ವಿದ್ಯಾರ್ಥಿಗಳ ಬದುಕಿನಲ್ಲಿ ಅಂಕಕ್ಕಿಂತ, ನಡೆತೆ ಮುಖ್ಯ – ರಾಜ್ಯ ಹೈಕೋರ್ಟ್ ನ್ಯಾ.ಇ.ಎಸ್. ಇಂದಿರೇಶ್

ಬೆಂಗಳೂರು: ವಿದ್ಯಾರ್ಥಿ ಬದುಕಿನಲ್ಲಿ ಅಂಕಗಳು ಮುಖ್ಯವಲ್ಲ. ಅಂಕಗಳಿಗೂ ವ್ಯಕ್ತಿತ್ವಕ್ಕೂ ಸಂಬಂಧವಿಲ್ಲ. ಎಲ್ಲಕ್ಕಿಂತ ನಡತೆ ಮುಖ್ಯ ಎಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಹೇಳಿದ್ದಾರೆ. 

ಅಕ್ಷರಸ್ಥರಾದ ಮಾತ್ರಕ್ಕೆ ಯಾರೂ ಶಿಕ್ಷಣ ತಜ್ಞರಾಗುವುದಿಲ್ಲ. ಸಮಾಜದಲ್ಲಿ ವ್ಯಕ್ತಿಗಳು ಉತ್ತಮವಾಗಿ ವರ್ತಿಸಲು ಸೂಕ್ತ ಶಿಕ್ಷಣ ಮತ್ತು ಮಾರ್ಗದರ್ಶನ ನೀಡುವುದು ಅಗತ್ಯ ಎಂದು ಪ್ರತಿಪಾದಿಸಿದ್ದಾರೆ.

ನಗರದ ಎಪಿಎಸ್ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ತರಗತಿಗಳನ್ನು ಶುಭರಂಭ ಮಾಡಿ ಮಾತನಾಡಿದ ಅವರು, ಕಲಾ ವಿಭಾಗವೂ ಕೂಡ ಅತ್ಯಂತ ಪ್ರಮುಖ ಶಿಕ್ಷಣವಾಗಿದೆ. ಕಲೆ ಅಧ್ಯಯನದ ಮೂಲಕ ನಾಗರಿಕ ಸೇವೆಗಳಿಗೆ ಸೇರ್ಪಡೆಗೊಳ್ಳಲು ಉತ್ತಮ ಅವಕಾಶವಿದೆ. ಪ್ರಥಮ ಪಿಯುಸಿ ನಿಮ್ಮ ಜೀವನದ ಮುಖ್ಯ ಘಟ್ಟ. ಹಾಗಾಗಿ ನಿಮ್ಮ ಜೀವನದ ಧ್ಯೇಯೋದ್ದೇಶಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಸದಾಶಯ ಇರುವುದು ಮುಖ್ಯ ಎಂದರು.

ಆಚಾರ್ಯ ಪಾಠಶಾಲಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ವಿಷ್ಣು ಭರತ್ ಅಲ್ಲoಪಲ್ಲಿ ಮಾತನಾಡಿ, ಇಂದು ಶಿಕ್ಷಣ ಕ್ಷೇತ್ರಕ್ಕೆ ಹೊಸ ಹೊಸ ಕೋರ್ಸ್ ಗಳು ಬರುತ್ತಿವೆ. ಜ್ಞಾನಾಧಾರಿತ ಶಿಕ್ಷಣ ಇದೀಗ ತಂತ್ರಜ್ಞಾನ ಆಧಾರಿತ ಶಿಕ್ಷಣವಾಗಿ ಪರಿವರ್ತನೆಯಾಗಿದೆ. ವಿದ್ಯಾರ್ಥಿಗಳು ತಮ್ಮ ಕೌಶಲ್ಯ ವೃದ್ಧಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ಪ್ರಾಂಶುಪಾಲರಾದ  ಎಸ್. ನಾಗರಾಜ್, ಉಪ ಪ್ರಾಂಶಪಾಲರಾದ ರಂಜಿನಿ. ಹೆಚ್. ಎಸ್, ಭೋದಕ,ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

 

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top