ಇಂಡಿಯಾ vs ಇಂಗ್ಲೆಂಡ್ ಟೆಸ್ಟ್‌ಗೆ ಬುಮ್ರಾ ಲಭ್ಯತೆ ಬಗ್ಗೆ ಏನಂದ್ರು ಗೊತ್ತಾ ಕೋಚ್ ಗಂಭೀರ್ !
2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೇಗದ ಬೌಲರ್ ಹರ್ಷಿತ್ ರಾಣಾ ಭಾರತ ತಂಡದಿಂದ ಬಿಡುಗಡೆಗೊಂಡಿದ್ದಾರೆ.
ಮೊದಲ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಂಭೀರ್, ‘ಬುಮ್ರಾ ಕಾರ್ಯದೊತ್ತದ ನಿಭಾಯಿಸುವುದು ಮುಖ್ಯ. ಹೀಗಾಗಿ ಅವರನ್ನು 3 ಟೆಸ್ಟ್‌ನಲ್ಲಿ ಮಾತ್ರ ಆಡಿಸುತ್ತೇವೆ. ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ತಂಡದಲ್ಲಿ ಅನನುಭವಿ ಬೌಲರ್‌ಗಳು ಹೆಚ್ಚಿದ್ದಾರೆʼ ಎಂದಿದ್ದಾರೆ.
ಲಂಡನ್: ಪ್ರಧಾನ ವೇಗಿ ಜಸ್‌ಪ್ರೀತ್ ಬುಮ್ರಾ ಅವರನ್ನು ಇಂಗ್ಲೆಂಡ್ ಸರಣಿಯ ಎಲ್ಲಾ 5 ಪಂದ್ಯಗಳಲ್ಲಿಆಡಿಸುವ ಬಗ್ಗೆ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಮುಖ್ಯ ಕೋಚ್ ಗೌತಮ್ ಗಂಭೀರ್‌ಸ್ಪಷ್ಟನೆ ನೀಡಿದ್ದು, ಬುಮ್ರಾ 3 ಪಂದ್ಯಗಳಲ್ಲಿ ಮಾತ್ರ ಆಡಲಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಆದರೆ ಯಾವ 3 ಟೆಸ್ಟ್‌ನಲ್ಲಿ ಆಡಿಸಲಾಗುವುದು ಎಂಬ ಪ್ರಶ್ನೆಗೆ ಗಂಭೀರ್ ಸ್ಪಷ್ಟ ಉತ್ತರ ನೀಡಿಲ್ಲ. ‘ಅದರ ಬಗ್ಗೆ ನಿರ್ಧರಿಸಿಲ್ಲ. ಆದರೆ ಇನ್ನು 2 ಪಂದ್ಯಗಳಲ್ಲಿ ಮಾತ್ರ ಅವರು ಆಡಲಿದ್ದಾರೆ’ ಎಂದು ತಿಳಿಸಿದ್ದಾರೆ.
ಮೊದಲ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಂಭೀರ್, ‘ಬುಮ್ರಾ ಕಾರ್ಯದೊತ್ತದ ನಿಭಾಯಿಸುವುದು ಮುಖ್ಯ. ಹೀಗಾಗಿ ಅವರನ್ನು 3 ಟೆಸ್ಟ್‌ನಲ್ಲಿ ಮಾತ್ರ ಆಡಿಸುತ್ತೇವೆ. ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ತಂಡದಲ್ಲಿ ಅನನುಭವಿ ಬೌಲರ್‌ಗಳು ಹೆಚ್ಚಿದ್ದಾರೆʼ ಎಂದಿದ್ದಾರೆ.
ಎರಡನೇ ಟೆಸ್ಟ್ ಆರಂಭಕ್ಕೆ ಒಂದು ವಾರ ಅಂತರವಿರುವ ಕಾರಣ ಜಸ್‌ಪ್ರೀತ್ ಬುಮ್ರಾ ದ್ವಿತೀಯ ಟೆಸ್ಟ್‌ನಲ್ಲಿ ಆಡುವ ಸಾಧ್ಯತೆ ಅಧಿಕವಾಗಿದೆ. ಅಲ್ಲದೆ ಮೊದಲ ಪಂದ್ಯದ ಅಂತಿಮ ದಿನದಾಟದಲ್ಲಿ ಇಂಗ್ಲೆಂಡ್ ತಂಡದ ಗೆಲುವು ಖಚಿತವಾಗುತ್ತಿದ್ದಂತೆ ಬುಮ್ರಾ ಅವರನ್ನು ಬೌಲಿಂಗ್‌ನಿಂದ ಸಂಪೂರ್ಣ ಹೊರಗಿಟ್ಟು ವಿಶ್ರಾಂತಿ ನೀಡಲಾಗಿತ್ತು. ಈ ತಂತ್ರ ಕೂಡ ಬುಮ್ರಾ ಅವರನ್ನು ಎರಡನೇ ಟೆಸ್ಟ್‌ನಲ್ಲಿ ಆಡುವ ಮುಂದಾಲೋಚನೆ ಎನ್ನಲಾಗಿದೆ.
2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೇಗದ ಬೌಲರ್ ಹರ್ಷಿತ್ ರಾಣಾ ಭಾರತ ತಂಡದಿಂದ ಬಿಡುಗಡೆಗೊಂಡಿದ್ದಾರೆ. ಕಳೆದ ತಿಂಗಳು ತಂಡ ಪ್ರಕಟಿಸಿದಾಗ 23 ವರ್ಷದ ಹರ್ಷಿತ್‌ಗೆ ಸ್ಥಾನ ಸಿಕ್ಕಿರಲಿಲ್ಲ. ರಾಣಾ 2ನೇ ಟೆಸ್ಟ್‌ಗೆ ಬರ್ಮಿಂಗ್‌ಹ್ಯಾಮ್‌ಗೆ ತೆರಳಿದ ಭಾರತ ತಂಡದ ಜತೆ ಪ್ರಯಾಣಿಸದರೆ ತವರಿಗೆ ಮರಳಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ.