ಮೇಷ ರಾಶಿ: ಬೆಲೆಬಾಳುವ ವಸ್ತ್ರ , ಆಭರಣಗಳನ್ನು ಖರೀದಿಸುತ್ತೀರಿ.ಆದಾಯ ಮಾರ್ಗಗಳು ಹೆಚ್ಚಾಗುತ್ತವೆ.ವೃತ್ತಿ ಮತ್ತು ಉದ್ಯೋಗ ವ್ಯವಹಾರಗಳು ಲಾಭದಾಯಕವಾಗಿ ಸಾಗುತ್ತವೆ.ಸುತ್ತಮುತ್ತಲಿನವರೊಂದಿಗೆ ಸಣ್ಣಪುಟ್ಟ ವಿವಾದಗಳು ಉಂಟಾಗುತ್ತವೆ. ಹೊಸ ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭ ದೊರೆಯುತ್ತದೆ. ಅನಾರೋಗ್ಯ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ.
ವೃಷಭ ರಾಶಿ : ವೃತ್ತಿ ಮತ್ತು ಉದ್ಯೋಗಗಳಲ್ಲಿ ಹೆಚ್ಚುವರಿ ಜವಾಬ್ದಾರಿಗಳ ನಡುವೆಯೂ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತೀರಿ.ವ್ಯಾಪಾರದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಲಾಭವನ್ನು ಪಡೆಯುತ್ತೀರಿ.ಕುಟುಂಬ ಸದಸ್ಯರೊಂದಿಗಿನ ವಿವಾದಗಳು ನಿವಾರಣೆಯಾಗುತ್ತವೆ. ಸಮಾಜ ಸೇವೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತೀರಿ. ಹಹೊಸ ಸಾಲದ ಪ್ರಯತ್ನಗಳು ಕೂಡಿ ಬರುವುದಿಲ್ಲ.
ಮಿಥುನ ರಾಶಿ: ಕಠಿಣ ಪರಿಶ್ರಮದಿಂದ ದೂರ ಪ್ರದೇಶದ ಪ್ರಯಾಣಗಳನ್ನು ಮಾಡುತ್ತೀರಿ.ಪ್ರತಿಯೊಂದು ಸಣ್ಣ ವ್ಯವಹಾರಕ್ಕೂ ಬಹಳ ಸಮಯ ಕಾಯಬೇಕಾಗುತ್ತದೆ.ಆರ್ಥಿಕ ಒತ್ತಡ ಹೆಚ್ಚಾಗುತ್ತದೆ.ವೃತ್ತಿ,ಉದ್ಯೋಗದಲ್ಲಿ ಅಧಿಕಾರಿಗಳ ಕೋಪಕ್ಕೆ ಒಳಗಾಗುತ್ತೀರಿ.ವ್ಯಾಪಾರಗಳು ಮಂದಗತಿಯಲ್ಲಿ ಸಾಗುತ್ತವೆ. ದೈವಿಕ ಚಿಂತನೆ ಹೆಚ್ಚಾಗುತ್ತದೆ. ಹೊಸ ಸಾಲಗಳನ್ನು ಮಾಡದಿರುವುದು ಉತ್ತಮ.
ಕಟಕ ರಾಶಿ: ಕೈಗೊಂಡ ಕೆಲಸಗಳಲ್ಲಿ ಅಡೆತಡೆಗಳು ನಿವಾರಣೆಯಾಗುತ್ತವೆ. ಕುಟುಂಬ ಸದಸ್ಯರ ಸಹಕಾರದಿಂದ ನೀವು ಕೆಲವು ಸಮಸ್ಯೆಗಳಿಂದ ಹೊರಬರುತ್ತೀರಿ. ಶೈಕ್ಷಣಿಕ ಕಾರ್ಯಕ್ರಮಗಳಿಗೆ ಆಹ್ವಾನಗಳು ದೊರೆಯುತ್ತವೆ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗೂತ್ತದೆ.ವೃತ್ತಿ ಪರ ಉದ್ಯೋಗಗಳು ಸುಗಮವಾಗಿ ಸಾಗುತ್ತವೆ.ವ್ಯಾಪಾರದಲ್ಲಿ ಮಿಶ್ರಮ ಫಲ ಸಿಗುತ್ತದೆ.
ಸಿಂಹ ರಾಶಿ : ದೀರ್ಘಕಾಲದ ಅನಾರೋಗ್ಯ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ.ಕುಟುಂಬ ಸದಸ್ಯರಿಂದ ಆರ್ಥಿಕ ಸಹಾಯ ದೊರೆಯುತ್ತದೆ. ಬಂಧು ಮಿತ್ರರೊಂದಿಗಿನ ವಿವಾದಗಳು ದೂರವಾಗುತ್ತವೆ. ವೃತ್ತಿ ಉದ್ಯೋಗಗಳಲ್ಲಿ ಅಡೆತಡೆಗಳು ಎದುರಾದರೂ ಆತ್ಮಸ್ಥೈರ್ಯದಿಂದ ಕೆಲಸವನ್ನು ಪೂರ್ಣಗೊಳಿಸುತ್ತೀರಿ. ಕೊಳ್ಳು/ಮಾರಾಟಗಳು ಲಾಭದಾಯಕವಾಗಿ ಸಾಗುತ್ತವೆ.
ಕನ್ಯಾ ರಾಶಿ : ಪ್ರಮುಖ ವಿಷಯಗಳಲ್ಲಿ ಸಹೋದರರೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ.ಸ್ತ್ರೀ ವಿಚಾರದಲ್ಲಿ ಜಾಗ್ರತೆ ವಹಿಸುವುದು ಉತ್ತಮ.ಸಂಗಾತಿಯ ವಿಷಯದಲ್ಲಿ ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ. ಕೈಗೊಂಡ ಕೆಲಸ ಸಕಾಲದಲ್ಲಿ ಪೂರ್ಣಗೊಳ್ಳದೆ ಮಾನಸಿಕ ಕಿರಿಕಿರಿಗಳು ಹೆಚ್ಚಾಗುತ್ತವೆ.ನಿರುದ್ಯೋಗ ಪ್ರಯತ್ನಗಳು ಕೂಡಿ ಬರುವುದಿಲ್ಲ.
ತುಲಾ ರಾಶಿ: ಜೀವನ ಸಂಗಾತಿಯ ಆರೋಗ್ಯದ ವಿಚಾರದಲ್ಲಿ ಜಾಗ್ರತೆ ವಹಿಸಬೇಕು.ಪ್ರಯಾಣದಲ್ಲಿ ರಸ್ತೆ ಅಪಘಾತವಾಗುವ ಸೂಚನೆಗಳಿವೆ. ಹೊಸ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಅಡೆತಡೆಗಳು ಉಂಟಾಗುತ್ತವೆ.ದೂರದಲ್ಲಿರುವ ಬಂಧುಗಳಿಂದ ಕೆಲವು ವಿಷಯಗಳು ತಿಳಿಡು ಬರುತ್ತವೆ. ವೃತ್ತಿ ಮತ್ತು ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಸಮಸ್ಯೆಗಳಿರುತ್ತವೆ.
ವೃಶ್ಚಿಕ ರಾಶಿ: ಮಕ್ಕಳ ವಿದ್ಯಾಭ್ಯಾಸದ ವಿಷಯಗಳು ಅನುಕೂಲಕರವಾಗಿ ಸಾಗುತ್ತವೆ. ಎಲ್ಲಾ ಕ್ಷೇತ್ರಗಳಲ್ಲಿರುವವರಿಗೂ ತಕ್ಕ ಮನ್ನಣೆ ದೊರೆಯುತ್ತದೆ.ವೃತ್ತಿಪರ ಕೆಲಸಗಳಲ್ಲಿ ಸಹೋದ್ಯೋಗಿಗಳಿಂದ ಸಹಾಯ ಮತ್ತು ಸಹಕಾರಗಳು ದೊರೆಯುತ್ತದೆ.ಬಂಧು ಮಿತ್ರರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಸಿಗುತ್ತವೆ. ಆರ್ಥಿಕವಾಗಿ ಹೆಚ್ಚಿನ ಪ್ರಗತಿ ಸಾಧಿಸುತ್ತೀರಿ.
ಧನುಸ್ಸು ರಾಶಿ : ಸ್ನೇಹಿತರೊಂದಿಗೆ ಭೋಜನ, ಮನರಂಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತೀರಿ.ಹಠಾತ್ ಧನ ಲಾಭ ಉಂಟಾಗುತ್ತದೆ. ಕೈಗೊಂಡ ಕೆಲಸಗಳಲ್ಲಿ ಬುದ್ಧಿವಂತಿಕೆಯಿಂದ ಎಲ್ಲರನ್ನೂ ನಿಮ್ಮ ಮಾತಿನ ಮೇಲೆ ನಿಲ್ಲುವಂತೆ ಮಾಡುತ್ತೀರಿ. ಮಾನಸಿಕವಾಗಿ ಹೆಚ್ಚು ಉತ್ಸುಕರಾಗಿರುತ್ತೀರಿ. ವ್ಯಾಪಾರದಲ್ಲಿ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು.
ಮಕರ ರಾಶಿ: ಮಿತ್ರರೊಂದಿಗಿನ ವಿವಾದಗಳನ್ನು ಪರಿಹರಿಸಿಕೊಳ್ಳುತ್ತೀರಿ. ಕೌಟುಂಬಿಕ ವಾತಾವರಣ ಶಾಂತಿಯುತವಾಗಿರುತ್ತದೆ. ಮಕ್ಕಳ ವಿವಾಹ ಉದ್ಯೋಗ ಪ್ರಯತ್ನಗಳು ಕೂಡಿ ಬರುತ್ತವೆ. ವೃತ್ತಿ ವ್ಯವಹಾರದಲ್ಲಿ ನಷ್ಟವನ್ನು ನಿವಾರಿಸುತ್ತೀರಿ.ಆರೋಗ್ಯದ ಕಡೆ ಹೆಚ್ಚಿನ ಗಮನವಿರಲಿ.ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ.
ಕುಂಭ ರಾಶಿ: ಮನೆಯಲ್ಲಿ ಅಧ್ಯಾತ್ಮಿಕ ಸೇವಾ ಕಾರ್ಯಕ್ರಮಗಳನ್ನು ನಿರ್ವಹಿಸುತ್ತೀರಿ.ಮಿತ್ರರಿಗೆ ಆರ್ಥಿಕ ನೆರವು ನೀಡುತ್ತೀರಿ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗುತ್ತಾರೆ.ದೈಹಿಕವಾಗಿ ಮತ್ತು ಮಾನಸಿಕವಾಗಿ ಉತ್ಸಾಹದಯಕ ವಾತಾವರಣ ಇರುತ್ತದೆ. ವೃತ್ತಿಪರ ವ್ಯವಹಾರಗಳಲ್ಲಿ ಹೊಸ ಯೋಜನೆಗಳನ್ನು ಜಾರಿಗೊಳಿಸಿ,ಲಾಭವನ್ನು ಪಡೆಯುತ್ತೀರಿ.
ಮೀನ ರಾಶಿ: ನಿರೀಕ್ಷೆಯಂತೆ ಯೋಜಿತ ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ.ವೌಲ್ಯದ ವಸ್ತು ಮತ್ತು ವಾಹನ ಸೌಕರ್ಯಗಳು ದೊರೆಯುತ್ತವೆ. ಬೆಲೆಬಾಳುವ ವಸ್ತುಗಳಿಗೆ ಹಣ ವ್ಯಯವಾಗುತ್ತದೆ. ಕೊಳ್ಳು ,ಮಾರಾಟದಲ್ಲಿ ಲಾಭ ದೊರೆಯುತ್ತದೆ. ವ್ಯಾಪಾರ ವಹಿವಾಟಿನ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು.ಉದ್ಯೋಗ ವಿಚಾರದಲ್ಲಿ ಆತುರದ ನಿರ್ಧಾರಗಳನ್ನು ಬದಲಾಯಿಸಬೇಕು.