ಸಂಡೂರು : 35 ವರ್ಷ ಮೇಲ್ಪಟ್ಟವರು ಪ್ರತಿ ಆರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಮಧುಮೇಹ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಡಾ. ಗೋಪಾಲ್ ರಾವ್ ತಿಳಿಸಿದರು ಅವರು ತೋರಣಗಲ್ಲು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ 2021 ರ ವಿಶ್ವ ಮಧುಮೇಹ ದಿನಾಚರಣೆ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಮಧುಮೇಹ ಟೈಪ್1 ಅನುವಂಶಿಕವಾಗಿ ಮಕ್ಕಳಲ್ಲಿ ಕಂಡು ಬರುತ್ತದೆ ಇವರಿಗೆ ಇನ್ಸುಲಿನ್ ಕಡ್ಡಾಯವಾಗಿ ತೆಗೆದು ಕೊಳ್ಳಬೇಕಾಗುತ್ತದೆ, ಟೈಪ್ 2 ಮೂವತ್ತೈದು ವರ್ಷ ಮೇಲ್ಪಟ್ಟವರಿಗೆ ಕಂಡುಬರುತ್ತದೆ ಇತ್ತಿಚೀನ ದಿನಗಳಲ್ಲಿ ಆರೋಗ್ಯಕರ ಜೀವನ ಶೈಲಿ ಇಲ್ಲದ ಕಾರಣ ಮತ್ತು ಅತೀ ಅಹಾರ ಸೇವನೆ, ಕರಿದ ಪದಾರ್ಥಗಳ ಸೇವನೆ, ಕ್ರಿಯಾತ್ಮಕ ಚಟುವಟಿಕೆ ಇರದೇ ಒಂದೇ ಕಡೆ ಕುಳಿತು ಕೊಳ್ಳುವುದು, ಬೊಜ್ಜು, ಟಿವಿ ನೋಡುತಾ ಊಟ ಮಾಡುವುದು ಇಂತಹ ಅನೇಕ ಕಾರಣಗಳಿಂದ ಮಧುಮೇಹ ಉಂಟಾಗುತ್ತದೆ, ಪ್ರತಿ ಆರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಪರೀಕ್ಷೆ ಮಾಡಿಸಬೇಕು ಎಂದು ಸೂಚಿಸಿದರು.ಹಿಂದೆ 60-70 ವರ್ಷ ವಯಸ್ಸಿನವರಿಗೆ ಕಂಡು ಬರುತ್ತಿದ್ದ ಮಧುಮೇಹ 35 ರ ಅಸುಪಾಸಿಗೆ ಬಂದು ನಿಂತಿದೆ ಎಂದು ತಿಳಿಸಿದರು.

ನಂತರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಮಧುಮೇಹ ಇದೆ ಎಂಬುದು ತಿಳಿದ ನಂತರ ನಿರಂತರ ಚಿಕಿತ್ಸೆ ಚಿಕಿತ್ಸೆ ಪಡೆಯಬೇಕು, ಕೆಲವು ದಿನ ಚಿಕಿತ್ಸೆ ಪಡೆದು ಕೊಂಡ ನಂತರ ಸಕ್ಕರೆ ಅಂಶ ನಾರ್ಮಲ್ ಇದೆ ಎಂದು ಚಿಕಿತ್ಸೆ ನಿಲ್ಲಿಸ ಬಾರದು ಇದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಏರುಪೇರಾಗಿ ಇತರೆ ಅಂಗಾಂಗಳಿಗೆ ತೊಂದರೆ ಉಂಟಾಗುತ್ತದೆ , ಮಾತ್ರೆಗಳು ಮತ್ತು ಇನ್ಸುಲಿನ್ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯುತ್ತದೆ ಇದರ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರುಪ್ರತಿವರ್ಷ ನವಂಬರ್ 14 ರಂದು ಜಾಗೃತಿ ಮೂಡಿಸಲಾಗುತ್ತದೆ ಮತ್ತು ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸಲಾಗುತ್ತದೆ, ನಿತ್ಯ ವ್ಯಾಯಾಮ, ಬಿರುಸಿನ ನಡಿಗೆ, ಸೈಕಲ್ ತುಳಿತ, ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ ಎಂದು ಸಲಹೆ ನೀಡಿದರುಈ ಸಂದರ್ಭದಲ್ಲಿ ಡಾ.ದೀಪಾ ಪಾಟೀಲ್, ಡಾ.ಆಯೇಶಾ, ಆರೋಗ್ಯ ಸುರಕ್ಷಾಧಿಕಾರಿ ಶಕೀಲ್ ಅಹಮದ್, ಮಂಜುನಾಥ್, ವೆಂಕಪ್ಪ, ಮಾರೇಶ, ಶಶಿಧರ, ಶಿವಕುಮಾರ್, ಚೆಲುವರಾಜ, ರತ್ನಮ್ಮ, ಆಶಾ ಕಾರ್ಯಕರ್ತೆಯರಾದ ನೀಲಮ್ಮ, ಹನುಮಂತಮ್ಮ, ಲಕ್ಷ್ಮಿ, ಎರ್ರಮ್ಮ, ಮೇಘನಾ, ಶಿವಲಿಂಗಮ್ಮ, ಮತ್ತು ಸಂತ ಮೇರಿ ನಿರಾಹಾರಿ ಸಂಸ್ಥೆಯ ಗೋರಕ್ ನಾಥ್ ಹಾಗು ಸದಸ್ಯರು, ಇತರರು ಭಾಗವಹಿಸಿದ್ದರು.