ತಿಯನ್ನ ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡಾಗ ದೇಶ ಅಭಿವೃದ್ದಿ ಸಾಧ್ಯ ಎಂದು ಹೇಳಿದರು.

ಕ್ರೀಡಾಕೂಟ-2023ರಲ್ಲಿ ಯುವತಿಯ ಥ್ರೋಬಾಲ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ವಾಸವಿ ಜ್ಞಾನಪೀಠ ಫಸ್ಟ್ ಗ್ರೆಡ್ ಕಾಲೇಜಿನ ಕ್ರೀಡಾ ಪಟುಗಳಿಗೆ ಕಾರ್ಯದರ್ಶಿ ಡಿ.ಆರ್.ವಿಜಯಸಾರಥಿರವರು ಬಹುಮಾನ ವಿತರಿಸಿದರು.

 

ಪ್ರಾಂಶುಪಾಲರಾದ ಪದ್ಮ,ರಚನ, ರಂಗಸ್ವಾಮಿ, ಸೌಭಾಗ್ಯರವರು ಉಪಸ್ಥಿತರಿದ್ದರು.

Facebook
Twitter
LinkedIn
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top