ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣ; ತನಿಖೆಯ ನಂತರ ಸತ್ಯಾಸತ್ಯತೆ ಬೆಳಕಿಗೆ

ಹಾಸನ : ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂದಿಸಿದಂತೆ ಈಗಾಗಲೇ ಮುಖ್ಯಮಂತ್ರಿಗಳು ತನಿಖೆಗೆ ಆದೇಶಿಸಿದ್ದು, ಆನಂತರ ಸತ್ಯಾಸತ್ಯತೆ ತಿಳಿಯಲಿದೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು ಹಾಸನ ತಾಲ್ಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,

ಈಶ್ವರಪ್ಪ ನವರು ಇಂದು ಸಂಜೆ ರಾಜಿನಾಮೆ ಕೊಡೊದಾಗಿ ಹೇಳಿದ್ದಾರೆ. ಉಳಿದಂತೆ ಪ್ರಕರಣ ದ ಸತ್ಯಾಸತ್ಯತೆ ಏನೆಂದು ತನಿಖೆಯ ನಂತರ ತಿಳಿದುಬರಲಿದೆ ಎಂದರು. ಇದರಲ್ಲಿ ಯಾರಾರು ಇದಾರೆ, ಯಾರ ಶಡ್ಯಂತ್ರ ಇದೆ, ಯಾರು ಬಲಿಪಶು ಆದರು ಎನ್ನೋದು ರಾಜ್ಯದ ಜನರಿಗೆ ತಿಳಿಯಬೇಕು. ಒಬ್ಬ ಗುತ್ತಿಗೆದಾರ 40 ಪರ್ಸೆಂಟ್ ಲಂಚ ಕೊಡ್ತಾರೆ ಎಂದರೆ ಆತ ಉತ್ತಮನಾ? ಅವರು ಲಂಚಾ ಕೊಡ್ತಾರೆ ಎಂದು ಎಷ್ಟು ಧೈರ್ಯದಿಂದ ಹೇಳ್ತಾರೆ. ಅವರು ಲಂಚ ಕೊಟ್ಟಿದ್ದರೆ ಅದೂ ತಪ್ಪಲ್ಲವೇ ಎಂದು ಪ್ರಶ್ನಿಸಿದರು. ಆ ರೀತಿ 40 ಪರ್ಸೆಂಟ್ ನಡೆಯೋಕೆ ಸಾಧ್ಯಾನಾ? 40 ಪರ್ಸೆಂಟ್ ಕೊಟ್ಟರೆ ಅವನು ಕೆಲಸ ಹೇಗೆ ಮಾಡ್ತಾರೆ ಹೇಳಿ ಎಂದ ಸಚಿವರು,ಈ 40 ಪರ್ಸೆಂಟ್ ಎನ್ನೋದು ಒಂದು ಕಟ್ಟು ಕತೆ ಎಂದರು.

Leave a Comment

Your email address will not be published. Required fields are marked *

Translate »
Scroll to Top