ಮೂಗಿನ ನೇರಕ್ಕಷ್ಟೇ ಯೋಚಿಸುವ ಸಿಎಂ: ರವಿಕುಮಾರ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಮೂಗಿನ ನೇರಕ್ಕೆ ಮಾತ್ರ ಯೋಚಿಸುವವರು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಆಕ್ಷೇಪಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಂಸರಾಜ್ ಭಾರದ್ವಾಜ್ ಅವರು ಈ ಹಿಂದೆ ಯಡಿಯೂರಪ್ಪ ಅವರ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದನ್ನು ಸಿದ್ದರಾಮಯ್ಯನವರು ಸ್ವಾಗತಿಸಿದ್ದರು. ಆಗ ಮಾನ್ಯ ಗವರ್ನರ್ ತೆಗೆದುಕೊಂಡ ಕ್ರಮವನ್ನು ಸ್ವಾಗತಿಸಿದ್ದ ಸಿದ್ದರಾಮಯ್ಯನವರು ಇವತ್ತಿನ ಗವರ್ನರ್ ತೆಗೆದುಕೊಂಡ ಕ್ರಮದ ಬಗ್ಗೆ ವಿರೋಧಿಸುತ್ತಾರೆ? ಅವತ್ತು ಸಂವಿಧಾನ ಬೇರೆ ಇತ್ತೇ? ಈವತ್ತಿನ ಸಂವಿಧಾನ ಬೇರೆ ಇದೆಯೇ? ಅದೇ ಸಂವಿಧಾನ ಅಲ್ಲವೇ? ಅದೇ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ 17 ಎ ಅಲ್ಲವೇ ಎಂದು ಪ್ರಶ್ನಿಸಿದರು.

ಬೇರೆಯವರು ಮಾಡಿದರೆ ಭ್ರಷ್ಟಾಚಾರ. ಇವರು ಮಾಡಿದರೆ ಅದು ಭ್ರಷ್ಟಾಚಾರ ಅಲ್ಲ ಎಂದು ಆಕ್ಷೇಪಿಸಿದರು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಈ ಧೋರಣೆಯನ್ನು ಬಿಜೆಪಿ ಖಂಡಿಸುತ್ತದೆ ಎಂದು ತಿಳಿಸಿದರು.

ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಅವರು ಮಾತನಾಡಿ, ಸುಳ್ಳನ್ನು ಹತ್ತು ಬಾರಿ ಹೇಳಿ ಅದನ್ನೇ ಸತ್ಯ ಎಂದು ಮಾಡಲು ಸಿದ್ದರಾಮಯ್ಯನವರು ಮುಂದಾಗಿದ್ದಾರೆ ಎಂದು ಟೀಕಿಸಿದರು. ಮುಡಾ ಅವ್ಯವಹಾರ ಸಂಬAಧ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತನಿಖೆ ಮಾಡಿಸಿ ವರದಿ ತರಿಸಿದ್ದರು. ಆ ವರದಿಯನ್ನು ಸಿದ್ದರಾಮಯ್ಯನವರು ಯಾಕೆ ಉಲ್ಲೇಖಿಸುತ್ತಿಲ್ಲ ಎಂದು ಪ್ರಶ್ನೆಯನ್ನು ಮುಂದಿಟ್ಟರು.

ಆ ವರದಿಯನ್ನು ಬಹಿರಂಗ ಪಡಿಸಿ. ಜವರ ಆ ಜಮೀನಿನ ಮಾಲಕರೇ ಅಲ್ಲ. ಸುಳ್ಳು ಹೇಳಿಕೊಂಡು, ಕೃಷ್ಣ ಬೈರೇಗೌಡ, ಸಿದ್ದರಾಮಯ್ಯನವರು ಮಾತನಾಡುತ್ತಾರೆ. ದಾಖಲಾತಿ ಪರಿಶೀಲಿಸಿ, ಅಂಕಿಅAಶ ಪರಿಶೀಲಿಸಿ ಅದರ ಆಧಾರದಲ್ಲೇ ಪ್ರಾಸಿಕ್ಯೂಶನ್‌ಗೆ ಅನುಮತಿ ಕೊಟ್ಟಿದ್ದಾಗಿ ರಾಜ್ಯಪಾಲರು ತಿಳಿಸಿದ್ದಾರೆ. ಮಾನ್ಯ ಗವರ್ನರ್ ಅವರು ಸಾಂವಿಧಾನಾತ್ಮಕವಾಗಿಯೇ ನಡೆದುಕೊಂಡಿದ್ದಾರೆ. ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರು ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಸವಾಲು ಹಾಕಿದರು.

ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷರಾದ ಕು. ಮಂಜುಳಾ ಅವರು ಮಾತನಾಡಿ, ರಾಜ್ಯ ಗೃಹ ಸಚಿವರು ಎಲ್ಲವನ್ನೂ ತಿಪ್ಪೆ ಸಾರಿಸುವಂತೆ ಮಾತನಾಡುತ್ತಾರೆ. ಕೊಲೆ, ಅತ್ಯಾಚಾರ ಆರೋಪಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸದೆ ಇರುವ ಕಾರಣ ಬೆಂಗಳೂರನ್ನು ಅತ್ಯಾಚಾರಿಗಳ ನಗರವಾಗಿ ರೂಪಿಸುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಸಿಲಿಕಾನ್ ಸಿಟಿಯ ಮಾನ ಮರ್ಯಾದೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಬೆಂಗಳೂರಿನಲ್ಲಿ ಮಹಿಳಾ ಸುರಕ್ಷತೆಯ ಪ್ರಶ್ನೆ ಗಂಭೀರವಾಗಿದೆ ಎಂದು ಅವರು ಆರೋಪಿಸಿದರು. ಮಹಿಳೆಯರ ವಿಚಾರವನ್ನು ಈ ಸರಕಾರ ಅತ್ಯಂತ ಲಘುವಾಗಿ ಪರಿಗಣಿಸಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

Facebook
Twitter
LinkedIn
WhatsApp
Email
Telegram
Print

Leave a Comment

Your email address will not be published. Required fields are marked *

Translate »
Scroll to Top