ದೇವನಹಳ್ಳಿ: ವೇದಿಕೆಯಲ್ಲಿ ಪದವಿಯ ಪುರಸ್ಕಾರ ಪಡೆಯುವಾಗ ಪ್ರತಿಯೊಬ್ಬ ವಿದ್ಯಾರ್ಥಿಯ ಮುಖದಲ್ಲಿ ಇದ್ದ ಸಂತಸ ಇಂದು ರೀತಿಯ ಸಂಭ್ರಮಾಚರಣೆ ಇಂತಹ ಕ್ಷಣಕ್ಕೆ ಪುಳಕಿತರಾಗುವ ಭಾವ ಇದನ್ನು ಜೀವನದಲ್ಲಿ ಎಂದಿಗೂ ಕಳೆದುಕೊಳ್ಳದೇ ನಿಮ್ಮದೇ ದಿನವೆಂದು ಆಚರಿಸಿ ಆನಂದ ಪಡಿ ಎಂದು ಶ್ರೀ ನಗರೇಶ್ವರ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ. ಸತೀಶ್ ಕುಮಾರ್ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಗಿರಿಜಾ ಶಂಕರ ಕಲ್ಯಾಣ ಮಂಟಪದಲ್ಲಿ ಪ್ರಗತಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಏರ್ಪಡಿಸಿದ್ದ “ಗ್ರಾಜ್ಯುಯೇಷನ್ ಸೆರೆಮನಿ” ಪದವಿ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಪದವಿ ಪಡೆದಾಕ್ಷಣ ಜೀವನದ ಕಲಿಯುವ ಹಂತ ಅಷ್ಟಕ್ಕೇ ಮುಗಿಯುವುದಿಲ್ಲ. ಪದವಿ ವಿದ್ಯಾರ್ಥಿಗಳಿಗೆ ಜೀವನವನ್ನು ಗಂಭೀರವಾಗಿ ಪರಿಗಣಿಸುವ, ಭವಿಷ್ಯದ ಬಗ್ಗೆ ಆಲೋಚಿಸುವ ಶಕ್ತಿ ಬಂದಿರುತ್ತದೆ. ಆದರೆ ಉನ್ನತ ವಿದ್ಯಾಭ್ಯಾಸ ಕ್ಕೆ ಹೆಚ್ಚಿನ ಒತ್ತು ಕೊಡಲು ನಾನು ಪ್ರತಿ ವಿದ್ಯಾರ್ಥಿಗಳಿಗೆ ಸಲಹೆ ನೀಡುತ್ತೇನೆ, ಪ್ರೊತ್ಸಾಹಿಸುತ್ತೇನೆ. ಪ್ರಗತಿ ವಿದ್ಯಾ ಸಂಸ್ಥೆ ಪ್ರಥಮ ದರ್ಜೆ ಕಾಲೇಜನ್ನು ಆರಂಭಿಸಿ 20 ವರ್ಷಗಳಾಗಿದ್ದು, ಅನೇಕ ವಿದ್ಯಾರ್ಥಿಗಳು ಶಿಕ್ಷಣ ಪಡೆದು ಉತ್ತಮ ಭವಿಷ್ಯ ಹೊಂದಿದ್ದಾರೆ. ಪದವಿಯ ಪ್ರಮಾಣಪತ್ರಗಳನ್ನು ನೀಡಲು ನಿಜಕ್ಕೂ ಹೆಚ್ಚು ಸಂತಸ ಪಡುತ್ತೇನೆ. ಸಂಸ್ಥೆಯಲ್ಲಿ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆದು ಕೀರ್ತಿ ತರಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ.ಕುಮುದಾ ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಭ್ಯಾಸ ಮತ್ತು ಉತ್ತಮ ಭವಿಷ್ಯಕ್ಕೆ ಅನುಸರಿಸಬೇಕಾದ ಜವಾಬ್ದಾರಿಯ ಬಗ್ಗೆ ಮಾರ್ಗದರ್ಶನ ನೀಡಿ, ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರಗಳನ್ನು ವಿತರಿಸಿದರು
. ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ನಾಮಿನಿ ಡಾ.ರಾಜರೆಡ್ಡಿ, ಶ್ರೀ ನಗರೇಶ್ವರ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್.ಕೃಪಾಶಂಕರ್, ಪ್ರಗತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎನ್.ನಾಗರಾಜ್, ಕಾಲೇಜಿನ ಶಿಕ್ಷಕ ವೃಂದ, ಭೋದಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.