ಕಾಂಗ್ರೆಸ್ ತೆಕ್ಕೆಗೆ ಕುರುಗೋಡು ಪುರಸಭೆ : ಬಿಜೆಪಿಗೆ ಮುಖಬಂಗ

ಕುರುಗೋಡು.ಡಿ,30 : ಕುರುಗೋಡು ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಬಹುಮತ ಪಡೆದಿದೆ. 23 ಕ್ಷೇತ್ರಗಳಲ್ಲಿ 15 ಕ್ಷೇತ್ರ ಕಾಂಗ್ರೆಸ್ ಗೆದ್ದಿದ್ದು, 7 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಶೀಲರಾಗಿದ್ದಾರೆ. ಒಂದು ಕ್ಷೇತ್ರಕ್ಕೆ ಪಕ್ಷೇತರ ತೃಪ್ತಿಪಟ್ಟುಕೊಂಡಿದೆ. ಕಾಂಗ್ರೆಸ್ ತೆಕ್ಕೆಗೆ ಪುರಸಭೆ ಅಧಿಕಾರ ಹಿಡಿದಿದ್ದು, ಫಲಿತಾಂಶದಿಂದ ಮಾಜಿ ಶಾಸಕ ಸುರೇಶ್ ಬಾಬುಗೆ ಭಾರಿ ಮುಖಭಂಗವಾಗಿದೆ. ಕಾಂಗ್ರೆಸ್ ತೆಕ್ಕೆಗೆ ಕುರುಗೋಡು ಪುರಸಭೆ ಬಂದಿದ್ದು, ಪಟಾಕಿ ಸಿಡಿಸಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ ಆಚರಿಸಿದ್ದಾರೆ.

ಇದೆ ವೇಳೆ ಹಾಲಿ ಶಾಸಕ ಜೆ. ಎನ್. ಗಣೇಶ್ ಮಾತನಾಡಿ, ಪುರಸಭೆ ಚುನಾವಣೆ ಯಲ್ಲಿ ಅತಿ ಹೆಚ್ಚು ಕಾಂಗ್ರೆಸ್ ಅಭ್ಯರ್ಥಿ ಗಳು ಜಯ ಶೀಲಾರಗಿದ್ದು, ಕ್ಷೇತ್ರದ ಜನತೆಗೆ ಧನ್ಯವಾದಗಳು ತಿಳಿಸುತ್ತಾ ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಅಭಿವೃದ್ಧಿ ಚುರುಕಾಗಿ ಗೊಳ್ಳಲಿದೆ ಎಂದರು ಇದೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ನೂತನವಾಗಿ ಗೆದ್ದ ಅಭ್ಯರ್ಥಿ ಗಳು ಸೇರಿದಂತೆ ಇತರರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top