ಭಾರತದಲ್ಲಿ ಅರಾಜಕತೆ ಹುಟ್ಟುಹಾಕುವ ಸಂಚು: ಸಿ.ಟಿ.ರವಿ ಆತಂಕ

ಬೆಂಗಳೂರು: ಕಾಂಗ್ರೆಸ್ಸಿಗರು ದೇಶದಲ್ಲಿ ಅರಾಜಕತೆಯನ್ನು ಹುಟ್ಟುಹಾಕುವ ಸಂಚು ನಡೆಸುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಇದು ಆತಂಕಕಾರಿಇದು ಪ್ರಜಾಪ್ರಭುತ್ವ- ಸಂವಿಧಾನ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಕೃತ್ಯ ಎಂದು ರಾಜ್ಯ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಗಮನ ಸೆಳೆದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಬಾಂಗ್ಲಾ ರೀತಿಯ ಕ್ಷೋಭೆ ಸಂಘರ್ಷ ಭಾರತದಲ್ಲೂ ನಡೆಯುವ ದಿನ ದೂರವಿಲ್ಲ. ಬಾಂಗ್ಲಾದಲ್ಲಿ ಹೇಗೆ ಸಂಸತ್ತಿಗೆ ನುಗ್ಗಿದರೋ ಹಾಗೇ ಭಾರತದಲ್ಲೂ ನುಗ್ಗುತ್ತಾರೆಬಾಂಗ್ಲಾ ಪ್ರಧಾನಿಗೆ ಯಾವ ರೀತಿ ಆಗಿದೆಯೋ ಅದೇರೀತಿ ಭಾರತದ ಪ್ರಧಾನಿಗೂ ಆಗಲಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಖುರ್ಷಿದ್ ಆಲಂ ಖಾನ್ ಮತ್ತು ಮಧ್ಯಪ್ರದೇಶದ ಕಾಂಗ್ರೆಸ್ ಮುಖಂಡ ಸಜ್ಜನ್ ಸಿಂಗ್ ವರ್ಮ ಅವರ ಹೇಳಿಕೆ ಕಾಕತಾಳೀಯವಲ್ಲ ಎಂದು ಅನಿಸುತ್ತಿಲ್ಲ ಎಂದು ವಿಶ್ಲೇಷಿಸಿದರು.

ಖುರ್ಷಿದ್ ಆಲಂ ಖಾನ್ ಮತ್ತು ಸಜ್ಜನ್ ಸಿಂಗ್ ವರ್ಮ ಅವರ ವಿರುದ್ಧ ಮೊಕದ್ದಮೆ ದಾಖಲಿಸಬೇಕು. ಅವರನ್ನು ತನಿಖೆಗೆ ಒಳಪಡಿಸಬೇಕು. ಇದು ಕಾಂಗ್ರೆಸ್ ಅಜೆಂಡವೇ ಅಥವಾ ಅವರ ವೈಯಕ್ತಿಕ ಹೇಳಿಕೆಯೇ ಎಂಬುದನ್ನು ರಾಹುಲ್ ಗಾಂಧಿಯವರು ಮತ್ತು ಎಐಸಿಸಿ ಅಧ್ಯಕ್ಷರು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ವ್ಯಕ್ತಿಗತ ಹೇಳಿಕೆ ಆಗಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.

ನನಗೆ ಬಂದ ಮಾಹಿತಿ ಪ್ರಕಾರ ಸಾಮೂಹಿಕವಾಗಿ ಬೇರೆಬೇರೆ ರೀತಿಯ ಚಳವಳಿಗಳನ್ನು ದೇಶದ ಉದ್ದಗಲಕ್ಕೂ ಸಂಘಟಿಸಿ ಭಾರತದಲ್ಲೂ ಇಂಥ ಕುಕೃತ್ಯ ನಡೆಸುವ ಸಂಚು ನಡೆಸಿದ್ದಾರೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಸಿ.ಟಿ.ರವಿ ಅವರು ಕೇಂದ್ರ- ರಾಜ್ಯ ಸರಕಾರವನ್ನು ಒತ್ತಾಯಿಸಿದರು.

1947ರಲ್ಲಿ ಭಾರತ ವಿಭಜನೆ ಆಗಿತ್ತು. ವಿಭಜನೆ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ ಮುಸ್ಲಿಮೇತರರ ಜನಸಂಖ್ಯೆ ಶೇ 28ರ ಹತ್ತಿರದಲ್ಲಿತ್ತು. ಬಾಂಗ್ಲಾ ದೇಶದಲ್ಲಿದ್ದ ಮುಸ್ಲಿಮೇತರರ ಜನಸಂಖ್ಯೆ ಸುಮಾರು ಶೇ 42ರಷ್ಟಿತ್ತು. ಇವತ್ತು ಬಾಂಗ್ಲಾದಲ್ಲಿ ಅವರ ಸಂಖ್ಯೆ ಶೇ 8 ಆಗಿದ್ದರೆಪಾಕಿಸ್ತಾನದಲ್ಲಿ ಶೇ 3 ಮಾತ್ರ. ಉಳಿದವರು ಏನಾದರುಅವರಿಗೆ ಅಸುರಕ್ಷತೆಯ ವಾತಾವರಣ ಉಂಟಾಯಿತೇಕೆಲವರು ಹತ್ಯೆಗೆ ಒಳಗಾದರುಕೆಲವರು ಭಯದಿಂದ ಓಡಿಬಂದರುಇನ್ನೂ ಹಲವರು ಮತಾಂತರಗೊAಡರು. ಅದೇ ಭಾರತದಲ್ಲಿ 1947ರಲ್ಲಿ ಶೇ 8ರಿಂದ 9 ರಷ್ಟು ಧಾರ್ಮಿಕ ಅಲ್ಪಸಂಖ್ಯಾತರು ಇದ್ದರು. ಈಗ ಶೇ 22-23 ಶೇ. ತಲುಪಿದ್ದಾರೆ. ಇಲ್ಲಿ ಏರುಗತಿಯ ಬೆಳವಣಿಗೆಅಲ್ಲಿ ಸಮಗ್ರ ಕುಸಿತ ಎಂದು ವಿಶ್ಲೇಷಿಸಿದರು.

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು ಜನರಿಂದ ಮತ ಪಡೆದು ಆಯ್ಕೆಯಾದ ಸರಕಾರವನ್ನು ಬೀಳಿಸುವ ಸಂಚು ಬಹಳ ಹಿಂದೆಯೂ ನಡೆದಿತ್ತು. ಇದು ಪೌರತ್ವ ಕೊಡುವ ಕಾಯ್ದೆಪೌರತ್ವ ಕಿತ್ತುಕೊಳ್ಳುವುದಿಲ್ಲ ಎಂದು ಹೇಳಿದ್ದರೂ ಸಿಎಎ ವಿರೋಧಿಸಿ ಪ್ರತಿಭಟನೆಚಳವಳಿ ನಡೆಸಿದ್ದರು. ಬಾಂಗ್ಲಾಅಪಘಾನಿಸ್ತಾನಪಾಕಿಸ್ತಾನದಿಂದ ಧಾರ್ಮಿಕ ಕಾರಣದಿಂದ ದೌರ್ಜನ್ಯಕ್ಕೆ ಒಳಗಾಗಿ ದೇಶ ತೊರೆದು ಭಾರತಕ್ಕೆ ಬಂದಿದ್ದಾರೋ ಆ ಜನರಿಗೆ ಪೌರತ್ವ ಕೊಡುವ ಕಾಯ್ದೆ ಎಂದು ಸ್ಪಷ್ಟಪಡಿಸಿದ್ದರೂ ಸುಳ್ಳು ಸುದ್ದಿ ಹರಡಿಸಲಾಗಿತ್ತು. ಮುಸಲ್ಮಾನರ ಪೌರತ್ವ ಕಿತ್ತುಕೊಂಡು ದೇಶದಿಂದ ಹೊರಗೆ ಹಾಕುತ್ತಾರೆಂಬ ಸುಳ್ಳು ಸುದ್ದಿ ಹರಡಿಸಲಾಗಿತ್ತು ಎಂದು ವಿವರಿಸಿದರು.

ದಲ್ಲಾಳಿಗಳ ಕಪಿಮುಷ್ಟಿಯಿಂದ ಮಾರುಕಟ್ಟೆಯನ್ನು ಮುಕ್ತಗೊಳಿಸುವರೈತರ ನೆರವಿಗೆ ಬರುವ ಕೃಷಿ ಕಾಯ್ದೆ ತಂದಾಗ ಕೂಡ ರೈತ ಚಳವಳಿ ಹೆಸರಿನಲ್ಲಿ ಕೆಂಪುಕೋಟೆಯ ಮೇಲೆ ಖಲಿಸ್ಥಾನ್ ಧ್ವಜ ಹಾರಿಸಿದ್ದರು. ಆ ಸಂದರ್ಭದಲ್ಲೂ ಸಂಸತ್ತಿಗೆ ನುಗ್ಗುವಅರಾಜಕತೆ ಸೃಷ್ಟಿಸುವ ಸಂಚು ನಡೆದಿತ್ತು ಎಂದು ತಿಳಿಸಿದರು.

ಈಚೆಗೆ ಇಂಗ್ಲೆAಡಿಗೆ ಹೋಗಿದ್ದ ಕಾಂಗ್ರೆಸ್ ನಾಯಕವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಅಲ್ಲಿ ನಡೆದ ಸಭೆಯಲ್ಲಿ ವಿದೇಶಿ ಶಕ್ತಿಗಳ ಮಧ್ಯಪ್ರವೇಶಕ್ಕೆ ಆಹ್ವಾನ ಕೊಟ್ಟಿದ್ದರು. ಭಾರತದ ಸರ್ವಾಧಿಕಾರ ಕೊನೆಗಾಣಿಸಲು ವಿದೇಶಿ ಶಕ್ತಿಗಳ ಮಧ್ಯಪ್ರವೇಶಕ್ಕೆ ಕೋರಿದ್ದರು. ಇದಾದ ಬಳಿಕ ಚುನಾಯಿತ ಸರಕಾರಗಳನ್ನು ಬುಡಮೇಲು ಮಾಡುವ ತಜ್ಞ ಎನಿಸಿಕೊಂಡ ಹಾಗೂ ಹಣಬಲನೀತಿಯ ಕಾರಣದಿಂದ ಕುಖ್ಯಾತಿ ಪಡೆದ ಜಾರ್ಜ್ ಸೊರೊಸ್ ಅವರ ಹೇಳಿಕೆ ಗಮನಿಸಿದಾಗ ನಮ್ಮ ದೇಶದಲ್ಲೂ ಅರಾಜಕತೆಯ ಸಂಚು ನಡೆಸಿದ್ದಾಗಿ ಅನಿಸುತ್ತದೆ ಎಂದರು.

ಭಾರತದ ಇಸ್ಲಾಮೀಕರಣದ ಅಜೆಂಡ ಇವತ್ತಿನದಲ್ಲ. 8ನೇ ಶತಮಾನದಲ್ಲಿ ಗಜ್ವಾ ಇ ಹಿಂದ್ ಫತ್ವಾ ಹೊರಡಿಸಿದ್ದರು. ಬಳಿಕ ಭಾರತದ ಇಸ್ಲಾಮೀಕರಣದ ಅಜೆಂಡ ಇಟ್ಟುಕೊಂಡು ನಿರಂತರ ಆಕ್ರಮಣಗಳು ನಡೆದಿದ್ದವು. ನೂರಕ್ಕೆ ನೂರು ಬೌದ್ಧ ಮತ್ತು ಹಿಂದೂ ಅನುಯಾಯಿಗಳಿದ್ದ ಗಾಂಧಾರ ಇವತ್ತು ಅಪಘಾನಿಸ್ತಾನವಾಗಿ ಪರಿವರ್ತನೆಗೊಂಡಿತು. ಅದರ ವಿಸ್ತೃತ ರೂಪವೇ ಪಾಕಿಸ್ತಾನ. ಗಜ್ವಾ ಇ ಹಿಂದ್ ವಿಸ್ತರಣೆ ಸ್ವತಂತ್ರ ಭಾರತದಲ್ಲೂ ನಿಂತಿಲ್ಲ ಎಂದು ವಿವರಿಸಿದರು.

 

ಇದು ನಮಗೆ ಎಚ್ಚರಿಕೆಯ ಗಂಟೆ. ದೇಶಹಿತದಹಿಂದುತ್ವದ ರಾಜಕಾರಣ ಇಂದಿನ ಅಗತ್ಯ. ಆಗ ಮಾತ್ರ ದೇಶ ಉಳಿಯುತ್ತದೆ. ಆಗ ಮಾತ್ರ ಡಾ.ಅಂಬೇಡ್ಕರರ ವಿಚಾರಧಾರೆಗೆ ಬೆಲೆ ಲಭಿಸಲು ಸಾಧ್ಯ ಎಂದು ಅವರು ತಿಳಿಸಿದರು.

Facebook
Twitter
LinkedIn
WhatsApp
Email
Telegram
Print

Leave a Comment

Your email address will not be published. Required fields are marked *

Translate »
Scroll to Top