ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಬಗ್ಗೆ ಸಂತಸ ವ್ಯಕ್ತಪಡಿಸಿದ ಜರ್ಮನಿಯ ಕ್ರಿಸ್ಟಿನ್ ಟೋಎಟ್ಜ್ಕೇ

Kannada Nadu
ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಬಗ್ಗೆ ಸಂತಸ ವ್ಯಕ್ತಪಡಿಸಿದ ಜರ್ಮನಿಯ ಕ್ರಿಸ್ಟಿನ್ ಟೋಎಟ್ಜ್ಕೇ

ಬೆಂಗಳೂರು : ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿಯ ನಿಟ್ಟಿನಲ್ಲಿ ಭಾರತ ಮತ್ತು ಜರ್ಮನಿಯ ಸಹಕಾರ ವೃಧಿಸುವುದಕ್ಕಾಗಿ ಭಾರತಕ್ಕೆ ಭೇಟಿ ನೀಡಿರುವ ತಂಡವು ಇಂದು ಬೆಂಗಳೂರಿನ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಿದ ನಂತರ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಭೇಟಿಯಾಗಿ ಚರ್ಚಿಸಿದರು.

ದಾನಮಾಡಿದ ಮಾನವನ ಅಂಗಗಳನ್ನು ಮೆಟ್ರೋ ಮೂಲಕ ಕೆಲವೇ ನಿಮಿಷಗಳಲ್ಲಿ ಆಸ್ಪತ್ರೆಗಳಿಗೆ ತಲುಪಿಸುವ ವ್ಯವಸ್ಥೆಯನ್ನು ತಿಳಿದು ಆಶ್ಚರ್ಯ ಪಟ್ಟರು ಹಾಗೂ ಮೆಟ್ರೋ ವ್ಯವಸ್ಥೆಯಿಂದ ವಿಶೇಷ ಚೇತನ ವ್ಯಕ್ತಿಗಳು, ಹಿರಿಯ ನಾಗರೀಕರಿಗೆ ಬಹಳ ಅನುಕೂಲವಾಗಿದೆ ಎಂದು ವಿಶೇಷವಾಗಿ ತಿಳಿಸಿದರು.

ಹಸಿರು ಮತ್ತು ಸುಸ್ಥಿರ ಇಂಧನವನ್ನು ಬಳಸಿಕೊಳ್ಳಲು ಹೆಚ್ಚು ಕಂಪನಿಗಳು ಆಸಕ್ತಿ ಹೊಂದಿವೆ. ರಾಜ್ಯದಲ್ಲಿ ಹಲವಾರು ಕಡೆಗಳಲ್ಲಿ ಬರಡು ಭೂಮಿ ಇದೆ. ಅಲ್ಲಿ ಸೋಲಾರ್ ಅಥವಾ ಪವನ್ ವಿದ್ಯುತ್ಚಕ್ತಿ ಉತ್ಪಾದಿಸಲು ಅವಕಾಶಗಳಿವೆ. ಇದಕ್ಕಾಗಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಜರ್ಮನಿ ತಂಡವನ್ನು ಪರಿಚಯಿಸುವಂತೆ ಮುಖ್ಯ ಕಾರ್ಯದರ್ಶಿಯವರು ಅಧಿಕಾರಿಗಳಿಗೆ ತಿಳಿಸಿದರು.

ಬೆಂಗಳೂರು ನಗರ ಒಳಚರಂಡಿ ಮಂಡಳಿಯಿಂದ ಪ್ರಸ್ತುತ ಕೈಗೊಳ್ಳಲಾಗುತ್ತಿರುವ ಒಳಚರಂಡಿ ನೀರಿನ ಸಂಸ್ಕರಣೆ, ಮರುಬಳಕೆ, ಕೆರೆಗಳಲ್ಲಿ ಸಂಗ್ರಹವಾಗುವ ಹೂಳನ್ನು ತೆಗೆಯುವ ವಿಧಾನಗಳ ಕುರಿತು ವಿವರಿಸಿದ ನಗರಾಭಿವೃದ್ದಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ತುಷಾರ ಗಿರಿನಾಥ ಅವರು ಈ ವ್ಯವಸ್ಥೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಇದರಲ್ಲಿ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಜರ್ಮನಿಯ ಸಹಭಾಗಿತ್ವವನ್ನು ಕೋರಿದರು.

ಜರ್ಮನ್ ತಂಡವು ಸೆಂಟರ್ ಆಫ್ ಎಕ್ಸ್ಲೆನ್ಸ್ ಬಗ್ಗೆ ವಿವರಿಸುತ್ತಾ, ಈಗಾಗಲೇ ಭಾಷ್, ಸಿಮನ್ಸ್ ನಂತರ ಹಲವಾರು ಜರ್ಮನ್ ಕಂಪನಿಗಳು ಬಹಳ ವರ್ಷಗಳಿಂದ ಬೆಂಗಳೂರಿನಲ್ಲಿ ಇವೆ. ಇತ್ತೀಚೆಗೆ ಬೆಂಗಳೂರು ಟೆಕ್ ಸಮಾವೇಶದಲ್ಲಿ ಚರ್ಚಿಸಿದ ಹಾಗೆ ಕೃತಕ ಬುದ್ಧಿಮತ್ತೆಯಲ್ಲಿ ತಂಡವು ಆಸಕ್ತಿ ವಹಿಸುತ್ತಿದೆ. ಜೊತೆಯಲ್ಲಿ ಮೂಲಸೌಕರ್ಯ ಯೋಜನೆಗಳು, ಟನಲ್ ರಸ್ತೆಗಳು, ಮೆಟ್ರೋ ಹಂತ-3 ಯೋಜನೆಗಳಲ್ಲೂ ಸಹಭಾಗಿತ್ವ ವಹಿಸುವುದಾಗಿ ತಿಳಿಸಿತು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";