ಎಫ್‌ಕೆಸಿಸಿನಲ್ಲಿ ವರ್ತಕರ ರಾಷ್ಟ್ರೀಯ ಮಂಡಳಿ ಸಭೆ; ಐದು ಟ್ರಿಲಿಯನ್ ಅರ್ಥ ವ್ಯವಸ್ಥೆ ರಾಷ್ಟ್ರವನ್ನಾಗಿ ಮಾಡಲು ಕೊಡುಗೆ ನೀಡಿ – ಸುನೀಲ್ ಸಿಂಗ್
ಬೆಂಗಳೂರು : ರಾಷ್ಟ್ರೀಯ ವರ್ತಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘದಿಂದ ಎಫ್.ಕೆ.ಸಿ.ಸಿ.ಐ ಸಭಾಂಗಣದಲ್ಲಿ ವರ್ತಕರ ಬೈಹತ್ ಸಭೆ ಆಯೋಜಿಸಲಾಗಿತ್ತು. ರಾಷ್ಟ್ರೀಯ ವರ್ತಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸುನೀಲ್ ಸಿಂಗ್ ಮಾತನಾಡಿ, ದೇಶದ ಆರ್ಥಿಕ ಬೆಳವಣಿಗೆಯಲ್ಲಿ ವ್ಯಾಪಾರಿಗಳು ಮಹತ್ವದ ಪಾತ್ರ ವಹಿಸುತ್ತಿದ್ದು, ದೇಶವನ್ನು ಐದು ಟ್ರಿಲಿಯನ್ ಡಾಲರ್ ಅರ್ಥ ವ್ಯವಸ್ಥೆ ಹೊಂದಿರುವ ರಾಷ್ಟವನ್ನಾಗಿ ರೂಪಿಸಲು ಮಹತ್ವದ ಕೊಡುಗೆ ನೀಡುತ್ತಿದ್ದಾರೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರ ಕಲ್ಪನೆಯಂತೆ ಭಾರತವು ಆರ್ಥಿಕತೆಯಲ್ಲಿ 3 ನೇ ಸ್ಥಾನವನ್ನು ತಲುಪಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಪ್ರಧಾನಿ ಮೋದಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಮಂಡಳಿಯು ಪ್ರತಿ ಹಂತದಲ್ಲೂ ನೀಡುತ್ತಿದ್ದಾರೆ ಎಂದರು.
ರಾಷ್ಟ್ರೀಯ ವರ್ತಕರ ಕಲ್ಯಾಣ ಸಂಘದ (ಕರ್ನಾಟಕ) ಆಡಳಿತ ಮಂಡಳಿ ಸದಸ್ಯ ಪ್ರಕಾಶ್ ಪಿರಗಲ್ ಅವರು ವ್ಯಾಪಾರಿಗಳಿಗೆ ಪಿಂಚಣಿ ಯೋಜನೆ ಕುರಿತು ಮಾಹಿತಿ ನೀಡಿದರ. ಸಂಸದ ಪಿ.ಸಿ. ಮೋಹನ್, ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ಎಫ್‌ಕೆಸಿಸಿಐ ಅಧ್ಯಕ್ಷ ಬಿ.ವಿ.ಗೋಪಾಲ್ ರೆಡ್ಡಿ, ಎಫ್‌ಕೆಸಿಸಿಐ ಅಧ್ಯಕ್ಷ ಚುನಾಯಿತ ರಮೇಶ್ ಚಂದ್ರ ಲಾಹೋಟಿ ಮತ್ತು ವಿವಿಧ ಸಂಸ್ಥೆಗಳು, ವರ್ತಕರ ಸಂಘಗಳ ಪ್ರತಿನಿಧಿಗಳು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.