ಕಿಚ್ಚ ಸುದೀಪ್ ‘ಬಿಗ್ ಬಾಸ್’ ನ ಮುಂದಿನ 4 ಸೀಸನ್‌ಗಳಿಗೆ ಒಪ್ಪಂದ: ಸುದೀಪ್ ಹೋಸ್ಟ್ ಆಗಿ ಕನ್‌ಫರ್ಮ್
ಬಿಗ್ ಬಾಸ್’ ಪ್ರಿಯರಿಗೆ ಬಿಗ್ ಗುಡ್ ನ್ಯೂಸ್ ಸಿಕ್ಕಿದೆ. ‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಹೋಸ್ಟ್ ಆಗಿ ಮುಂದುವರೆಯೋದು ಕನ್‌ಫರ್ಮ್ ಆಗಿದೆ. ಬರೀ ಇದೊಂದು ಸೀಸನ್ ಮಾತ್ರವಲ್ಲ. ಮುಂದಿನ ನಾಲ್ಕೂ ಸೀಸನ್‌ಗಳಿಗೂ.. ಅಂದ್ರೆ ‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಂದ ‘ಬಿಗ್ ಬಾಸ್ ಕನ್ನಡ ಸೀಸನ್ 15’ ವರೆಗೂ ಹೋಸ್ಟ್ ಆಗಿ ಸುದೀಪ್ ಅವರೇ ಇರಲಿದ್ದಾರೆ. ಆ ರೀತಿ ‘ಬಿಗ್ ಬಾಸ್’ ಆಯೋಜಕರು ಹಾಗೂ ಕಿಚ್ಚ ಸುದೀಪ್ ಮಧ್ಯೆ ಒಪ್ಪಂದ ಆಗಿದೆ. ಹಾಗಾದ್ರೆ, 4 ಸೀಸನ್‌ಗಳಿಗಾಗಿ ಕಿಚ್ಚ ಸುದೀಪ್‌ಗೆ ಸಿಗುವ ಸಂಭಾವನೆ ಎಷ್ಟು?
ಕಿಚ್ಚ ಸುದೀಪ್ ಅವರ ಸಂಭಾವನೆ ಬಗ್ಗೆ ಪ್ರೆಸ್‌ಮೀಟ್‌ನಲ್ಲಿ ಪ್ರಶ್ನೆಗಳು ತೂರಿಬಂತು. ಈ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್, ‘’ಪ್ರತಿ ವರ್ಷ ಬಾಡಿಗೆ ಹೆಚ್ಚಾಗುತ್ತದೆ. ನಾನು ಬಾಡಿಗೆಗೆ ಹೋಗಲಾ? ಲೀಸ್‌ಗೆ ಹೋಗಲಾ? ನನ್ನ ರೇಟ್ ಪಬ್ಲಿಕ್‌ನಲ್ಲಿ ಮಾತಾಡೋ ವಿಷ್ಯವಲ್ಲ. ನನ್ನ ರೇಟ್ ನಾನು ಕಟ್ಟಿಕೊಳ್ಳಲ್ಲ. ಅಷ್ಟು ಚೀಪ್ ಅಲ್ಲ ನಾನು’’ ಎಂದರು. ಹಾಗೇ, ‘’ಮುಂಬರುವ 4 ಸೀಸನ್‌ಗಳಿಗೆ ನಾವು ಟೈ ಅಪ್ ಆಗಿದ್ದೇವೆ’’ ಎಂಬ ವಿಚಾರವನ್ನ ಬಹಿರಂಗ ಪಡಿಸಿದರು.