ಸಮಾಜದ ಹಿತಕ್ಕಾಗಿ ಕೊಡುವ ಕೊಡುಗೈದಾನಿಗಳು

ದೇವನಹಳ್ಳಿ:ನಮ್ಮ ಭಾರತೀಯ ಪರಂಪರೆಯಲ್ಲಿ ನಮ್ಮ ದೇಹಿಕ ಆರೋಗ್ಯಕ್ಕೆ ನಮ್ಮ ಆಚಾರ ವಿಚಾರ, ನಡವಳಿಕೆ ಕಾರಣವಾದರೆ, ಮಾನಸಿಕ ಆರೋಗ್ಯಕ್ಕೆ ದೇವಾಲಯಗಳು ಕಾರಣ. ದೇವಾಲಯಕ್ಕೆ ಹೋದಾಗ ಮನಸ್ಸು ಶುದ್ಧವಾಗುತ್ತದೆ ಎಂದು ತುಮಕೂರು ಸಿದ್ದಗಂಗಾ ಕ್ಷೇತ್ರದ ಸಿದ್ದಲಿಂಗಸ್ವಾಮಿಗಳು ತಿಳಿಸಿದರು ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಗಾಂಧಿ ಚೌಕದಲ್ಲಿ ಶ್ರೀ ನಗರೇಶ್ವರಸ್ವಾಮಿ ಸೇವಾ ಟ್ರಸ್ಟ್ಅಯೋಧ್ಯಾ ನಗರ ಶಿವಾಚಾರ ವೈಶ್ಯ ನಗರ್ತ ಸಂಘದ ವತಿಯಿಂದ ನಗರೇಶ್ವರಸ್ವಾಮಿ ದೇವಾಲಯ ಪ್ರಾಂಗಣದಲ್ಲಿ ಸುಸಜ್ಜಿತವಾದ ದಾನಿಗಳಿಂದ ನಿರ್ಮಿಸಿದ ಶ್ರೀ ನಗರೇಶ್ವರಸ್ವಾಮಿ ಪ್ರಾರ್ಥನಾ ಮಂದಿರದ ಭವನವನ್ನು ಶ್ರೀ ಸಿದ್ದಗಂಗಾ ಕ್ಷೇತ್ರದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ತಮ್ಮ ಅಮೃತ ಹಸ್ತದಿಂದ ಉದ್ಘಾಟಿಸಿ ಮಾತನಾಡಿ, ದೇಹದ ಕೊಳೆಯನ್ನು ಸಾಬೂನಿನಿಂದ ತೊಳೆದರೆ ಮನಸ್ಸಿನ ಕೊಳೆಯನ್ನು ಸತ್ಸಂಗಗಳು ಕಾರಣ. ಗ್ರಂಥಗಳ ಅಧ್ಯಯನ ಕಾರಣ. ಮನಸ್ಸು ದುಬರ್ಲವಾಗಿದ್ದರೆ ದೇಹವೂ ದುರ್ಬಲ ವಾಗುತ್ತದೆ. ಆರೋಗ್ಯವಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಬಸವಣ್ಣನವರ ಮಾತಿನಂತೆ ಆಚಾರವೇ ಸ್ವರ್ಗ ಅನಾಚಾರವೇ ನರಕ. ಭಾರತೀಯ ಪರಂಪರೆಯನ್ನು ಉಳಿಸಿಕೊಂಡು ಹೋಗುವುದು ನಮ್ಮ ಕರ್ತವ್ಯವಾಗಿರಲಿ. ಪಟ್ಟಣದ ನಗರೇಶ್ವರ ದೇವಾಲಯದಲ್ಲಿ ನಿರ್ಮಾಣವಾಗಿರುವ ಪ್ರಾರ್ಥನಾ ಮಂದಿರ ಇಲ್ಲಿನ ಬಹಳಷ್ಟು ದಾನಿಗಳ ಸಂಘದ ಸಹಕಾರದಿಂದ ಆಗಿದ್ದು, ಕೈ ಬಂಗಾರದ ಬಳೆ ಇಂದ ಶೋಭಿಸುವುದಿಲ್ಲ. ಕೊಡುವ ದಾನದಿಂದ ಶೋಭಿಸುತ್ತದೆ ಎಂದು ತಿಳಿಸಿದರು

ನಾವು ತಂತ್ರಜ್ಞಾನ ದಲ್ಲಿ ಎಷ್ಟೇ ಮುಂದುವರೆದರು ಯಾವುದೇ ದೇಶ ಒಂದು ಉನ್ನತ ಮಟ್ಟದಲ್ಲಿ ಇರುವುದಕ್ಕೆ ಕಾರಣ ತತ್ವಜ್ಞಾನ ಮತ್ತು ಆಧ್ಯಾತ್ಮಿಕತೆ ಇಂದ. ಇಡೀ ವಿಶ್ವದ ಜನತೆಗೆ ಸಮಾಜ, ಸಮಾನತೆ, ಸಾಮರಸ್ಯ, ಹೆಣ್ಣನ್ನು ಗೌರವಿಸುವ ರೀತಿ ತಿಳಿ ಬಂದಿದ್ದು ತತ್ತ್ವ ಜ್ಞಾನದಿಂದ, ನಮ್ಮ ದೇಶದ ಧರ್ಮದಲ್ಲಿ ಇರುವಂತಹ ಸತ್ವ, ಇಡೀ ವಿಶ್ವಕ್ಕೆ ಪ್ರೀತಿ, ಸಹನೆ, ಶಾಂತಿಯನ್ನು ಭೋದಿಸುವ ಶಕ್ತಿ ಪಡೆದಿದೆ. ಇಡೀ ದೇಶದಲ್ಲಿ ಅನೇಕ ಧರ್ಮ, ಭಾಷೆ, ಆಚರಣೆ ಬೇರೆ ಇದ್ದರು ಅನ್ಯೋನ್ಯ ವಾಗಿ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ನಮ್ಮ ಧರ್ಮ ಕಾರಣ. ಶಿವನನ್ನು ಪೂಜಿಸುವ ನಾವು ಶಿವನನ್ನು ಆತನ ಶಕ್ತಿಯನ್ನು ನಂಬಿ ಭಕ್ತರಾಗಿದ್ದೇವೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಮಾತನಾಡಿ, ದಯೆ ಕರುಣೆ ತುಂಬಿದ ಹೃದಯವೇ ದೇವಾಲಯ. ಕರುಣೆ ದಯೆ ತೋರುವ ಮನಸ್ಸು ಹೃದಯ ಎಲ್ಲರಿಗೂ ಇರುವುದಿಲ್ಲ. ಎಲ್ಲರೂ ಬೇಡುವರೇ ಹೊರತು ದಾನಿಗಳಾಗಲಾರರು. ಬಸವಣ್ಣನವರು ಹೇಳಿದಂತೆ ದಯವಿಲ್ಲದ ಧರ್ಮ ಆವುದಯ್ಯ? ಸಮಾಜದಲ್ಲಿ ಹುಟ್ಟಿ ದೇವರು ಉತ್ತಮವಾದುದನ್ನು ಕರುಣಿಸಿರುವಾಗ ಬಡವರಿಗೆ ದೀನ ದಲಿತರಿಗೆ ಸಹಾಯ ಮಾಡಬೇಕು. ಇದ್ದು ಹೋಗುವ ಒಳಗೆ ನಾವು ಮಾಡುವ ಸೇವೆಯೇ ಜನರ ಮನಸ್ಸಿನಲ್ಲಿ ಉಳಿಯುತ್ತದೆ. ಅವರಿಗೂ ಒಂದು ನೆಲೆಯಾಗುತ್ತದೆ. ದೇವರ ಕೃಪೆಗೆ ಪಾತ್ರರಾಗಲು ನಾವು ಇತರರ ಕಷ್ಟಕ್ಕೆ ನೆರವಾಗಬೇಕು ಎಂದು ತಿಳಿಸಿದರು

ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ, ವಿಜಯಪುರ ದೇವಾಲಯಗಳ ನಗರಿ ಎಂದು ಹೆಸರು ಪಡೆಯುವ ಜೊತೆಗೆ ವಾಣಿಜ್ಯ ನಗರಿಯಾಗಿಯೂ ಯಶಸ್ಸು ಹೊಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದೇವನಹಳ್ಳಿ ಮತ್ತು ವಿಜಯಪುರ ದೊಡ್ಡ ಪುರಸಭೆ ಹೊಂದಿ ಅವಳಿ ಪಟ್ಟಣದಂತೆ ಉತ್ತಮ ಆಡಳಿತ ನಡೆಸುತ್ತಿದೆ. ಸಾಮಾಜಿಕವಾಗಿ, ಶೈಕ್ಷಣಿಕ ವಾಗಿ, ರಾಜಕೀಯವಾಗಿ ಅಭಿವೃದ್ಧಿ ಹೊಂದುತ್ತಿರುವುದು ಶ್ಲಾಘನೀಯ. ಆದರೆ ಇನ್ನು ಹೆಚ್ಚಿನ ಅಭಿವೃದ್ಧಿ ಗೆ ಉಸ್ತುವಾರಿ ಸಚಿವರಾದ ಡಾ. ಕೆ. ಸುಧಾಕರ್ ಅವರು ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಪುರಸಭಾ ವ್ಯಾಪ್ತಿಯಲ್ಲಿ ಹೆಚ್ಚು ಮರಗಿಡಗಳನ್ನು ಬೆಳೆಸಲು, ಕೆರೆ, ಸನ್ಮಾಶನಗಳನ್ನು ಉಳಿಸುಕೊಳ್ಳುವ ನಿಟ್ಟಿನಲ್ಲಿ ಯೋಜನೆ ರೂಪಿಸಲು ಸಹಕಾರ ನೀಡುತ್ತಿದ್ದಾರೆ. ನಗರೋತ್ಥಾನ ಅನುದಾನದಡಿ ಪೌರಾಡಳಿತ ಸಚಿವರಾದ ಎಂಟಿಬಿ ನಾಗರಾಜ್ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ, ಪಟ್ಟಣಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದಾರೆ. ಹಾಗಾಗಿ ನಮ್ಮ ಜಿಲ್ಲೆ, ತಾಲ್ಲೂಕು ಸರ್ವತೋಮುಖ ಅಭಿವೃದ್ಧಿ ಆಗಬೇಕೆನ್ನುವುದು ನನ್ನ ಗುರಿಯಾಗಿದ್ದು, ಎಲ್ಲರ ಸಹಕಾರದಿಂದ ಇಂದಿನ ಒಂದು ಪುಣ್ಯ ಕಾರ್ಯದಲ್ಲಿ ಭಾಗಿಯಾಗುವ ಮೂಲಕ ಒಂದು ನಿರ್ದಿಷ್ಟ ಗುರಿಯ ಮೂಲಕ ಹೆಜ್ಜೆಗಳನ್ನು ಇಡೋಣ ಎಂದು ತಿಳಿಸಿದರು

ಮುತ್ತೈದೆಯರು ಪೂರ್ಣಕುಂಭ ಸಮೇತ ಶ್ರೀ ಗಳನ್ನು ಸ್ವಾಗತಿಸಿದರು. ಪ್ರಾರ್ಥನಾ ಮಂದಿರದ ನಿರ್ಮಾಣಕ್ಕೆ ಸಹಾಯ ನೀಡಿದ ದಾನಿಗಳನ್ನು ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ ಚಂದ್ರಣ್ಣ, ಕೆಪಿಸಿಸಿ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ವಿ.ನಾರಾಯಣಸ್ವಾಮಿ, ಪುರಸಭಾ ಅಧ್ಯಕ್ಷೆ ರಾಜೇಶ್ವರಿ , ಸದಸ್ಯ ಸತೀಶ್ ಕುಮಾರ್, ಜೆಡಿಎಸ್ ಟೌನ್ ಅಧ್ಯಕ್ಷ ಭಾಸ್ಕರ್, ಸಂಘದ ಪದಾಧಿಕಾರಿಗಳು ಮುಖಂಡರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top