ಬೆಂಗಳೂರಿಗೆ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ ಕುರಿತಂತೆ ಸ್ಪಷ್ಟೀಕರಣ

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕೋವಿಡ್-19 ಎಂಬುದು ಒಂದು ಜಾಗತಿಕ ಸಾಂಕ್ರಾಮಿಕವಾಗಿದ್ದು, ಈ ವೈರಸ್ ‌ನ ಹೊಸ ರೂಪಾಂತರಿಯು (B.1.1.529 – Omicron) ದಕ್ಷಿಣ ಆಫ್ರಿಕಾ, ಇಂಗ್ಲ್ಯಾಂಡ್ ಸಹಿತ ಹಲವು ದೇಶಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿನ ಹೆಚ್ಚಳಕ್ಕೆ ಕಾರಣವಾಗಿದೆ.ಭಾರತ ಸರ್ಕಾರವು 12 ದೇಶಗಳನ್ನು ಹೈ ರಿಸ್ಕ್ ದೇಶಗಳೆಂದು ಗುರುತಿಸಿದೆ ಮತ್ತು ಒಮಿಕ್ರಾನ್ ತಳಿಯ ಹರಡುವಿಕೆಯ ನಿಯಂತ್ರಣಕ್ಕೆ ಕ್ರಮಗಳನ್ನು ನಿಗದಿಪಡಿಸಿದೆ. ಆ ಪ್ರಕಾರ, ಕರ್ನಾಟಕ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಹೈ ರಿಸ್ಕ್ ದೇಶಗಳಿಂದ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಪರೀಕ್ಷೆ, ಸ್ಕ್ರೀನಿಂಗ್ ನಡೆಸಲು ಕ್ರಮಗಳನ್ನು ಕೈಗೊಂಡಿದ್ದು, ಪಾಸಿಟಿವ್ ದೃಢಪಟ್ಟರೆ, ತಕ್ಷಣವೇ ಆಸ್ಪತ್ರೆ ಐಸೊಲೇಶನ್, ಉಳಿದವರಿಗೆ ಮನೆಯಲ್ಲಿ ಸೆಲ್ಫ್ ಐಸೊಲೇಶನ್ ಮತ್ತು 8 ದಿನಗಳ ಬಳಿಕ ಮತ್ತೆ ಪರೀಕ್ಷೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.

ಹೈ ರಿಸ್ಕ್ ದೇಶಗಳಿಂದ ಬರುವವರನ್ನು ತಕ್ಷಣ ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಡಿಸುವಂತೆ ಹಲವು ಸಲಹೆಗಳು ಬಂದಿದ್ದರೂ, ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಯಾವುದೇ ದೇಶಗಳಿಂದ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಬಿಬಿಎಂಪಿಯು ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ ಅನ್ನು ಇದುವರೆಗೆ ನಿಗದಿಪಡಿಸಿಲ್ಲ.ಈ ಬಗ್ಗೆ ಪ್ರಸಾರ/ಪ್ರಕಟವಾಗಿರುವ ವರದಿಗಳು ತಪ್ಪು ಮಾಹಿತಿಯುಳ್ಳವಾಗಿದ್ದು, ಸತ್ಯಕ್ಕೆ ದೂರವಾಗಿವೆ. ಈ ಬಗ್ಗೆ ಯಾವುದೇ ನಿರ್ಧಾರವು ತಜ್ಞರೊಂದಿಗೆ ಸಮಾಲೋಚಿಸಿ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗಸೂಚಿ ಪ್ರಕಾರ ಕೈಗೊಳ್ಳಲಾಗುತ್ತದೆ. ಸಂಬಂಧಪಟ್ಟ ಎಲ್ಲರ ಅವಗಾಹನೆಗಾಗಿ ಈ ಸ್ಪಷ್ಟನೆ ನೀಡಲಾಗಿದೆ.

Leave a Comment

Your email address will not be published. Required fields are marked *

Translate »
Scroll to Top