ಆಯುಷ್ಮಾನ್ ಭವಃ  ಅಭಿಯಾನಡಿಯ ಶಿಬಿರಗಳ ಮೂಲಕ ಕ್ಷಯರೋಗ ನಿರ್ಮೂಲನೆಗಾಗಿ ನಿಕ್ಷಯ ಮಿತ್ರರಾಗಿ ಮುಂದೆ ಬನ್ನಿ: ಡಾ ಇಂದ್ರಾಣಿ

ಬಳ್ಳಾರಿ:   ಆಯುಷ್ಮಾನ್‌ ಭವಃ ದಡಿಯ ಆರೋಗ್ಯ ತಪಾಸಣಾ ಶಿಬಿರಗಳ ಮೂಲಕ ಒಂದೆ ಸೂರಿನಡಿ ಆರೋಗ್ಯ ಸೇವೆಗಳನ್ನು ನೀಡಲಾಗುತ್ತಿದ್ದು ಕ್ಷಯರೋಗಿಗಳಿಗೆ ಬೆಂಬಲಬಾಗಿ ನಿಕ್ಷಯಮಿತ್ರರಾಗಿ ಮುಂದೆ ಬಂದು ಚಿಕಿತ್ಸೆ ಪಡೆಯುವ ರೋಗಿಗಳಿಗೆ ಶೀಘ್ರ ಗುಣಮುಖರಾಗಿಸಲು ಕೈಜೊಡಿಸಿ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ ಇಂದ್ರಾಣಿ. ವಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ  ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಬ್ರುಸ್‌‌ಪೇಟೆ ಇವರ ಆಶ್ರಯದಲ್ಲಿ ಆಯುಷ್ಮಾನ್‌ ಭವಃ ಅಭಿಯಾನದಡಿಯಲ್ಲಿ ಬಳ್ಳಾರಿ ನಗರದ ಕೋಟೆ ಆವರಣದಲ್ಲಿಯ ಜೈನ್‌ ಸಮುದಾಯ ಭವನದಲ್ಲಿ   ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣಾ ಶಿಬಿರಲ್ಲಿ  ಮಾತನಾಡುತ್ತಾ 2025 ಕ್ಷಯಮುಕ್ತರಾಗಲು ಇದು ಸದಾವಕಾಶವಾಗಿದ್ದು ಎರಡು ವಾರಗಳಿಗಿಂತ ಹೆಚ್ಚು ದಿನಗಳಿಂದ ಕೆಮ್ಮು ಇದ್ದಲ್ಲಿ ತಕ್ಷಣ ಪರೀಕ್ಷೆ ಮಾಡಿಸಲು ವಿನಂತಿಸಿ ಇಂದು 10 ಜನ ಕ್ಷಯರೋಗಿಗಳಿಗೆ ತಲಾ 05 ಜನರಿಗೆ ಮುಂದಿನ 06 ತಿಂಗಳುವರೆಗೆ ಪೌಷ್ಟಿಕ ಆಹಾರ ಒದಗಿಸಲು ಮುಂದೆ ಬಂದ 39ನೇ ವಾರ್ಡ್‌ ಕಾರ್ಪೋರೆಟರ್‌ ಶ್ರೀಮತಿ ಶಶಿಕಲಾ ಜಗನ್ನಾಥ್‌, ಹಾಗೂ ರಾಜೇಶ್ ಬಗರೇಚಾ ರವರಿಗೆ ಕೃತಜ್ಞತೆ ಸಲ್ಲಿಸಿದರು.

ಶಿಬಿರದ ಕುರಿತು ಡಾ ಮೋಹನಕುಮಾರಿ ತಾಲೂಕು ಆರೋಗ್ಯಾಧಿಕಾರಿ ಮಾತನಾಡಿ  ಸರಕಾರದ ಮಹತ್ವಾಕಾಂಕ್ಷಿ ಎಬಿ-ಪಿಎಮ್‌ಜೆಎವೈ-ಆರ್‌ಕೆ ಕಾರ್ಡ್‌ಗಳ ಮೂಲಕ ಬಿಪಿಎಲ್‌ ಕುಟುಂಬಗಳಿಗೆ ವಾರ್ಷಿಕ 5 ಲಕ್ಷದವರೆಗೆ ಹಾಗೂ ಎಪಿಎಲ್‌ ಕುಟುಂಬಗಳಿಗೆ ವಾರ್ಷಿಕ 1.5 ಲಕ್ಷದವರೆಗೆ ಉಚಿತ ಚಿಕಿತ್ಸಾ ವೆಚ್ಚವನ್ನು ಸುಸಜ್ಜಿತ ಸರಕಾರಿ ಅಥವಾ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯ ನೀಡಲಾಗುತ್ತಿದ್ದು, ನಗರದಲ್ಲಿ ಬಳ್ಳಾರಿ ಓನ್‌, ಕರ್ನಾಟಕ ಓನ್‌‌ ಸೇವಾ ಕೇಂದ್ರ, ಹಾಗೂ ಗ್ರಾಮೀಣ ಭಾಗದಲ್ಲಿ ಗ್ರಾಮ್‌-ಒನ್‌ ಸೇವಾ ಸೇವಾ ಕೇಂದ್ರಗಳಲ್ಲಿ ಮಾಡಲಾಗುತ್ತಿದ್ದು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಲು ಕೋರಿದರು. 

ಶಿಬಿರದಲ್ಲಿ 138 ಜನರ ಆರೋಗ್ಯ ತಪಾಸಣೆ ಮಾಡಲಾಗಿ, ಹೊಸದಾಗಿ 06-ರಕ್ತದೊತ್ತಡ, 03-ಸಕ್ಕರೆ ಖಾಯಿಲೆ ರೋಗಿಗಳು, ಪತ್ತೆಯಾದರು. 55-ಆಭಾ ಕಾರ್ಡ ನೋಂದಣಿ, 09 ಜನರನ್ನು ಕಣ್ಣಿನಪೋರೆ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಪಾಲಿಕೆಸದಸ್ಯರು ಶಶಿಕಲಾ ಜಗನ್ನಾಥ, ಆಡಳಿತ ವೈದ್ಯಾಧಿಕಾರಿ ಡಾ ಸುರೇಖಾ, ಮುಖಂಡರಾದ ಜಗನ್ನಾಥ, ರಾಜೇಶ ಬಗರೇಚಾ, ತಜ್ಞವೈದ್ಯರು ಡಾ ದರ್ಶನ, ಡಾ ಫರ್‌ಹೀನ್‌ ತಾಜ್‌, ಆರ್‌ಬಿಎಸ್‌ಕೆಯ ಡಾ ಪ್ರಸನ್ನ, ಸೇರಿದಂತೆ ಪಿಹೆಚ್‌ಸಿಓ, ಹೆಚ್‌ಐಓ, ಕ್ಷಯರೋಗ ವಿಭಾಗದ ಸಿಬ್ಬಂದಿಯವರು, ಆಶಾ ಕಾರ್ಯಕರ್ತೆಯರು, ಉಪಸ್ಥಿತರಿದ್ದರು.

Facebook
Twitter
LinkedIn
WhatsApp
Print
Email
Telegram

Leave a Comment

Your email address will not be published. Required fields are marked *

Translate »
Scroll to Top